ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವ ಭರವಸೆ ನೀಡಿದ ಮೋದಿ

ಇಡೀ ದೇಶದಲ್ಲಿನ ಎಲ್ಲ 'ಸ್ಟಾರ್ಟ್ ಅಪ್' ಹಬ್ ಗಳಿಗೆ ತವರು ಎಂದರೆ ಅದು ಬೆಂಗಳೂರು. ಬೆಂಗಳೂರಿನ ಯುವಜನತೆಯ ತಾಕತ್ತು ಇಡೀ ಜಗತ್ತಿನಲ್ಲಿಯೇ ವಿಶೇಷ ಸ್ಥಾನಮಾನ ಗಳಿಸಿದೆ- ಪ್ರಧಾನಿ ಮೋದಿ

Last Updated : May 7, 2018, 10:41 AM IST
ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ  ಸ್ಥಾಪಿಸುವ ಭರವಸೆ ನೀಡಿದ ಮೋದಿ title=
Pic: Twitter@BJP4India

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಮೋ ಆಪ್ ಮೂಲಕ ಕರ್ನಾಟಕ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವ ಭರವಸೆ ನೀಡಿದರು.

ಸೋಮವಾರ ಬೆಳಿಗ್ಗೆ 09:00ಕ್ಕೆ ಕರ್ನಾಟಕ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಮೋದಿ, ಕರ್ನಾಟಕದಲ್ಲಿ ಇಂದು ಬಿಜೆಪಿ ಪರ ಎದ್ದಿರುವ ಸುನಾಮಿಯ ಹಿಂದಿರುವ ಯುವ ಕಾರ್ಯಕರ್ತರ ಶ್ರಮ, ಹುಮ್ಮಸ್ಸು ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ ಎಂದು ಸಂತಸ ವ್ಯಕ್ತ ಪಡಿಸಿದ ಪ್ರಧಾನಿ, ಕರ್ನಾಟಕದ ನನ್ನ ಎಲ್ಲ ಯುವಮಿತ್ರರಿಗೆ ತಮ್ಮ ಅಭಿನಂದಿಸಿದರು. 

ದೇಶಕ್ಕೆ ಅತಿ ಹೆಚ್ಚು ವೀರಯೋಧರನ್ನು ಕೊಡುಗೆಯಾಗಿ ನೀಡಿರುವ ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಿ, ಅಲ್ಲಿ ಅತ್ಯುತ್ತಮ ಸೌಲಭ್ಯದೊಂದಿಗೆ, ತರಬೇತಿ ಹಾಗೂ ಕ್ರೀಡಾ ನಿರ್ವಹಣೆಗೆ ಸೂಕ್ತ ಸೌಲಭ್ಯ ಒದಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಮೋದಿ ಭರವಸೆ ನೀಡಿದರು.

'ಸ್ಟಾರ್ಟ್ ಅಪ್' ಹಬ್ ಗಳಿಗೆ ತವರು ಬೆಂಗಳೂರು 
ಇಡೀ ದೇಶದಲ್ಲಿನ ಎಲ್ಲ 'ಸ್ಟಾರ್ಟ್ ಅಪ್' ಹಬ್ ಗಳಿಗೆ ತವರು ಎಂದರೆ ಅದು ಬೆಂಗಳೂರು. ಬೆಂಗಳೂರಿನ ಯುವಜನತೆಯ ತಾಕತ್ತು ಇಡೀ ಜಗತ್ತಿನಲ್ಲಿಯೇ ವಿಶೇಷ ಸ್ಥಾನಮಾನ ಗಳಿಸಿದೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. 

ಕರ್ನಾಟಕದ ನನ್ನೆಲ್ಲ ಯುವಮಿತ್ರರಿಗೆ ನಾನು ಭರವಸೆ ನೀಡುತ್ತಿದ್ದೇನೆ. ಮೇ 15 ರಂದು ಬಿಜೆಪಿಯ ಸರ್ಕಾರ ಅಧಿಕಾರಕ್ಕೇರವುದು ನಿಶ್ಚಿತ. ಸಮೃದ್ಧ ಕರ್ನಾಟಕದ ನಿರ್ಮಾಣಕ್ಕೆ ಬಿಜೆಪಿಯೊಂದಿಗೆ ಕೈ ಜೋಡಿಸಿ ಎಂದು ಕರೆ ನೀಡಿದ ಮೋದಿ, ಮುಖ್ಯಮಂತ್ರಿಯ ಯುವ ನಾಯಕರ ಕಾರ್ಯಕ್ರಮವನ್ನು ಸಿಎಂಓ ಅಡಿಯಲ್ಲಿ ನಾವು ಪ್ರಾರಂಭಿಸುತ್ತೇವೆ. 50 ಪ್ರತಿಷ್ಠಿತ ಅಭ್ಯರ್ಥಿಗಳನ್ನು ರಾಜ್ಯದ ಆಡಳಿತದಲ್ಲಿ ಸಹಾಯ ಮಾಡಲು ಆಯ್ಕೆ ಮಾಡಲಾಗುತ್ತದೆ ಎಂದು ನಮೋ ತಮ್ಮ ಸಂವಾದದಲ್ಲಿ ಹೇಳಿದರು.

ನವ ಭಾರತ ನಿರ್ಮಾಣಕ್ಕಾಗಿ, ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಅಡಿಯಲ್ಲಿ 1 ಕೋಟಿ ಯುವಕರಿಗೆ ಸ್ಕಿಲ್ ಟ್ರೈನಿಂಗ್ ಮಾಡಲಾಗಿದೆ. ಮುದ್ರಾ ಯೋಜನೆ ಅಡಿಯಲ್ಲಿ 5 ಲಕ್ಷ ಕೋಟಿ  ರೂ. ಲೋನ್ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ನಮೋ ತಿಳಿಸಿದರು.

ನಮ್ಮ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಯಾವುದೇ ಸ್ಥಳವಿಲ್ಲ. ಆದರೆ, ಅಂತಹ ಹಿಂಸೆ ಕೆಲವು ರಾಜ್ಯಗಳಲ್ಲಿ ಏರಿಕೆಯಾಗಿರುವುದನ್ನು ನಾವು ಕಂಡಿದ್ದೇವೆ. ಕರ್ನಾಟಕದಲ್ಲಿ ಕೂಡಾ, ನಮ್ಮ ಕಾರ್ಮಿಕರ ಹತ್ಯೆ ನಡೆದಿರುವುದನ್ನು ನಾವು ನೋಡಿದ್ದೇವೆ. ಇದು ಅತ್ಯಂತ ಖಂಡನೀಯವಾಗಿದೆ ಎಂದು ಕಾರ್ಯಕರ್ತರ ಹತ್ಯೆ ಬಗೆಗೆ ನಮೋ ವಿಷಾದ ವ್ಯಕ್ತಪಡಿಸಿದರು.

Trending News