7th Pay Commission Latest News: ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕೇಂದ್ರ ಸರ್ಕಾರದ ನಂತರ ಇದೀಗ ಹಲವು ರಾಜ್ಯ ಸರ್ಕಾರಗಳು ಕೂಡ ತುಟ್ಟಿ ಭತ್ಯೆಯನ್ನು ಹೆಚ್ಚಿಸಿವೆ. ಹಲವು ರಾಜ್ಯ ಸರ್ಕಾರಿ ನೌಕರರ ಡಿಎ ಇದೀಗ ಕೇಂದ್ರ ಸರ್ಕಾರಿ ನೌಕರರ ಶೇ.34ರಷ್ಟು ಡಿಎಗೆ ಸಮನಾಗಿದೆ. ಇದೇ ಸರಣಿಯಲ್ಲಿ ಮಹಾ ಸರ್ಕಾರ ಕೂಡ ತನ್ನ ಉದ್ಯೋಗಿಗಳಿಗೆ ಭರ್ಜರಿ ಸುದ್ದಿಯನ್ನು ನೀಡಿದೆ. ಈಗಾಗಲೇ ಬಾಕಿ ಉಳಿದಿದ್ದ ಡಿಎ ಹಣದ ಎರಡು ಕಂತುಗಳನ್ನು ಪಾವತಿಸಿರುವ ರಾಜ್ಯ ಸರ್ಕಾರ, ಇದೀಗ ಮೂರನೇ ಕಂತನ್ನು ಕೂಡ ಖಾತೆಗೆ ಪಾವತಿಸುತ್ತಿದೆ.
ಈ ಮೊದಲೇ ಮಹಾರಾಷ್ಟ್ರ ಸರ್ಕಾರ ಏಳನೇ ವೇತನ ಆಯೋಗದ ಅಡಿ ಬಾಕಿ ಉಳಿದಿರುವ ಹಣವನ್ನು ವರ್ಗಾಗಿಯಿಸುವುದಾಗಿ ಘೋಷಣೆ ಮಾಡಿದ್ದು ಇಲ್ಲಿ ಗಮನಾರ್ಹ ಸಂಗತಿ. ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ಎದುರಾಗಿದ್ದ ರಾಜಕೀಯ ಬಿಕ್ಕಟ್ಟಿನ ಮುನ್ನವೇ ಈ ಕುರಿತಾತ ಪೇಪರ್ ವರ್ಕ್ ಪೂರ್ಣಗೊಳಿಸಲಾಗಿದೆ.
ಇದನ್ನೂ ಓದಿ-ಕಾರು-ಬೈಕ್ ಸವಾರರಿಗೆ ಸಿಹಿ ಸುದ್ದಿ ಪ್ರಕಟಿಸಿದ ಸಚಿವ ನಿತಿನ್ ಗಡ್ಕರಿ.!
ಹೇಗೆ ಹಣ ಪಾವತಿಸಲಾಗುತ್ತದೆ?
ಮಹಾರಾಷ್ಟ್ರದಲ್ಲಿ 2019 ರಲ್ಲಿ, ರಾಜ್ಯ ಸರ್ಕಾರದ ನೌಕರರು ಸೇರಿದಂತೆ ಎಲ್ಲ ಜಿಲ್ಲಾ ಪರಿಷತ್ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ನೌಕರರಿಗೆ 7 ನೇ ವೇತನ ಆಯೋಗವನ್ನು ಜಾರಿಗೊಳಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಇದಾದ ನಂತರ 2019-20 ನೇ ಸಾಲಿನಿಂದ ಮುಂದಿನ 5 ವರ್ಷಗಳಲ್ಲಿ ಐದು ಕಂತುಗಳಲ್ಲಿ, ಡಿಎ ಬಾಕಿ ಹಣವನ್ನು ನೌಕರರಿಗೆ ಪಾವತಿಸಲು ಸರ್ಕಾರ ನಿರ್ಧರಿಸಿತ್ತು. ಈ ನಿರ್ಧಾರದ ಪ್ರಕಾರ, ಈಗಾಗಲೇ ಸರ್ಕಾರಿ ನೌಕರರು 2 ಕಂತುಗಳ ಹಣವನ್ನು ಪಡೆದಿದ್ದಾರೆ. ಈಗ ಮೂರನೇ ಕಂತು ಖಾತೆಗೆ ಸೇರುತ್ತಿದೆ. ಇದರ ನಂತರ, ನಾಲ್ಕು ಮತ್ತು ಐದನೇ ಕಂತುಗಳ ಹಣ ಬಾಕಿ ಉಳಿಯಲಿದೆ.
ಇದನ್ನೂ ಓದಿ-PM Kisan : ರೈತರೆ ಗಮನಿಸಿ : ತಪ್ಪದೆ ಈ ವಾರ ಈ ಕೆಲಸ ಮಾಡಿ, ಇಲ್ಲದಿದ್ದರೆ ಖಾತೆಗೆ ₹2000 ಬರಲ್ಲ
ನೌಕರರಿಗೆ ಭಾರಿ ಲಾಭ
ಸರ್ಕಾರದ ಈ ನಿರ್ಧಾರದಿಂದ ನೌಕರರಿಗೆ ಭಾರಿ ಲಾಭ ಸಿಗಲಿದೆ. ಸರ್ಕಾರಿ ನೌಕರರ ಖಾತೆಗೆ ಇದೀಗ ಹಣ ಬರಲಾರಂಭಿಸಿದೆ. ಒಂದು ವೇಳೆ ನೀವೂ ಕೂಡ ಮಹಾರಾಷ್ಟ್ರ ಸರ್ಕಾರದಲ್ಲಿ ನೌಕರರಾಗಿದ್ದರೆ, ತಕ್ಷಣ ನಿಮ್ಮ ಖಾತೆಯನ್ನು ಪರಿಶೀಲಿಸಿ. ಇದರ ಅಡಿಯಲ್ಲಿ ಸರ್ಕಾರದ ಗ್ರೂಪ್ ಎ ಅಧಿಕಾರಿಗಳಿಗೆ 30 ರಿಂದ 40 ಸಾವಿರ ರೂ.ಗಳ ಲಾಭ ಸಿಗಲಿದೆ. ಗ್ರೂಪ್ ಬಿ ಅಧಿಕಾರಿಗಳಿಗೆ 20 ರಿಂದ 30 ಸಾವಿರ ಲಾಭವಾಗಲಿದ್ದರೆ, ಗ್ರೂಪ್ ಸಿ ಅಧಿಕಾರಿಗಳಿಗೆ 10 ರಿಂದ 15 ಸಾವಿರ ಮತ್ತು ಗ್ರೂಪ್ ಡಿ ಅಧಿಕಾರಿಗಳಿಗೆ 8 ರಿಂದ 10 ಸಾವಿರ ರೂ.ಗಳ ಲಾಭ ಸಿಗಲಿದೆ. ಪ್ರಸ್ತುತ ಮಹಾರಾಷ್ಟ್ರ ಸರ್ಕಾರದ ನೌಕರರಿಗೆ ಶೇ.31ರಷ್ಟು ಡಿಎ ಲಾಭ ಸಿಗುತ್ತಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.