Bank Holiday March 2022: ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ

Bank Holiday March 2022: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI Holiday List) ವತಿಯಿಂದ ಜಾರಿಗೊಳಿಸಲಾಗಿರುವ ಈ ತಿಂಗಳ ಬ್ಯಾಂಕ್ (Bank) ರಜಾ ದಿನಗಳ ಪಟ್ಟಿಯ ಪ್ರಕಾರ, ಮಾರ್ಚ್ 2022ರಲ್ಲಿ (Bank Holidays In March) ಒಟ್ಟು 13 ದಿನಗಳ ಕಾಲ ಬ್ಯಾಂಕ್ ಬಂದ್ ಇರಲಿವೆ. 

Written by - Nitin Tabib | Last Updated : Mar 14, 2022, 02:23 PM IST
  • ಮಾರ್ಚ್ 2022ರಲ್ಲಿ 13 ದಿನಗಳ ಕಾಲ ಬ್ಯಾಂಕ್
  • ರಜಾ ದಿನಗಳ ಪಟ್ಟಿ ಬಿಡುಗಡೆಗೊಳಿಸಿದ RBI
  • ಈ ವಾರ ಸತತ 4 ದಿನಗಳು ಬ್ಯಾಂಕ್ ಬಂದ್ ಇರಲಿವೆ
Bank Holiday March 2022: ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ title=
Bank Holidays List (File Photo)

Bank Holiday March 2022: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI Holiday List) ವತಿಯಿಂದ ಜಾರಿಗೊಳಿಸಲಾಗಿರುವ ಈ ತಿಂಗಳ ಬ್ಯಾಂಕ್ (Bank) ರಜಾ ದಿನಗಳ ಪಟ್ಟಿಯ ಪ್ರಕಾರ, ಮಾರ್ಚ್ 2022ರಲ್ಲಿ (Bank Holidays In March) ಒಟ್ಟು 13 ದಿನಗಳ ಕಾಲ ಬ್ಯಾಂಕ್ ಬಂದ್ ಇರಲಿವೆ. ಇದೇ ವಾರದಲ್ಲಿ ಒಟ್ಟು 4 ದಿನಗಳ ಕಾಲ ಸತತವಾಗಿ ಬ್ಯಾಂಕ್ ಗಳು ಬಂದ್ ಇರಲಿವೆ.

ನವದೆಹಲಿ: Bank Holiday March 2022 - ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿದ ಮಾರ್ಚ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ, ಈ ವಾರದ 7 ದಿನಗಳಲ್ಲಿ 4 ದಿನಗಳವರೆಗೆ ಬ್ಯಾಂಕುಗಳು ಬಂದ್ ಇರಲಿವೆ. ನೀವು ಸಹ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಬಯಸುತ್ತಿದ್ದರೆ, ಬ್ಯಾಂಕ್ ಶಾಖೆಗೆ ಹೋಗುವ ಮೊದಲು, ಬ್ಯಾಂಕ್ ರಜಾದಿನಗಳ (Bank Holidays) ಪಟ್ಟಿಯನ್ನು ಖಂಡಿತವಾಗಿ ಪರಿಶೀಲಿಸಿ. ಆರ್‌ಬಿಐ ಬಿಡುಗಡೆ ಮಾಡಿರುವ ಈ ಪಟ್ಟಿಯ ಪ್ರಕಾರ, ಮಾರ್ಚ್ 2022 ರಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಇದನ್ನೂ ಓದಿ -ಈ ವಾಹನಗಳ ನೋಂದಣಿ ಈಗ 8 ಪಟ್ಟು ಹೆಚ್ಚು ದುಬಾರಿ.! ಹೊಸ ನಿಯಮದಿಂದ ಆಗಲಿದೆ ಭಾರೀ ನಷ್ಟ

