7th Pay Commission : ಕೇಂದ್ರ ನೌಕರರಿಗೆ ಬಿಗ್ ನ್ಯೂಸ್ : ನಿಮಗಾಗಿ ಸರ್ಕಾರದಿಂದ ಈ ಮಹತ್ವದ ಘೋಷಣೆ!

7th Pay Commission : ಕೇಂದ್ರ ನೌಕರರಿಗೆ ಮತ್ತೆ ಸರ್ಕಾರದಿಂದ ಬಿಗ್ ನ್ಯೂಸ್ ಸಿಕ್ಕಿದೆ. ಈಗ ನೌಕರರು ತಮ್ಮ ಸ್ವಂತ ಮನೆಯ ಕನಸನ್ನು ಸುಲಭವಾಗಿ ನನಸು ಮಾಡಿಕೊಳ್ಳಬಹುದು. ಸರ್ಕಾರವು ನೌಕರರಿಗೆ ಬ್ಯಾಂಕ್‌ನಿಂದ ಪಡೆದ ಕಟ್ಟಡ ಮುಂಗಡ (ಎಚ್‌ಬಿಎ) ಮೇಲಿನ ಬಡ್ಡಿ ದರವನ್ನು ಶೇ. 7.9 ರಿಂದ ಶೇಕಡಾ 7.1 ಕ್ಕೆ ಇಳಿಸಿದೆ. ಈ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ. ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Nov 28, 2022, 04:40 PM IST
  • ಕೇಂದ್ರ ನೌಕರರಿಗೆ ಮತ್ತೆ ಸರ್ಕಾರದಿಂದ ಬಿಗ್ ನ್ಯೂಸ್
  • ನೌಕರರು ತಮ್ಮ ಸ್ವಂತ ಮನೆಯ ಕನಸು ಸುಲಭ
  • ಕೇಂದ್ರ ನೌಕರರಿಗೆ ಬಿಗ್ ರಿಲೀಫ್!
7th Pay Commission : ಕೇಂದ್ರ ನೌಕರರಿಗೆ ಬಿಗ್ ನ್ಯೂಸ್ : ನಿಮಗಾಗಿ ಸರ್ಕಾರದಿಂದ ಈ ಮಹತ್ವದ ಘೋಷಣೆ! title=

7th Pay Commission : ಕೇಂದ್ರ ನೌಕರರಿಗೆ ಮತ್ತೆ ಸರ್ಕಾರದಿಂದ ಬಿಗ್ ನ್ಯೂಸ್ ಸಿಕ್ಕಿದೆ. ಈಗ ನೌಕರರು ತಮ್ಮ ಸ್ವಂತ ಮನೆಯ ಕನಸನ್ನು ಸುಲಭವಾಗಿ ನನಸು ಮಾಡಿಕೊಳ್ಳಬಹುದು. ಸರ್ಕಾರವು ನೌಕರರಿಗೆ ಬ್ಯಾಂಕ್‌ನಿಂದ ಪಡೆದ ಕಟ್ಟಡ ಮುಂಗಡ (ಎಚ್‌ಬಿಎ) ಮೇಲಿನ ಬಡ್ಡಿ ದರವನ್ನು ಶೇ. 7.9 ರಿಂದ ಶೇಕಡಾ 7.1 ಕ್ಕೆ ಇಳಿಸಿದೆ. ಈ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ. ಇಲ್ಲಿದೆ ನೋಡಿ..

ಕೇಂದ್ರ ನೌಕರರಿಗೆ ಬಿಗ್ ರಿಲೀಫ್!

ಈಗ ನೌಕರರ ಸ್ವಂತ ಮನೆ ಕನಸು ಇನ್ನಷ್ಟು ಸುಲಭವಾಗಲಿದೆ. ಉದ್ಯೋಗಿಗಳು ಈಗ ಈ ಬಡ್ಡಿ ದರವನ್ನು 31 ಮಾರ್ಚ್ 2023 ರವರೆಗೆ ಪಡೆಯಬಹುದು. ಈ ನಿರ್ಧಾರದ ಅಡಿಯಲ್ಲಿ, ಏಪ್ರಿಲ್ 1, 2022 ರಿಂದ ಮಾರ್ಚ್ 31, 2023 ರವರೆಗೆ, ಮನೆ ನಿರ್ಮಾಣ, ಮನೆ ಅಥವಾ ಫ್ಲಾಟ್ ಖರೀದಿಗಾಗಿ ಬ್ಯಾಂಕ್‌ನಿಂದ ಪಡೆದ ಗೃಹ ಸಾಲವನ್ನು ಮರುಪಾವತಿಸಲು ಉದ್ಯೋಗಿಗಳಿಗೆ ಮುಂಗಡದ ಬಡ್ಡಿ ದರವನ್ನು ಸರ್ಕಾರ 80 ಮೂಲಾಂಕಗಳಷ್ಟು ಹೆಚ್ಚಿಸಿದೆ. ಅಂದರೆ ಶೇ.0.8ರಷ್ಟು ಕಡಿತಗೊಳಿಸಲಾಗಿದೆ.

