5G Spectrum Auction End: ಕಳೆದ 7 ದಿನಗಳಿಂದ 5ಜಿ ತರಂಗಾಂತರದ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು. ಇಂದು ಅಂತಿಮವಾಗಿ ಹರಾಜು ಮುಕ್ತಾಯ ಕಂಡಿದೆ. ಹರಾಜಿನಲ್ಲಿ 1.5 ಲಕ್ಷ ಕೋಟಿಗೂ ಹೆಚ್ಚು ಬಿಡ್ ದಾಖಲಾಗಿದೆ. ಈ ಬಿಡ್ ಪ್ರಕ್ರಿಯೆಯಿಂದ ಸರ್ಕಾರಕ್ಕೆ ಲಕ್ಷಾಂತರ ಕೋಟಿ ರೂ. ಆದಾಯ ಹರಿದು ಬಂದಿದೆ ಮತ್ತು ಜಿಯೋ ಮತ್ತೊಮ್ಮೆ ಈ ರೇಸ್ ಅನ್ನು ತನ್ನದಾಗಿಸಿಕೊಂಡಿದೆ. 5G ಸ್ಪೆಕ್ಟ್ರಮ್ ಹರಾಜಿನ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
ಕಳೆದ 7 ದಿನಗಳಿಂದ ನಡೆಯುತ್ತಿರುವ ಈ ಹರಾಜಿನಲ್ಲಿ ಭಾರತದ ಆಗರ್ಭ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯವರ ಕಂಪನಿ ಜಿಯೋ ಮತ್ತೊಮ್ಮೆ ಟೆಲಿಕಾಂ ಉದ್ಯಮದಲ್ಲಿ ತನ್ನ ಪಾರುಪತ್ಯವನ್ನು ಮೆರೆದಿದೆ. ಈ ಹರಾಜಿನಲ್ಲಿ ಜಿಯೋ ಅತಿ ಹೆಚ್ಚು ಬಿಡ್ ಮಾಡಿದ ಸಂಸ್ಥೆಯಾಗಿದೆ ಹೊರಹೊಮ್ಮಿದೆ. ಈ ಬಗ್ಗೆ ಸ್ವತಃ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಪೂರ್ಣಗೊಂಡ 5G ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ
ಕಳೆದ ಹಲವಾರು ವರ್ಷಗಳಿಂದ ನಿರೀಕ್ಷಿಸಲಾಗುತ್ತಿದ್ದ 5G ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಇಂದು ಯಶಸ್ವಿಯಾಗಿ ಕೊನೆಗೊಂಡಿದೆ. ಈ ಹರಾಜಿನಲ್ಲಿ ಒಟ್ಟು 1,50,173 ಕೋಟಿ ರೂ.ಗಳಿಗೆ ಬಿಡ್ ಕರೆಯಲಾಗಿತ್ತು. ಅಂದರೆ ಈ ಹರಾಜಿನಿಂದ ಭಾರತ ಸರ್ಕಾರಕ್ಕೆ 1,50,173 ಕೋಟಿ ರೂ.ಆದಾಯ ಹರಿದುಬಂದಿದೆ. ಈ ಹರಾಜಿನಲ್ಲಿ ಒಟ್ಟು 72,098 MHz ತರಂಗಾಂತರವನ್ನು ಮಾರಾಟಕ್ಕೆ ಇಡಲಾಗಿದ್ದು, ಅದರಲ್ಲಿ 51,236 MHz ಮಾರಾಟವಾಗಿದೆ.
ಯಾರು ಎಷ್ಟು ಕೋಟಿಗೆ ಬಿಡ್ ಮಾಡಿದ್ದಾರೆ
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ 5G ತರಂಗಾಂತರಕ್ಕಾಗಿ 88,078 ಕೋಟಿ ರೂ. ಬಿಡ್ ಮಾಡಿದ್ದರೆ, ಭಾರ್ತಿ ಏರ್ಟೆಲ್ ಲಿಮಿಟೆಡ್ 43,084 ಕೋಟಿ ರೂ ಬಿಡ್ ಮಾಡಿ ಎರಡನೇ ಸ್ಥಾನದಲ್ಲಿದೆ. ವೊಡಾಫೋನ್-ಐಡಿಯಾ ಲಿಮಿಟೆಡ್ 18,799 ಕೋಟಿ ಬಿಡ್ ಮಾಡಿ ಮೂರನೇ ಸ್ಥಾನದಲ್ಲಿದೆ. ಅಡಾನಿ ನೆಟ್ವರ್ಕ್ ಅತ್ಯಂತ ಕಡಿಮೆ ಬಿಡ್ ಮಾಡಿದ ಕಂಪನಿಯಾಗಿದೆ.
ಈ ಮೂರು ದೊಡ್ಡ ಟೆಲಿಕಾಂ ಕಂಪನಿಗಳ ನಂತರ, ನಾಲ್ಕನೇ ಸ್ಥಾನದಲ್ಲಿ ಅಡಾನಿ ಡೇಟಾ ನೆಟ್ವರ್ಕ್ ಲಿಮಿಟೆಡ್ ಇದೆ, ಈ ಹರಾಜಿನಲ್ಲಿ ಕಂಪನಿ ಕೇವಲ 212 ಕೋಟಿ ರೂ. ಬಿಡ್ ಮಾಡಿದ್ದು, ರಿಲಯನ್ಸ್ ಜಿಯೋ 5G ಸ್ಪೆಕ್ಟ್ರಮ್ಗಾಗಿ ಅತಿದೊಡ್ಡ ಬಿಡ್ ಮಾಡಿದ ಕಂಪನಿಯಾಗಿ ಹೊರಹೊಮ್ಮಿದೆ.
>> ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್: 24,740 MHz (700 MHz, 800 MHz, 1800 MHz, 3300 MHz ಮತ್ತು 26 GHz)
>> ಭಾರ್ತಿ ಏರ್ಟೆಲ್ ಇನ್ಫೋಕಾಮ್ ಲಿಮಿಟೆಡ್: 19,867 MHz (900 MHz, 1800 MHz, 2100 MHz, 3300 MHz ಮತ್ತು 26 GHz)
ಇದನ್ನೂ ಓದಿ-Google Pay, PhonePe ಬಳಸುವಾಗ ಈ ತಪ್ಪು ಆಗದಿರಲಿ ಎಚ್ಚರ .! ಇಲ್ಲವಾದರೆ ನಷ್ಟ ಖಂಡಿತಾ
>> Vodafone-Idea Limited: 6228 MHz (1800 MHz, 2100 MHz, 2500 MHz, 3300 MHz ಮತ್ತು 26 GHz)
ಇದನ್ನೂ ಓದಿ-JioFi ಖರೀದಿಯ ಮೇಲೆ ರೂ.1500 ಕ್ಯಾಶ್ ಬ್ಯಾಕ್, ಇಂದೇ ಈ ಅದ್ಭುತ ಕೊಡುಗೆಯ ಲಾಭ ಪಡೆಯಿರಿ
>> ಅಡಾನಿ ಡೇಟಾ ನೆಟ್ವರ್ಕ್ ಲಿಮಿಟೆಡ್: 400 MHz (26 GHz ನಲ್ಲಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.