ಹೈದರಾಬಾದ್: ಬಿಜೆಪಿಯ ಆಪರೇಷನ್ ಕಮಲದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಹೈದರಾಬಾದ್ಗೆ ತೆರಳಿದ್ದಾರೆ. ರಾಜ್ಯ ರಾಜಕಾರಣ ಗಂಟೆಗೊಂದು ತಿರುವು ಪಡೆದುಕೊಳ್ಳುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಬಿಜೆಪಿಯ ಆಪರೇಷನ್ ಕಮಲದಿಂದ ತಪ್ಪಿಸಿಕೊಳ್ಳಲು ತಮ್ಮ ಶಾಸಕರನ್ನು ಹೈದರಾಬಾದ್ ಗೆ ತೆರಳಿದ್ದಾರೆ.
#Hyderabad: Visuals from Park Hyatt Hotel. Congress MP from #Karnataka, DK Suresh, says, 'They (MLAs) are coming here, we are arranging everything here. We are waiting for them, in another 2 hours they will come, JD(S) and Congress both.' pic.twitter.com/CGDVINUOSU
— ANI (@ANI) May 18, 2018
ಈಗಲ್ ಟನ್ ರೆಸಾರ್ಟ್ ನಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿದ್ದ ಶಾಸಕರಿಗೆ ವಿಶೇಷ ವಿಮಾನಕ್ಕೆ ಕೇಂದ್ರ ಸರ್ಕಾರದ ಅಧೀನದ ನಾಗರೀಕ ವಿಮಾನಯಾನ ಸಚಿವಾಲಯ ನಿರಾಕರಿಸಿದೆ ಎಂದು ಹೇಳಲಾಗುತ್ತಿದ್ದು, ಕಾಂಗ್ರೆಸ್- ಜೆಡಿಎಸ್ ನಾಯಕರು ಹೈದರಾಬಾದ್ ತೆರಳಿದ್ದಾರೆ.
ಕಾಂಗ್ರೆಸ್ ಶಾಸಕರು ಹೈದರಾಬಾದ್ ಹೆದ್ದಾರಿಯಲ್ಲಿ ಬಸ್ ಬದಲಾಯಿಸಿದ್ದಾರೆ. ಜೆಡಿಎಸ್ ಶಾಸಕರ ಜತೆಗೂಡಿ ಎಲ್ಲಾ ಶಾಸಕರು ಹೈದರಾಬಾದ್ಗೆ ತೆರಳಿದ್ದಾರೆ ಎಂದು ಶಾಸಕರು ಬಸ್ ಬದಲಾಯಿಸುತ್ತಿರುವ ವಿಡಿಯೊದೊಂದಿಗೆ ಎಎನ್ಐ ಟ್ವೀಟ್ ಮಾಡಿದೆ.
#WATCH Congress MLAs changing buses on #Hyderabad Highway. The MLAs along with JD(S) MLAs will be staying in Hyderabad #KarnatakaElections2018 pic.twitter.com/eUk3dFd4yq
— ANI (@ANI) May 17, 2018
ಹೈದರಾಬಾದಿನ ಬಂಜಾರಾ ಹಿಲ್ಸ್ ನಲ್ಲಿರುವ ಪಾರ್ಕ್ ಅಯಾತ್ ಹೊಟೇಲ್ ಬದಲಿಗೆ ತಾಜ್ ಕೃಷ್ಣ ಹೊಟೇಲ್ ಗೆ ಕಾಂಗ್ರೆಸ್- ಜೆಡಿಎಸ್ ಶಾಸಕರು ತೆರಳಿದ್ದಾರೆ.
Karnataka Congress MLAs arrive at #Hyderabad's Taj Krishna Hotel, Telangana Pradesh Congress Committee (TPCC) head Uttam Kumar Reddy also present. pic.twitter.com/BTSwh4qtmU
— ANI (@ANI) May 18, 2018