ಇದನ್ನೂ ಓದಿ : Pension scheme : ವಿವಾಹಿತರಿಗಾಗಿ 'ಪಿಂಚಣಿ ಯೋಜನೆ' ಜಾರಿಗೆ ತಂದ ಕೇಂದ್ರ ಸರ್ಕಾರ

ಮುಂಗಡ ಬಡ್ಡಿ ದರ ಎಷ್ಟು ಗೊತ್ತಾ?

ಕೇಂದ್ರ ನೌಕರರು ಈಗ ಅಗ್ಗವಾಗಿ ಮನೆ ನಿರ್ಮಿಸಿಕೊಳ್ಳಬಹುದು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಮುಂಗಡದ ಬಡ್ಡಿದರಗಳಲ್ಲಿನ ಕಡಿತದ ಬಗ್ಗೆ ತಿಳಿಸುವ ಕಚೇರಿ ಜ್ಞಾಪಕ ಪತ್ರವನ್ನು ನೀಡಿದೆ. ಈ ಜ್ಞಾಪಕ ಪತ್ರದ ಪ್ರಕಾರ, ಸರ್ಕಾರದ ಈ ಪ್ರಕಟಣೆಯ ನಂತರ ಮಾರ್ಚ್ 31, 2023 ರವರೆಗೆ ಉದ್ಯೋಗಿಗಳು ವಾರ್ಷಿಕ ಶೇ. 7.1 ರಷ್ಟು ಬಡ್ಡಿದರದಲ್ಲಿ ಮುಂಗಡವನ್ನು ತೆಗೆದುಕೊಳ್ಳಬಹುದು, ಇದು ಮೊದಲು ವಾರ್ಷಿಕ ಶೇ. 7.9 ರಷ್ಟಿತ್ತು.

ಎಷ್ಟು ಮುಂಗಡ ತೆಗೆದುಕೊಳ್ಳಬಹುದು?

ಇದರ ಅಡಿಯಲ್ಲಿ, ಕೇಂದ್ರೀಯ ಉದ್ಯೋಗಿಗಳು ತಮ್ಮ ಮೂಲ ವೇತನದ ಪ್ರಕಾರ 34 ತಿಂಗಳವರೆಗೆ ಅಥವಾ ಗರಿಷ್ಠ 25 ಲಕ್ಷದವರೆಗೆ ಎರಡು ರೀತಿಯಲ್ಲಿ ಮುಂಗಡವನ್ನು ತೆಗೆದುಕೊಳ್ಳಬಹುದು. ಅಲ್ಲದೆ, ಮನೆಯ ವೆಚ್ಚ ಅಥವಾ ಮರುಪಾವತಿ ಸಾಮರ್ಥ್ಯ, ಉದ್ಯೋಗಿಗಳಿಗೆ ಯಾವುದು ಕಡಿಮೆಯೋ ಅದನ್ನು ಮುಂಗಡವಾಗಿ ತೆಗೆದುಕೊಳ್ಳಬಹುದು. ಅಂದರೆ, ಈ ಸೌಲಭ್ಯದಿಂದ ಸರ್ಕಾರಿ ನೌಕರರ ಮನೆ ಹೊಂದುವ ಕನಸು ತುಂಬಾ ಸುಲಭವಾಗಿದೆ.

HBA ಎಂದರೇನು ಗೊತ್ತಾ?

ಈ ಯೋಜನೆಯು 1 ಅಕ್ಟೋಬರ್ 2020 ರಿಂದ ಪ್ರಾರಂಭವಾಗಿದೆ. ಇದರ ಅಡಿಯಲ್ಲಿ, 31 ಮಾರ್ಚ್ 2023 ರವರೆಗೆ, ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಶೇ.7.1 ರಷ್ಟು ಬಡ್ಡಿ ದರದಲ್ಲಿ ಮನೆ ನಿರ್ಮಾಣ ಮುಂಗಡವನ್ನು ನೀಡುತ್ತದೆ. ವಾಸ್ತವವಾಗಿ, ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಮನೆ ನಿರ್ಮಾಣದ ಮುಂಗಡವನ್ನು ನೀಡುತ್ತದೆ, ಇದರಿಂದ ಕೇಂದ್ರ ಉದ್ಯೋಗಿ ತನ್ನ ಅಥವಾ ತಮ್ಮ ಪತ್ನಿ ಹೆಸರಿನ ಜಾಗದಲ್ಲಿ ಮನೆ ನಿರ್ಮಿಸಲು ಮುಂಗಡವನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ : LIC ಈ ಪಾಲಿಸಿಯಲ್ಲಿ ₹150 ಹೂಡಿಕೆ ಮಾಡಿ, ನಿಮ್ಮ ಮಗುವನ್ನು ಲಕ್ಷಾಧಿಪತಿ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News