Anil Ambani Mistakes: ಈ 5 ತಪ್ಪುಗಳಿಂದ ಅನಿಲ್ ಅಂಬಾನಿ ಭಾರೀ ನಷ್ಟ ಅನುಭವಿಸಿದರು!

The Fall of Reliance Group Scion: ರಿಲಯನ್ಸ್ ಕಮ್ಯುನಿಕೇಷನ್ಸ್, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಪವರ್, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್, ರಿಲಯನ್ಸ್ ನೇವಲ್ ಇವು ಆರ್ಥಿಕವಾಗಿ ದಿವಾಳಿಯಾಗಿರುವ ಅನಿಲ್ ಅಂಬಾನಿ ಒಡೆತನದ ಕಂಪನಿಗಳಾಗಿವೆ.   

Written by - Puttaraj K Alur | Last Updated : Apr 23, 2023, 08:39 PM IST
  • ನಿಖರವಾದ ಯೋಜನೆ ಇಲ್ಲದೆ ಅನಿಲ್ ಅಂಬಾನಿ ವ್ಯವಹಾರ ನಡೆಸಲು ಆತುರಪಟ್ಟರು
  • ಯಾವುದೇ ಪೂರ್ವಸಿದ್ಧತೆ ಇಲ್ಲದೇ ಒಂದರ ಹಿಂದೆ ಒಂದರಂತೆ ಹೊಸ ಯೋಜನೆಗಳಲ್ಲಿ ಹಣ ತೊಡಗಿಸಿದರು
  • ಮಿತಿಮೀರಿದ ವೆಚ್ಚ ಮತ್ತು ಸಾಲದಿಂದ ಅನಿಲ್ ಅಂಬಾನಿ ನಷ್ಟವನ್ನು ಅನುಭವಿಸಬೇಕಾಯಿತು
Anil Ambani Mistakes: ಈ 5 ತಪ್ಪುಗಳಿಂದ ಅನಿಲ್ ಅಂಬಾನಿ ಭಾರೀ ನಷ್ಟ ಅನುಭವಿಸಿದರು!   title=
ಅನಿಲ್ ಅಂಬಾನಿಯ ತಪ್ಪುಗಳು!

ನವದೆಹಲಿ: $42 ಬಿಲಿಯನ್ ಸಂಪತ್ತನ್ನು ಕಳೆದುಕೊಳ್ಳಲು ಸಾಧ್ಯವೆಂದು ನೀವು ಭಾವಿಸುತ್ತೀರಾ? ಅನಿಲ್ ಅಂಬಾನಿ ಒಂದು ಕಾಲದಲ್ಲಿ ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿದ್ದರು. ರಿಲಯನ್ಸ್ ಎಡಿಎಜಿ ಅಧ್ಯಕ್ಷರಾದ ನಂತರ ಒಮ್ಮೆ ವಿಶ್ವದ 6ನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಆದರೆ ಈಗ ಅವರು ಶ್ರೀಮಂತರ ಪಟ್ಟಿಯಿಂದ ತುಂಬಾ ದೂರವಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಅನಿಲ್ ಅಂಬಾನಿ ನಿಸ್ಸಂಶಯವಾಗಿ ಸಾಕಷ್ಟು ಹಣ ಕಳೆದುಕೊಂಡಿದ್ದಾರೆ.

ಅನಿಲ್ ಅಂಬಾನಿ ಕಂಪನಿಗಳ ಪೈಕಿ ರಿಲಯನ್ಸ್ ಕಮ್ಯುನಿಕೇಷನ್ಸ್, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಪವರ್, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್, ರಿಲಯನ್ಸ್ ನೇವಲ್ ಮುಂತಾದವುಗಳಿವೆ. ಧೀರೂಭಾಯಿ ಅಂಬಾನಿ ಕಟ್ಟಿ ಬೆಳೆಸಿದ ಕಂಪನಿ ಬಳಿಕ ಅಣ್ಣ-ತಮ್ಮನ ಪಾಲಾದವು. ಮುಖೇಶ್ ಅಂಬಾನಿ ಭಾರತದ ಶ್ರೀಮಂತ ಉದ್ಯಮಿಯಾಗಿ ಬೆಳೆದರೆ, ಅನಿಲ್ ಅಂಬಾನಿ ಕಂಪನಿಗಳು ನಷ್ಟವನ್ನು ಅನುಭವಿಸಿ ಕೈಸುಟ್ಟುಕೊಂಡರು.  

