Gold Silver Latest Price: ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇದರೊಂದಿಗೆ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ 1100 ರೂಪಾಯಿ ಮತ್ತು ಬೆಳ್ಳಿಯ ಬೆಲೆ 1500 ರೂಪಾಯಿಗಳಷ್ಟು ಕಡಿಮೆಯಾಗಿದೆ. ಇದರೊಂದಿಗೆ ಪ್ರತಿ ಹತ್ತು ಗ್ರಾಂ ಚಿನ್ನ 60,200 ರೂ.ಗೆ ತಲುಪಿದೆ. ಅದೇ ಸಮಯದಲ್ಲಿ ಬೆಳ್ಳಿಯ ಬೆಲೆ ಕೆಜಿಗೆ 75,500 ರೂ.ಗೆ ತಲುಪಿದೆ.
ಇದನ್ನೂ ಓದಿ : LPG Cylinder ಬೆಲೆ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಮೋದಿ ಸರ್ಕಾರ, ಸಿಗಲಿದೆ ಅಗ್ಗದ ದರದಲ್ಲಿ ಸಿಲಿಂಡರ್!
ತಜ್ಞರ ಪ್ರಕಾರ, ಒಂದು ವಾರದ ಹಿಂದೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದವು. ಆದರೆ ಜಾಗತಿಕ ಆರ್ಥಿಕ ಹಿಂಜರಿತ, ಹಣದುಬ್ಬರ ಮತ್ತು ಡಾಲರ್ ಸೂಚ್ಯಂಕ ಇವೆರಡರ ಬೇಡಿಕೆಯ ಮೇಲೆ ಪ್ರಭಾವ ಬೀರಿದೆ. ಇದರಿಂದಾಗಿ ಬೇಡಿಕೆ ಕಡಿಮೆಯಾದ ಕಾರಣ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಬೆಲೆಗಳಲ್ಲಿನ ಈ ಹಂತದ ಕಡಿತವು ತಾತ್ಕಾಲಿಕವಾಗಿದೆ ಮತ್ತು ಶೀಘ್ರದಲ್ಲೇ ಅವುಗಳ ಬೆಲೆಗಳು ಮತ್ತೆ ಏರಿಕೆಯಾಗುತ್ತವೆ. ಹೀಗಿರುವಾಗ ಚಿನ್ನ, ಬೆಳ್ಳಿ ಖರೀದಿಸುವ ಯೋಚನೆಯಲ್ಲಿದ್ದವರಿಗೆ ಇದೊಂದು ಸುವರ್ಣಾವಕಾಶ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತವಾಗಿದೆ ಎಂದು ಬುಲಿಯನ್ ವ್ಯಾಪಾರಿಗಳು ಹೇಳುತ್ತಾರೆ. ಇದರಿಂದ ದೇಶಿಯ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 50 ಡಾಲರ್‌ಗಳಷ್ಟು ಕುಸಿದಿದ್ದು, ಪ್ರತಿ ಔನ್ಸ್‌ಗೆ 2010 ಡಾಲರ್‌ಗಿಂತ ಕಡಿಮೆ ಬೆಲೆಗೆ ವಹಿವಾಟು ನಡೆಸುತ್ತಿದೆ. ಬೆಳ್ಳಿಯ ಬೆಲೆ ಕೂಡ ಶೇಕಡಾ 2 ರಷ್ಟು ಕುಸಿದಿದೆ ಮತ್ತು ಅದನ್ನು ಔನ್ಸ್‌ಗೆ $ 25.35 ಕ್ಕೆ ಖರೀದಿಸಿ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ : NPS Big Update: ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ! ಮೋದಿ ಸರ್ಕಾರದ ಈ ನಿರ್ಧಾರ ನಿಮಗೂ ಸಂತಸ ನೀಡಲಿದೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.