ATM Cash Withdrawal: ಈಗ ಎಟಿಎಂನಿಂದ ಹಣ ಡ್ರಾ ಮಾಡುವುದು ದುಬಾರಿ! ಹೊಸ ಶುಲ್ಕ ಎಷ್ಟು ಗೊತ್ತಾ..?

ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕ್‌ಗಳ ಎಟಿಎಂಗಳಿಂದ 3 ಉಚಿತ ವಹಿವಾಟು ಮಾಡಲು ಮತ್ತು ಮೆಟ್ರೋ ಅಲ್ಲದ ಕೇಂದ್ರಗಳಲ್ಲಿ 5 ವಹಿವಾಟು ಮಾಡಲು ಗ್ರಾಹಕರಿಗೆ ಅವಕಾಶ ನೀಡಲಾಗಿದೆ.

Written by - Puttaraj K Alur | Last Updated : Dec 14, 2021, 07:25 PM IST
  • ಜನವರಿಯಿಂದ ಉಚಿತ ಎಟಿಎಂ ವಹಿವಾಟಿನ ಮಿತಿ ದಾಟಿದರೆ ಬಳಕೆದಾರರು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ
  • ಜ.1ರಿಂದ ಉಚಿತ ಮಾಸಿಕ ಮಿತಿಯ ನಂತರ ನಗದು ಮತ್ತು ನಗದುರಹಿತ ATM ವಹಿವಾಟುಗಳಿಗೆ ಶುಲ್ಕ ಹೆಚ್ಚಿಸಲು RBI ಅನುಮತಿ
  • ಮುಂದಿನ ತಿಂಗಳಿನಿಂದ ಪ್ರತಿ ವಹಿವಾಟಿಗೆ 21 ರೂ. ಜೊತೆಗೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ
ATM Cash Withdrawal: ಈಗ ಎಟಿಎಂನಿಂದ ಹಣ ಡ್ರಾ ಮಾಡುವುದು ದುಬಾರಿ! ಹೊಸ ಶುಲ್ಕ ಎಷ್ಟು ಗೊತ್ತಾ..? title=
ಎಟಿಎಂನಿಂದ ಹಣ ಡ್ರಾ ಮಾಡುವುದು ದುಬಾರಿ!

ನವದೆಹಲಿ: ಇನ್ನು ಕೇಲವೇ ದಿನಗಳಲ್ಲಿ 2021ನೇ ವರ್ಷ ಮುಗಿಯಲಿದೆ. ಈ ವರ್ಷ ಹಣದುಬ್ಬರವು ಹಲವು ಹೊಸ ದಾಖಲೆಗಳನ್ನು ನಿರ್ಮಿಸಿದೆ. ಆದರೆ ಹೊಸ ವರ್ಷವೂ ಹಣದುಬ್ಬರದಿಂದ ಆರಂಭವಾಗುತ್ತಿದೆ. 2022ರಿಂದ ಎಟಿಎಂನಿಂದ ನಗದು ಹಿಂಪಡೆಯುವಿಕೆ ಹೆಚ್ಚು ದುಬಾರಿಯಾಗಲಿದೆ. ಮುಂದಿನ ತಿಂಗಳ ಮೊದಲನೇ ಜನವರಿಯಿಂದ ಉಚಿತ ಎಟಿಎಂ ವಹಿವಾಟಿನ(Cash transaction) ಮಿತಿ ದಾಟಿದರೆ ಬಳಕೆದಾರರು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.

