Ayodhya Trains: ಅಯೋಧ್ಯೆ ರಾಮಮಂದಿರ ಭೇಟಿಗಾಗಿ ಯೋಜಿಸುತ್ತಿರುವವರಿಗೆ ಗುಡ್ ನ್ಯೂಸ್

Ayodhya Trains: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ರಾಮ ಮಂದಿರದ ದರ್ಶನಕ್ಕೆ ತೆರಳುವ ಭಕ್ತರಿಗಾಗಿ ಭಾರತೀಯ ರೈಲ್ವೆ 1000ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ನಿಯೋಜಿಸಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Dec 29, 2023, 08:08 AM IST
  • ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು ಬಹುತೇಕ ಸಿದ್ಧವಾಗಿದೆ
  • 2024ರ ಜನವರಿ 22 ರಂದು ರಾಮಲಾಲಾ ಪ್ರಾಣ ಪ್ರತಿಷ್ಟಾನ ನಡೆಯಲಿದೆ.
  • ಈ ಸಂದರ್ಭದಲ್ಲಿ ರಾಮ ಮಂದಿರಕ್ಕೆ ತೆರಳುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಭಾರತೀಯ ರೈಲ್ವೆ ಅಯೋಧ್ಯೆಗೆ ತೆರಳುವ ಭಕ್ತರಿಗಾಗಿ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿದೆ
Ayodhya Trains: ಅಯೋಧ್ಯೆ ರಾಮಮಂದಿರ ಭೇಟಿಗಾಗಿ ಯೋಜಿಸುತ್ತಿರುವವರಿಗೆ ಗುಡ್ ನ್ಯೂಸ್  title=

Ayodhya Trains: ಹಿಂದೂಗಳ ಬಹುವರ್ಷಗಳ ಕನಸು ನನಸಾಗುತ್ತಿದೆ.  ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭಗವಾನ್ ಶ್ರೀರಾಮನ ದೇವಾಲಯವನ್ನು ಮುಂದಿನ ತಿಂಗಳು ಎಂದರೆ 2024 ರ ಜನವರಿಯಲ್ಲಿ ಉದ್ಘಾಟನೆ ಮಾಡಲು ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು   ದೇಶದ ನಾನಾ ಭಾಗಗಳಿಂದ ಅಯೋಧ್ಯೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಅಪಾರ ಸಂಖ್ಯೆಯ ಪ್ರಯಾಣಿಕರನ್ನು ನಿಯಂತ್ರಿಸಲು ರೈಲ್ವೆ ವಿವಿಧ ವಲಯಗಳಿಂದ 1000 ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಇದರ ಭಾಗವಾಗಿ, ಭಾರತೀಯ ರೈಲ್ವೆ ಅಮೃತಸರ, ಬಟಿಂಡಾ ಮತ್ತು ಚಂಡೀಗಢದಿಂದ ಅಯೋಧ್ಯೆಗೆ ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ಅಂಬಾಲಾ ರೈಲ್ವೆ ವಿಭಾಗ ಮಾಹಿತಿ ನೀಡಿದೆ. 

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು ಬಹುತೇಕ ಸಿದ್ಧವಾಗಿದ್ದು, 2024ರ ಜನವರಿ 22 ರಂದು ರಾಮಲಾಲಾ ಪ್ರಾಣ ಪ್ರತಿಷ್ಟಾನ ನಡೆಯಲಿದೆ. ಈ ಸಂದರ್ಭದಲ್ಲಿ ರಾಮ ಮಂದಿರಕ್ಕೆ ತೆರಳುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಭಾರತೀಯ ರೈಲ್ವೆ ಅಯೋಧ್ಯೆಗೆ ತೆರಳುವ ಭಕ್ತರಿಗಾಗಿ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿದೆ ಎಂದು ಅಂಬಾಲಾ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಮನ್ದೀಪ್ ಭಾಟಿಯಾ ಹೇಳಿದ್ದಾರೆ.  

ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ಹಂಚಿಕೊಂಡಿರುವ ಮನ್ದೀಪ್ ಭಾಟಿಯಾ, "ಅಮೃತಸರ, ಬಟಿಂಡಾ ಮತ್ತು ಚಂಡೀಗಢದಿಂದ ಅಯೋಧ್ಯೆಗೆ ವಿಶೇಷ ರೈಲುಗಳನ್ನು ಓಡಿಸಬಹುದು, ಅದರ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಪ್ರಯಾಣಿಕರ ಗುಂಪನ್ನು ನಿಯಂತ್ರಣದಲ್ಲಿಡಲು, ಟಿಕೆಟ್‌ಗಳಿಗಾಗಿ ಹೆಚ್ಚುವರಿ ಕೌಂಟರ್‌ಗಳನ್ನು ಸಹ ಸ್ಥಾಪಿಸುವ ಚಿಂತನೆ ಇದೆ" ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ- Smartphone ಬಳಕೆದಾರರೇ, ತಕ್ಷಣವೇ‌ ಈ ಕೆಲಸ ಮಾಡಿ

ಟಿಕೆಟ್‌ಗಾಗಿ ಹೊಸ ಕೌಂಟರ್‌ಗಳ ಸ್ಥಾಪನೆ:
80 ಪ್ರತಿಶತದಷ್ಟು ಜನರು ಇ-ಟಿಕೆಟಿಂಗ್‌ಗೆ ಒಲವು ತೋರುತ್ತಿದ್ದಾರೆ, ಹಾಗಾಗಿ,  ಆನ್ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.   ಆದರೆ ಅಗತ್ಯವಿದ್ದರೆ ಹೆಚ್ಚುವರಿ ಕೌಂಟರ್‌ಗಳನ್ನು ಸಹ ಸ್ಥಾಪಿಸಲು ರೈಲ್ವೆ ಇಲಾಖೆ ಸಿದ್ದತೆಯನ್ನು ಕೈಗೊಂಡಿರುವುದಾಗಿ  ಡಿಆರ್‌ಎಂ ಭಾಟಿಯಾ ಮಾಹಿತಿ ನೀಡಿದ್ದಾರೆ. 

ಇದಲ್ಲದೆ, ಅಯೋಧ್ಯೆಗೆ ಬರುವ ಅಪಾರ ಸಂಖ್ಯೆಯ ಪ್ರಯಾಣಿಕರನ್ನು ನಿಯಂತ್ರಿಸಲು ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತ್ತಾ, ನಾಗ್ಪುರ, ಲಖನೌ ಮತ್ತು ಜಮ್ಮು ಸೇರಿದಂತೆ ವಿವಿಧ ಪ್ರದೇಶಗಳು ಮತ್ತು ನಗರಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು. 

ಇದನ್ನೂ ಓದಿ- ಹೊಸ ವರ್ಷದಲ್ಲಿ ಹೊಸ ನಿಯಮದಡಿ ವೇತನ ! ಸರ್ಕಾರಿ ನೌಕರರ ವೇತನದಲ್ಲಿ ಆಗುವುದು ಭಾರೀ ಹೆಚ್ಚಳ !

ಐ‌ಆರ್‌ಸಿ‌ಟಿ‌ಸಿ ಕೂಡ ತಯಾರಿಯಲ್ಲಿ ನಿರತವಾಗಿದೆ!
ಈ ಅವಧಿಯಲ್ಲಿ ಅಯೋಧ್ಯೆಗೆ ಭೇಟಿ ನೀಡುವ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳ ಅಗತ್ಯತೆಗಳನ್ನು ಪೂರೈಸಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಕೂಡ  ಸಜ್ಜಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News