ಇದನ್ನೂ ಓದಿ: 100 ಮಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ಹೂಡಿದ ಅಂಕಿತಿ ಬೋಸ್

ರಿಲಯನ್ಸ್ ಗ್ರೂಪ್

ವಾಸ್ತವವಾಗಿ 1958ರಲ್ಲಿ ಧೀರೂಭಾಯಿ ಅಂಬಾನಿ ರಿಲಯನ್ಸ್ ಗ್ರೂಪ್ ಅನ್ನು ಪ್ರಾರಂಭಿಸಿದರು. 2002ರಲ್ಲಿ ಧೀರೂಭಾಯಿ ಅಂಬಾನಿ ನಿಧನರಾದರು. ನಂತರ ವ್ಯವಹಾರವನ್ನು ಪುತ್ರರಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ನಡುವೆ ಹಂಚಲಾಯಿತು. ವಿಭಜನೆ ಬಳಿಕ ಮುಖೇಶ್ ಅಂಬಾನಿ ಪೆಟ್ರೋಕೆಮಿಕಲ್, ಟೆಕ್ಸ್ಟೈಲ್ ಮತ್ತು ರಿಫೈನರಿ ವ್ಯವಹಾರಗಳನ್ನು ಪಡೆದರು. ಮತ್ತೊಂದೆಡೆ ಅನಿಲ್ ಅಂಬಾನಿ ಟೆಲಿಕಾಂ, ಹಣಕಾಸು ಮತ್ತು ಇಂಧನ ವ್ಯವಹಾರವನ್ನು ಪಡೆದರು.

ದಿವಾಳಿಯಾದ ಕಂಪನಿ!

ಆ ಸಮಯದಲ್ಲಿ ಅನಿಲ್ ಅಂಬಾನಿಗೆ ಹೊಸ ವ್ಯವಹಾಗಳು ಬಂದಿದ್ದು, ಇವುಗಳಲ್ಲಿ ಅವರು ಯಶಸ್ವಿಯಾಗುತ್ತಾರೆಂದು ನಂಬಲಾಗಿತ್ತು. ಆದರೆ ಅನಿಲ್ ಅಂಬಾನಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಇಂದು ಅವರ ಅನೇಕ ಕಂಪನಿಗಳು ದಿವಾಳಿಯಾಗಿ ನೆಲಕಚ್ಚಿವೆ. ಅನೇಕ ತಪ್ಪುಗಳ ಪರಿಣಾಮ ಅನಿಲ್ ಅಂಬಾನಿಯವರು ವೈಫಲ್ಯ ಅನುಭವಿಸಬೇಕಾಯಿತು.

ಇದನ್ನೂ ಓದಿ: Google CEO: 1,854 ಕೋಟಿ ಸಂಭಾವನೆ ಪಡೆದ ಸುಂದರ್ ಪಿಚೈ ಮನೆ ನೋಡಿದ್ರೆ ಶಾಕ್ ಆಗ್ತೀರಾ!

ಅನಿಲ್ ಅಂಬಾನಿಯವರ ತಪ್ಪುಗಳು!

- ನಿಖರವಾದ ಯೋಜನೆ ಇಲ್ಲದೆ ವ್ಯವಹಾರ ನಡೆಸಲು ಆತುರಪಟ್ಟರು. ಯಾವುದೇ ಪೂರ್ವಸಿದ್ಧತೆ ಇಲ್ಲದೇ ಒಂದರ ಹಿಂದೆ ಒಂದರಂತೆ ಹೊಸ ಯೋಜನೆಗಳಲ್ಲಿ ಹಣ ತೊಡಗಿಸಿದರು.

- ಮಿತಿಮೀರಿದ ವೆಚ್ಚದಿಂದ ಅವರು ನಷ್ಟವನ್ನು ಅನುಭವಿಸಬೇಕಾಯಿತು. ಬಳಿಕ ಹೆಚ್ಚು ಸಾಲ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿದರು.

- ಒಂದೇ ವ್ಯವಹಾರದ ಮೇಲೆ ಅವರು ಗಮನ ಕೇಂದ್ರೀಕರಿಸಲಿಲ್ಲ. ಬೇರೆ ಬೇರೆ ಯೋಜನೆಗಳನ್ನು ಆರಂಭಿಸಿ ಕೈಸುಟ್ಟುಕೊಂಡರು.

- ಮಹತ್ವಾಕಾಂಕ್ಷೆಯಿಂದ ತೆಗೆದುಕೊಂಡ ಹೆಚ್ಚಿನ ನಿರ್ಧಾರಗಳು ಬುಡಮೇಲಾದವು. ಇದರಿಂದ ಸಾಲವು ಹೆಚ್ಚಾಯಿತು ಮತ್ತು 2008ರ ಆರ್ಥಿಕ ಹಿಂಜರಿತದಲ್ಲಿ ಅವರಿಗೆ ದೊಡ್ಡ ಆಘಾತ ಉಂಟಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News