ಬೆಂಗಳೂರು : ಲಾಕ್ ಡೌನ್ ನಿಂದಾಗಿ ದುಡಿಮೆ ಇಲ್ಲದೆ ಕೋಟ್ಯಂತರ ಜನ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗೆ ಕಡಿಮೆ ಆದಾಯಯುಳ್ಳ ಜನರಿಗೆ ಉಚಿತವಾಗಿ ಪ್ರೀಪೇಯ್ಡ್ ರೀಚಾರ್ಚ್ ಕೊಡುಗೆಯನ್ನು ಭಾರತಿ ಏರ್‌ಟೆಲ್ ಜಾರಿಗೆ ತಂದಿದೆ.
ಇದರಿಂದ ಸುಮಾರು 5.5 ಕೋಟಿ ಗ್ರಾಹಕರಿಗೆ(Airtel Customers) ನೆರವಾಗಲಿದೆ. ಇದಲ್ಲದೆ 79 ರೂ. ರೀಚಾರ್ಜ್ ಕೂಪನ್ ಮೂಲಕ ಡಬ್ಬಲ್ ಕೊಡುಗೆ ಪಡೆದುಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ : ನಾಳೆಯಿಂದ ಸಿಗಲಿದೆ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಅವಕಾಶ.! ಹೇಗೆ ಗೊತ್ತಾ..?
ಸುಮಾರು 270 ಕೋಟಿ ರೂ. ಮೌಲ್ಯದ ಈ ಪ್ಲಾನ್(Airtel Recharge pack) ಮೂಲಕ 5.5 ಕೋಟಿಗೂ ಅಧಿಕ ಚಂದಾದಾರರಿಗೆ 49 ರೂ.ಗಳ ಉಚಿತ ರೀಚಾರ್ಜ್ ಆಫರ್ ಸಿಗಲಿದೆ.
ಇದನ್ನೂ ಓದಿ : Covid-19 Life Insurance: ಕೇವಲ 330 ರೂ. ಪ್ರೀಮಿಯಂಗೆ ಸಿಗುತ್ತಿದೆ ಈ ವಿಮಾ ಪಾಲಸಿ, ನೀವೂ ಲಾಭ ಪಡೆದುಕೊಳ್ಳಬಹುದು
ಈ ರೀಚಾರ್ಜ್ ಮೂಲಕ 38 ರೂ. ಗಳ ಟಾಕ್ ಟೈಂ ಹಾಗೂ 100 ಎಂಬಿ ಡೇಟಾ(100 MB Data) ಸಿಗಲಿದ್ದು, 28 ದಿನಗಳ ವ್ಯಾಲಿಡೆಟಿ ಹೊಂದಿದೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮೊಬೈಲ್ ಸಂಪರ್ಕ ಇಲ್ಲದೆ ಕಷ್ಟ ಪಡಬಾರದು ಎಂಬ ಉದ್ದೇಶದಿಂದ ಈ ಪ್ಲಾನ್ ಜಾರಿಗೊಳಿಸಲಾಗಿದೆ, ಮುಂದಿನ ವಾರದಿಂದ ಈ ಪ್ರಯೋಜನ ಸಿಗಲಿದೆ ಎಂದು ಕಂಪನಿ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ : Post Office ಈ ಯೋಜನೆಯಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡಿ ನಂತ್ರ ಪಡೆಯಿರಿ ₹ 4950!
ಫೆಬ್ರುವರಿ ತಿಂಗಳ ಟ್ರಾಯ್ ಅಂಕಿ ಅಂಶಗಳ ಪ್ರಕಾರ ಭಾರತಿ ಏರ್‌ಟೆಲ್(Bharti Airtel) ಸುಮಾರು 34 ಕೋಟಿ ರೂ. ಮೊಬೈಲ್ ಚಂದಾದಾರರನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.