ರಾಜ್ಯದೆಲ್ಲೆಡೆ ಕಾಂಗ್ರೆಸ್ ಸರ್ಕಾರ ಬದಲಿಸಿ ಎಂಬ ಕೂಗು ಕೇಳುತ್ತಿದೆ : ಪ್ರಧಾನಿ ಮೋದಿ

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬದಲಿಸಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವಂತೆ ಜನತೆಗೆ ಪ್ರಧಾನಿ ಮೋದಿ ಕರೆ ನೀಡಿದರು.   

Last Updated : May 3, 2018, 02:49 PM IST
ರಾಜ್ಯದೆಲ್ಲೆಡೆ ಕಾಂಗ್ರೆಸ್ ಸರ್ಕಾರ ಬದಲಿಸಿ ಎಂಬ ಕೂಗು ಕೇಳುತ್ತಿದೆ : ಪ್ರಧಾನಿ ಮೋದಿ title=

ಕಲಬುರ್ಗಿ : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಲುಬುರ್ಗಿಯಲ್ಲಿ ಇಂದು ಪ್ರಚಾರ ಕೈಗೊಂಡಿರುವ ಪ್ರಧಾನಿ ಮೋದಿ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬದಲಿಸಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವಂತೆ ಜನತೆಗೆ ಕರೆ ನೀಡಿದರು. 

ಕರ್ನಾಟಕದ ಜನತೆ ಕಳೆದ 5 ವರ್ಷಗಳಿಂದ ಬಹಳ ತೊಂದರೆ ಅನುಭವಿಸಿದ್ದಾರೆ. ಹಾಗಾಗಿ ಕರ್ನಾಟಕದ ಮೂಲೆ ಮೂಲೆಯಲ್ಲೂ ಸರ್ಕಾರ ಬದಲಿಸಿ ಎಂಬ ಕೂಗು ಕೇಳಿ ಬರುತ್ತಿದೆ. ಇಂತಹ ಸುಡು ಬಿಸಿಲನ್ನೂ ಸಹಿಸಿಕೊಂಡು ಬಿಜೆಪಿ ಬೆಂಬಲಿಸಲು ನೀವೆಲ್ಲರೂ ಇಲ್ಲಿ ನೆರೆದಿದ್ದೀರಿ. ಇದರಿಂದ ಕರ್ನಾಟಕದ ಜನತೆ ಕಾಂಗ್ರೆಸ್ ಸರ್ಕಾರವನ್ನು, ಅದರ ಅನಾಚಾರಗಳನ್ನು ಸಹಿಸಲು ಸಿದ್ಧವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಮೋದಿ ಹೇಳಿದರು. 

ಈ ಬಾರಿಯ ಚುನಾವಣೆ ಯಾರನ್ನೋ ಶಾಸಕರನ್ನಾಗಿಯೋ, ಮಂತ್ರಿಯನ್ನಾಗಿಯೋ ಮಾಡುವ ಕುರಿತದ್ದಲ್ಲ. ಈ ಚುನಾವಣೆ ಕರ್ನಾಟಕ ರಾಜ್ಯದ ಯುವಕರ ಭವಿಷ್ಯದ ಬಗ್ಗೆ, ರೈತರ ಹಿತಾಸಕ್ತಿಯ ಬಗ್ಗೆ, ಹೆಣ್ಣು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ, ಕರ್ನಾಟಕದ ಉತ್ತಮ ಭವಿಷ್ಯವೇ ಈ ಚುನಾವಣೆಯ ಗುರಿ. ಹಾಗಾಗಿ ಎಲ್ಲರೂ ಜನತೆಯ ಅಭಿವೃದ್ಧಿಗೆ, ಕನಸುಗಳಿಗೆ ಬೆಂಬಲ ನೀಡುವ ಬಿಜೆಪಿಗೆ ಮತ ನೀಡಿ ಎಂದು ಪ್ರಧಾನಿ ಮೋದಿ ಕರೆ ನೀಡಿದರು. 

ವೀರ ಸೈನಿಕರನ್ನು ಗೂಂಡಾಗಳು ಎಂದು ಕಾಂಗ್ರೆಸ್ ಕರೆದಿದೆ. ಪ್ರತೀ ಕ್ಷಣ ದೇಶದ ರಕ್ಷಣೆಗೆ ನಿಲ್ಲುವ ಯೋಧರನ್ನು ಕಾಂಗ್ರೆಸ್ ಅವಮಾನ ಮಾಡಿದೆ. ಅಲ್ಲದೆ, ವಂದೇ ಮಾತರಂ ಗೀತೆಗೂ ಅವಮಾನಿಸಿರುವ ಕಾಂಗ್ರೆಸ್'ನಿಂದ ದೇಶಭಕ್ತಿ ಅಪೇಕ್ಷಿಸಳು ಸಾಧ್ಯವೇ ಎಂದು ಪ್ರಶ್ನಿಸಿದ ಮೋದಿ, ಇದೊಂದು ಘೋರ ಅಪರಾಧ. ಈ ಅಪರಾಧಕಾಗಿ ಕಾಂಗ್ರೆಸ್'ಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲೇಬೇಕಿದೆ ಎಂದು ಹೇಳಿದರು.

ಕಲಬುರ್ಗಿಯನ್ನು ತೊಗರಿ ಕಣಜ ಎನ್ನುತ್ತಾರೆ. ಇಡೀ ದೇಶದಲ್ಲಿಯೇ ಇಲ್ಲಿನ ತೊಗರಿ ಬ್ರ್ಯಾಂಡೆಡ್ ಆಗಿದೆ. ದೇಶದಲ್ಲಿ ಅರ್ಧದಷ್ಟು ತೊಗರಿ ಬೆಳೆ ಇಲ್ಲಿನ ರೈತರ ಪರಿಶ್ರಮವಾಗಿದೆ. ಆದರೆ, ಇಲ್ಲಿನ ಸರ್ಕಾರಕ್ಕೆ ತೊಗರಿ ಬೆಳೆಗಾರರ ಸಂಕಷ್ಟ ಅರ್ಥ ಮಾಡಿಕೊಳ್ಳುವ ಸೌಜನ್ಯವೂ ಇಲ್ಲ ಮೋದಿ ಆಕ್ರೋಶ ವ್ಯಕ್ತಪಡಿಸಿದರು.

Trending News