ಜನವರಿ 1, 2022ರಿಂದ ಉಚಿತ ಮಾಸಿಕ ಮಿತಿಯ ನಂತರ ನಗದು ಮತ್ತು ನಗದುರಹಿತ ಎಟಿಎಂ ವಹಿವಾಟುಗಳಿಗೆ ಶುಲ್ಕವನ್ನು ಹೆಚ್ಚಿಸಲು(ATM Transaction New Charges) ಆರ್‌ಬಿಐ ಅನುಮತಿ ನೀಡಿದೆ. ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿಗಳ ಪ್ರಕಾರ, ಆಕ್ಸಿಸ್ ಬ್ಯಾಂಕ್ ಅಥವಾ ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಉಚಿತ ಮಿತಿಗಿಂತ ನಡೆಸುವ ಹೆಚ್ಚಿನ ಹಣಕಾಸು ವಹಿವಾಟುಗಳಿಗೆ 21 ರೂ. ಶುಲ್ಕ ಮತ್ತು ಜಿಎಸ್‌ಟಿ(GST) ಇರುತ್ತದೆ ಎಂದು ಆಕ್ಸಿಸ್ ಬ್ಯಾಂಕ್ ಹೇಳಿದೆ. ಈ ಪರಿಷ್ಕೃತ ದರಗಳು ಜನವರಿ 1, 2022ರಿಂದ ಜಾರಿಗೆ ಬರಲಿವೆ.

ಇದನ್ನೂ ಓದಿ: LIC ಹೊರ ತಂದಿದೆ ನೂತನ ಪಾಲಿಸಿ Dhan Rekha! ಪಾಲಿಸಿದಾರರಿಗೆ ಸಿಗಲಿದೆ ಅದ್ಬುತ ಪ್ರಯೋಜನ

ಮುಂದಿನ ತಿಂಗಳಿನಿಂದ ಎಷ್ಟು ಚಾರ್ಜ್ ಹೆಚ್ಚಾಗಲಿದೆ?

ಇಲ್ಲಿಯವರೆಗೆ ನೀವು ಉಚಿತ ವಹಿವಾಟಿನ ಮಾಸಿಕ ಮಿತಿ(ATM Cash Withdrawal Limit) ದಾಟಿದ್ದರೆ 20 ರೂ. ಶುಲ್ಕ ಪಾವತಿಸಬೇಕಾಗುತ್ತಿತ್ತು. ಆದರೆ ಮುಂದಿನ ತಿಂಗಳಿನಿಂದ ಪ್ರತಿ ವಹಿವಾಟಿಗೆ 21 ರೂ. ಜೊತೆಗೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಆರ್‌ಬಿಐ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಬ್ಯಾಂಕ್‌ಗಳಿಗೆ ಹೆಚ್ಚಿನ ಇಂಟರ್‌ಚೇಂಜ್ ಶುಲ್ಕವನ್ನು ಸರಿದೂಗಿಸಲು ಮತ್ತು ಸಾಮಾನ್ಯ ವೆಚ್ಚವನ್ನು ಹೆಚ್ಚಿಸಿದೆ. ಹೀಗಾಗಿ ಪ್ರತಿ ವಹಿವಾಟಿಗೆ ಶುಲ್ಕವನ್ನು 21 ರೂ.ಗೆ ಹೆಚ್ಚಿಸಲು ಬ್ಯಾಂಕ್‌ಗಳಿಗೆ ಅವಕಾಶ ನೀಡಲಾಗಿದೆ.

5 ವಹಿವಾಟುಗಳು ಉಚಿತ

ನಿಮ್ಮ ಬ್ಯಾಂಕ್‌ಗಳ ಎಟಿಎಂಗಳಿಂದ 5 ಮತ್ತು 3 ಉಚಿತ ವಹಿವಾಟು(ATM Free Cash Withdrawal)ಗಳನ್ನು ನಡೆಸಲು ಅನುಮತಿ ಇರುತ್ತದೆ. ಇದು ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನು ಒಳಗೊಂಡಿರುತ್ತದೆ. ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕ್‌ಗಳ ಎಟಿಎಂಗಳಿಂದ 3 ಉಚಿತ ವಹಿವಾಟು ಮಾಡಲು ಮತ್ತು ಮೆಟ್ರೋ ಅಲ್ಲದ ಕೇಂದ್ರಗಳಲ್ಲಿ 5 ವಹಿವಾಟು ಮಾಡಲು ಗ್ರಾಹಕರಿಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಈ ನಂಬರ್ ಕಳೆದುಹೋದರೆ ನಿಂತು ಹೋಗುತ್ತದೆ ಪಿಂಚಣಿ..! ಮತ್ತೆ ಪಡೆಯಲು ಅನುಸರಿಸಿ ಈ ಸರಳ ಉಪಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News