ಪೆಟ್ರೋಲ್-ಡೀಸೆಲ್ ಬಳಿಕ ಸಿಎನ್‌ಜಿ ದರ ಏರಿಕೆ

CNG Price update: ದೇಶಾದ್ಯಂತ  ಕಳೆದ ಕೆಲವು ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ದೇಶದ ಕೆಲವು ಭಾಗಗಳಲ್ಲಿ ಸಿಎನ್‌ಜಿ ದರ ಆಕಾಶ ಮುಟ್ಟುತ್ತಿದೆ. 

Written by - Yashaswini V | Last Updated : Aug 3, 2022, 10:46 AM IST
  • ಸರ್ಕಾರಿ ತೈಲ ಕಂಪನಿಗಳು ಇಂದು (ಆಗಸ್ಟ್ 3) ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ದರಗಳನ್ನು ಬಿಡುಗಡೆ ಮಾಡಿದೆ.
  • ಪೆಟ್ರೋಲ್ ಡೀಸೆಲ್ ದರ ಸ್ಥಿರವಾಗಿದ್ದರೆ ಸಿಎನ್‌ಜಿ ದರ ಏರಿಕೆ ಆಗಿದೆ
  • ಸಿಎನ್‌ಜಿ ಬೆಲೆಯನ್ನು ಕೆಜಿಗೆ 5.3 ರೂ. ಹೆಚ್ಚಿಸಲಾಗಿದೆ
ಪೆಟ್ರೋಲ್-ಡೀಸೆಲ್ ಬಳಿಕ ಸಿಎನ್‌ಜಿ ದರ ಏರಿಕೆ  title=
Petrol Diesel price

ಗ್ರಾಹಕರಿಗೆ ಸಿಎನ್‌ಜಿ ದರ ಏರಿಕೆ ಬಿಸಿ: ಕಳೆದ 70 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಸ್ತವವಾಗಿ,  ಕೇಂದ್ರ ಸರ್ಕಾರವು ಮೇ 21 ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿತು. ಇದಾದ ನಂತರ ದೇಶಾದ್ಯಂತ ಪ್ರತಿ ಲೀಟರ್  ಪೆಟ್ರೋಲ್ ಬೆಲೆಯಲ್ಲಿ 9.50 ರೂ. ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 7 ರೂ. ಇಳಿಕೆ ಕಂಡಿದೆ. ಆದರೆ, ಈ ಮಧ್ಯೆ ಸಿಎನ್‌ಜಿ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

ಸರ್ಕಾರಿ ತೈಲ ಕಂಪನಿಗಳು ಇಂದು (ಆಗಸ್ಟ್ 3) ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ದರಗಳನ್ನು ಬಿಡುಗಡೆ ಮಾಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿದ್ದರೆ, ಕೆಲವು ಸ್ಥಳಗಳಲ್ಲಿ ಸಿಎನ್‌ಜಿ ದರ ಹೆಚ್ಚಾಗಿದೆ. ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಸಿಎನ್‌ಜಿ ಬೆಲೆ ಏರಿಕೆಯಾಗಿದೆ.  ಗ್ರೀನ್ ಗ್ಯಾಸ್ ಲಿಮಿಟೆಡ್ (ಜಿಜಿಎಲ್) ಭಾನುವಾರ ಲಕ್ನೋ ಮತ್ತು ಉನ್ನಾವೊದಲ್ಲಿ ಸಿಎನ್‌ಜಿ ಬೆಲೆಯನ್ನು ಕೆಜಿಗೆ 5.3 ರೂ.   ಹೆಚ್ಚಿಸಿದೆ. ಇದರ ನಂತರ ಸಿಎನ್‌ಜಿ ಲಕ್ನೋದಲ್ಲಿ ಪ್ರತಿ ಕೆಜಿಗೆ 96.10 ರೂ.ಗೆ ಲಭ್ಯವಿದ್ದರೆ ಉನ್ನಾವೊದಲ್ಲಿ ಕೆಜಿಗೆ 97.55 ರೂ.ಗಳಿಗೆ ಲಭ್ಯವಾಗುತ್ತಿದೆ. ವಿಶೇಷವೆಂದರೆ, ಇಲ್ಲಿ ಸಿಎನ್‌ಜಿ ದರ ಪೆಟ್ರೋಲ್ ದರಕ್ಕೆ ಆಸುಪಾಸಿನಲ್ಲಿದೆ.

