Automatic Cash Delivery: ಎಟಿಎಂನಿಂದ ಇದ್ದಕ್ಕಿದ್ದಂತೆ 500-500 ನೋಟುಗಳು ಹೊರಬಂದಾಗ...!

Automatic Cash Delivery: ಎಟಿಎಂನಿಂದ ಇದ್ದಕ್ಕಿದ್ದಂತೆ 500-500 ನೋಟುಗಳು ಹೊರಬರುತ್ತಿರುವುದನ್ನು ನೋಡಿ ಎಲ್ಲರೂ ಆಘಾತಗೊಂಡರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದಾಗ, ಪೊಲೀಸರು ಸ್ಥಳಕ್ಕೆ ತಲುಪಿ ಚದುರಿದ ನೋಟುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

Written by - Yashaswini V | Last Updated : Jul 28, 2021, 02:00 PM IST
  • ಯೂನಿಯನ್ ಬ್ಯಾಂಕ್ ಎಟಿಎಂನಲ್ಲಿ ಈ ಘಟನೆ ನಡೆದಿದೆ
  • ಸ್ಥಳಕ್ಕೆ ತಲುಪಿದ ಚಾಸ್ ಪೊಲೀಸರು ಎಟಿಎಂನಿಂದ ಹೊರಬಂದು ಅಲ್ಲಿಯೇ ಕೆಳಗೆ ಬಿದ್ದಿದ್ದ 500-500 ರೂ. ಮುಖಬೆಲೆಯ 7,000 ರೂ.ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ
  • ಎಟಿಎಂ ಮುಚ್ಚಿದ ಸಮಯದಲ್ಲಿ ನೋಟುಗಳು ಈ ರೀತಿ ಇದ್ದಕ್ಕಿದ್ದಂತೆ ಹೊರಬಂದಿದೆ ಎಂದು ಹೇಳಲಾಗಿದೆ
Automatic Cash Delivery: ಎಟಿಎಂನಿಂದ ಇದ್ದಕ್ಕಿದ್ದಂತೆ 500-500 ನೋಟುಗಳು  ಹೊರಬಂದಾಗ...! title=
ATM Cash Delivery

Automatic Cash Delivery: ಹಲವು ಬಾರಿ ನಾವು ಹಣ ವಿತ್ ಡ್ರಾ ಮಾಡಲು ಎಟಿಎಂಗೆ ಹೋಗಿ ಮಿಷನ್ ನಲ್ಲಿ ಕಾರ್ಡ್ ಹಾಕಿ ಪಿನ್ ನಂಬರ್ ನಮೂದಿಸಿ ನಂತರವೂ ಹಣ ಬರದೇ ಇದ್ದರೆ ಒಂದು ರೀತಿಯ ಆಘಾತವಾಗುತ್ತದೆ. ಕ್ಷಣಮಾತ್ರದಲ್ಲಿ ಖಾತೆಯಿಂದ ಹಣ ಖಾಲಿಯಾಗಿರಬಹುದೇನೋ ಎಂಬ ಆತಂಕಕ್ಕೂ ಒಳಗಾಗುವುದುಂಟು. ಆದರೆ ಯಾವುದೇ ಕಾರ್ಡ್, ಪಿನ್ ನಂಬರ್ ನಮೂದಿಸದೆ ಜಾರ್ಖಂಡ್‌ನ ಬೊಕಾರೊದಲ್ಲಿನ ಎಟಿಎಂನಿಂದ ಇದ್ದಕ್ಕಿದ್ದಂತೆ ಹಣ ಯಂತ್ರದಿಂದ ಹೊರಬಂದಿದೆ. ಈ ದೃಶ್ಯವನ್ನು ಕಂಡ ಜನ ಶಾಕ್ ಆಗಿದ್ದಾರೆ.