ಈ ವಾರ 4 ದಿನಗಳು ಬ್ಯಾಂಕ್ ಬಂದ್ ಇರಲಿವೆ
ಮಾರ್ಚ್ 17 : ಹೋಳಿ ದಹನ (ಡೆಹ್ರಾಡೂನ್, ಕಾನ್ಪುರ್, ಲಖನೌ ಹಾಗೂ ರಾಂಚಿಯಲ್ಲಿ ಬ್ಯಾಂಕ್ ಗಳು ಬಂದ್ ಇರಲಿವೆ)
ಮಾರ್ಚ್ 18: ಹೋಳಿ ಹಬ್ಬ (ಬೆಂಗಳೂರು, ಭುವನೇಶ್ವರ್, ಚೆನ್ನೈ, ಕೊಚ್ಚಿ, ಕೊಲ್ಕತ್ತಾ ಹಾಗೂ ತಿರುವನಂತಪುರಂ ಹೊರತುಪಡಿಸಿ ಇತರ ಸ್ಥಾನಗಳಲ್ಲಿ ಬ್ಯಾಂಕ್ ಗಳು ಬಂದ್ ಇರಲಿವೆ)
ಮಾರ್ಚ್ 19: ಹೋಳಿ/ಯಾವೊಸಾಂಗ್ (ಭುವನೇಶ್ವರ್, ಇಂಫಾಲ್ ಹಾಗೂ ಪಟ್ನಾಗಳಲ್ಲಿ ಬ್ಯಾಂಕ್ ಗಳು ಬಂದ್ ಇರಲಿವೆ)
ಮಾರ್ಚ್ 20: ಭಾನುವಾರ (ವಾರದ ರಜಾದಿನ )

ಇದನ್ನೂ ಓದಿ-Arecanut Price: ಸ್ಥಿರತೆ ಕಾಯ್ದುಕೊಂಡ ರಾಶಿ ಅಡಿಕೆ ಧಾರಣೆ

ಮಾಹಿತಿ ನೀಡಿದ RBI
RBI ಪಟ್ಟಿಯ ಪ್ರಕಾರ, ಮಾರ್ಚ್‌ನಲ್ಲಿರುವ ಒಟ್ಟು 13 ದಿನಗಳ ಬ್ಯಾಂಕ್ ರಜೆಗಳಲ್ಲಿ 4 ರಜಾದಿನಗಳು ಭಾನುವಾರದ ಸಾರ್ವತ್ರಿಕ ರಜಾದಿನಗಲಾಗಿವೆ. ಇದಲ್ಲದೆ, ಅನೇಕ ರಜಾದಿನಗಳು ನಿರಂತರವಾಗಿ ಬರುತ್ತಿವೆ. ಅಂದರೆ ಇದರಲ್ಲಿ ಇಡೀ ದೇಶದಲ್ಲಿ ಏಕಕಾಲದಲ್ಲಿ ಬರದ ಅನೇಕ ರಜಾದಿನಗಳಿವೆ, ಇಡೀ ದೇಶದಲ್ಲಿ ಏಕಕಾಲದಲ್ಲಿ 13 ದಿನಗಳವರೆಗೆ ಬ್ಯಾಂಕುಗಳನ್ನು ಮುಚ್ಚಲಾಗುವುದಿಲ್ಲ. ಆರ್‌ಬಿಐ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ ಪ್ರಕಾರ, ಈ ರಜಾದಿನಗಳು ಆಯಾ ರಾಜ್ಯಗಳಿಗೆ ಸಂಬಂಧಿಸಿವೆ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಭಾನುವಾರ ಹೊರತುಪಡಿಸಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳು ಬಂದ್ ಇರಲಿವೆ.

ಇದನ್ನೂ ಓದಿ-Affordable Bike: ಕೇವಲ ರೂ.4,999 ಪಾವತಿಸಿ 100 Kmpl ಮೈಲೇಜ್ ಇರುವ ಈ ಬೈಕ್ ಅನ್ನು ಇಂದೇ ಮನೆಗೆ ತನ್ನಿ, ಇಲ್ಲಿದೆ ವಿವರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News