ಇದನ್ನೂ ಓದಿ- Business Opportunity: ಸ್ವಂತ ವ್ಯಾಪಾರ ಆರಂಭಿಸಬೇಕೆ? ಈ ಉದ್ಯಮ ಆರಂಭಿಸಲು ಸರ್ಕಾರವೂ ನಿಮಗೆ ಸಹಾಯ ಮಾಡುತ್ತದೆ

ದೇಶದ ಪ್ರಮುಖ ನಗರಗಲ್ಲಿ ಸಿಎನ್‌ಜಿ ದರ :
- ದೆಹಲಿ ಪೆಟ್ರೋಲ್ ₹ 96.72 ಮತ್ತು ಡೀಸೆಲ್ ₹ 89.62 ಪ್ರತಿ ಲೀಟರ್
- ಮುಂಬೈ ಪೆಟ್ರೋಲ್ ₹ 111.35 ಮತ್ತು ಡೀಸೆಲ್ ₹ 97.28 ಪ್ರತಿ ಲೀಟರ್
- ಚೆನ್ನೈ ಪೆಟ್ರೋಲ್ ₹ 102.63 ಮತ್ತು ಡೀಸೆಲ್
₹ 94.24 ಪ್ರತಿ ಲೀಟರ್‌ಗೆ
- ಕೋಲ್ಕತ್ತಾ ಪ್ರತಿ ಲೀಟರ್ ಪೆಟ್ರೋಲ್ ₹ 106.03 ಪ್ರತಿ ಲೀಟರ್ ಡೀಸೆಲ್ ₹ 92.76
- ಲಕ್ನೋದಲ್ಲಿ ಪೆಟ್ರೋಲ್ ₹ 96.57 ಮತ್ತು ಡೀಸೆಲ್ ಲೀಟರ್‌ಗೆ
₹ 89.76 
- ಜೈಪುರದಲ್ಲಿ ಪೆಟ್ರೋಲ್ ₹ 108.48 ಮತ್ತು ಡೀಸೆಲ್ ಲೀಟರ್‌ಗೆ ₹ 93.72
- ತಿರುವನಂತಪುರದಲ್ಲಿ ಪೆಟ್ರೋಲ್ ₹ 107.71 ಮತ್ತು ಡೀಸೆಲ್ ₹ 96.52
- ಪಾಟ್ನಾದಲ್ಲಿ ಪೆಟ್ರೋಲ್ ₹ 107.24 ಮತ್ತು ಡೀಸೆಲ್ ಲೀಟರ್‌ಗೆ ₹ 94.04
- ಬೆಂಗಳೂರಿನಲ್ಲಿ ಪೆಟ್ರೋಲ್ ₹ 101.94 ಮತ್ತು ಡೀಸೆಲ್ ಲೀಟರ್‌ಗೆ ₹ 87.89 
- ಭುವನೇಶ್ವರದಲ್ಲಿ ಪೆಟ್ರೋಲ್ ₹ 103.19 ಮತ್ತು ಡೀಸೆಲ್ ಲೀಟರ್‌ಗೆ ₹ 94.76
- ಚಂಡೀಗಢದಲ್ಲಿ ಪೆಟ್ರೋಲ್ ₹ 96.20 ಮತ್ತು ಡೀಸೆಲ್ ಲೀಟರ್‌ಗೆ  ಮತ್ತು ಡೀಸೆಲ್ ಲೀಟರ್‌ಗೆ ₹ 84.26
- ಹೈದರಾಬಾದ್‌ನಲ್ಲಿ ಪೆಟ್ರೋಲ್ ₹ 109.66 ಮತ್ತು ಡೀಸೆಲ್ ₹ 97.82 

ಇದನ್ನೂ ಓದಿ- ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ಶೇ.30ರಷ್ಟು ಕಡಿಮೆಯಾಗಲಿದೆ ಟಿಕೆಟ್ ದರ!

ನಷ್ಟದಲ್ಲಿ ತೈಲ ಮಾರಾಟ ಮಾಡುತ್ತಿರುವ ಐಒಸಿ:
ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ನಷ್ಟದಲ್ಲಿ ತೈಲ ಮಾರಾಟ ಮಾಡುತ್ತಿದೆ. ವರದಿಯೊಂದರ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಐಒಸಿ ಪ್ರತಿ ಲೀಟರ್ ಪೆಟ್ರೋಲ್ ಅನ್ನು 10 ರೂಪಾಯಿ ನಷ್ಟದಲ್ಲಿ ಮಾರಾಟ ಮಾಡಿದೆ. ಇದಲ್ಲದೇ ಡೀಸೆಲ್ ಮಾರಾಟದಲ್ಲಿ ಪ್ರತಿ ಲೀಟರ್ ಗೆ ₹ 14  ಗಳಷ್ಟು ನಷ್ಟ ಅನುಭವಿಸಿದೆ ಎಂದು ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News