ವಾಸ್ತವವಾಗಿ, ಜಾರ್ಖಂಡ್‌ನ ಬೊಕಾರೊದಲ್ಲಿನ ಚಾಸ್‌ನಲ್ಲಿರುವ ಯೂನಿಯನ್ ಬ್ಯಾಂಕ್ ಎಟಿಎಂನಲ್ಲಿ (ATM) ಈ ಘಟನೆ ನಡೆದಿದೆ. ಈ ಬಗ್ಗೆ ಇಡೀ ಪ್ರದೇಶದಲ್ಲಿ ಬೆಂಕಿಯ ಜ್ವಾಲೆಯಂತೆ ಸುದ್ದಿ ಹಬ್ಬಿದ್ದು, ಸ್ಥಳೀಯ ಜನರು ಚಾಸ್ ಪೊಲೀಸರಿಗೂ ಮಾಹಿತಿ ನೀಡಿದರು. ಸ್ಥಳಕ್ಕೆ ತಲುಪಿದ ಚಾಸ್ ಪೊಲೀಸರು ಎಟಿಎಂನಿಂದ ಹೊರಬಂದು ಅಲ್ಲಿಯೇ ಕೆಳಗೆ ಬಿದ್ದಿದ್ದ  500-500 ರೂ. ಮುಖಬೆಲೆಯ 7,000 ರೂ.ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಎಟಿಎಂ ಮುಚ್ಚಿದ ಸಮಯದಲ್ಲಿ ನೋಟುಗಳು ಈ ರೀತಿ ಇದ್ದಕ್ಕಿದ್ದಂತೆ ಹೊರಬಂದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ- SBI: ತನ್ನ 44 ಕೋಟಿ ಗ್ರಾಹಕರಿಗೆ ವಿಡಿಯೋ ಸಂದೇಶ ನೀಡಿರುವ ಎಸ್‌ಬಿಐ ಹೇಳಿದ್ದೇನು?

ವಾಸ್ತವವಾಗಿ, ಮಂಗಳವಾರ ಬೆಳಿಗ್ಗೆ, ಸ್ಥಳೀಯ ಜನರು ಎಟಿಎಂನಲ್ಲಿ 500-500 ನೋಟುಗಳು (Cash) ನೆಲದ ಮೇಲೆ ಬಿದ್ದಿರುವುದನ್ನು ನೋಡಿದರು. ಕೆಲವು ನೋಟುಗಳು ಎಟಿಎಂನಲ್ಲಿಯೇ ಅಂಟಿಕೊಂಡಿದ್ದವು. ಇದನ್ನು ನೋಡಿ ಜನರು ಆಶ್ಚರ್ಯಚಕಿತರಾದರು. ಯಾರಾದರೂ ಎಟಿಎಂ ಅನ್ನು ಹಾಳುಮಾಡಲು ಪ್ರಯತ್ನಿಸಿರಬೇಕು ಎಂದು ಜನರು ಭಾವಿಸಿದ್ದರು. ನಂತರ ಈ ಬಗ್ಗೆ ಸ್ಥಳೀಯ ಜನರು ಚಾಸ್ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ತಲುಪಿದ ಚಾಸ್ ಪೊಲೀಸರು ಎಟಿಎಂನಲ್ಲಿ 500-500 ನೋಟುಗಳು ಬಿದ್ದಿರುವುದನ್ನು ನೋಡಿದರು. ಬಳಿಕ ಈ ಬಗ್ಗೆ ಬ್ಯಾಂಕ್‌ಗೆ ಮಾಹಿತಿ ನೀಡಿದರು. ಇದರೊಂದಿಗೆ ಎಟಿಎಂನಿಂದ ಕೆಳಗೆ ಬಿದ್ದಿದ್ದ 500 ರ 14 ನೋಟುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ನೋಟು ವಶಪಡಿಸಿಕೊಂಡ ನಂತರ ಪೊಲೀಸರು ಎಟಿಎಂ ಮುಚ್ಚಿದರು. 

ಇದನ್ನೂ ಓದಿ - Debit or Credit Card ಇಲ್ಲದೆಯೇ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಇಲ್ಲಿದೆ ಸುಲಭ ವಿಧಾನ

ಈ ಸಂದರ್ಭದಲ್ಲಿ ಪೊಲೀಸರು ಬ್ಯಾಂಕಿನ ಅಧಿಕಾರಿಗಳಿಂದಲೂ ಮಾಹಿತಿ ಪಡೆದರು. ಆ ಎಟಿಎಂನಿಂದ ಯಾವ ಗ್ರಾಹಕರು ಕೊನೆಯ ವಹಿವಾಟು ನಡೆಸಿದ್ದಾರೆ ಎಂಬ ಬಗ್ಗೆ ಪೊಲೀಸರು ಮತ್ತು ಬ್ಯಾಂಕ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ಎಟಿಎಂನಿಂದ ಗ್ರಾಹಕರು ಹಣವನ್ನು ಹಿಂಪಡೆಯಲು ಪ್ರಯತ್ನಿಸಿರಬೇಕು.  ಆ ಸಂದರ್ಭದಲ್ಲಿ ಹಣ ಎಟಿಎಂನಿಂದ ಹೊರಬಂದಿಲ್ಲ. ಗ್ರಾಹಕರು ಅಲ್ಲಿಂದ ತೆರಳಿ ಕೆಲ ಸಮಯದ ಬಳಿಕ ಹಣ ಯಂತ್ರದಿಂದ ಇದ್ದಕ್ಕಿದ್ದಂತೆ ಹೊರಬಂದಿರಬಹುದು ಎಂದು ಊಹಿಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News