ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಹೈಕಮಾಂಡ್ ಗೆ ಶಾಕ್ ನೀಡಿದ ಅಂಬರೀಶ್

ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಲ್ಲ- ಅಂಬರೀಶ್

Last Updated : Apr 21, 2018, 02:20 PM IST
ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಹೈಕಮಾಂಡ್ ಗೆ ಶಾಕ್ ನೀಡಿದ ಅಂಬರೀಶ್ title=

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ರೆಬಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ಅಂಬರೀಶ್ ಇದೀಗ ರಾಜಕೀಯದಲ್ಲೂ ರೆಬಲ್ ಆಗುವುದರ ಮೂಲಕ ಕಾಂಗ್ರೆಸ್ ಹೈ ಕಮಾಂಡ್ ಗೆ ಶಾಕ್ ನೀಡಿದ್ದಾರೆ. ಎರಡು ದಿನದ ಹಿಂದೆಯಷ್ಟೇ ಕೇವಲ ಶಾಸಕನಾಗಲು ನಾನೇಕೆ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದಿದ್ದ ಅಂಬರೀಶ್, ಇಂದು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ತಿಳಿಸಿದ್ದಾರೆ.

ಕೇವಲ ಶಾಸಕನಾಗಿ ನಾನೇಕೆ ಚುನಾವಣೆಗೆ ಸ್ಪರ್ಧಿಸಲಿ. ನನ್ನನ್ನು ಕೇವಲ ಶಾಸಕನಾಗಲು ನಾನೇಕೆ ಚುನಾವಣೆಗೆ ಸ್ಪರ್ಧೆ ಮಾಡಲಿ. ನನ್ನನ್ನ ಕೇಳದೇ ಸಚಿವ ಸ್ಥಾನದಿಂದ ತೆಗೆದಿದ್ದೀರಿ. ಬಳಿಕ ನನ್ನನ್ನು ಕ್ಯಾರೆ ಎನ್ನಲಿಲ್ಲ. ಒಂದು ವೇಳೆ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ನನಗೆ ಏನು ಸ್ಥಾನಮಾನ ಕೊಡ್ತೀರಾ? ಈ ಬಗ್ಗೆ ಮೊದಲೇ ನಿರ್ಧಾರ ಮಾಡಿ ತಿಳಿಸಿ, ಜತೆಗೆ ಉಸ್ತುವಾರಿ ಸಹ ನನಗೆ ನೀಡಬೇಕು ಎಂದು ಷರತ್ತು ವಿಧಿಸಿದ್ದ ಅಂಬರೀಶ್ ಜತೆ ಮತ್ತೊಮ್ಮೆ ಮಾತುಕತೆ ನಡೆಸಿ ಮನವೊಲಿಸಲು ತೆರೆಳಿದ್ದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಬರಿಗೈಯಲ್ಲಿ ಹಿಂದಿರುಗಿದ್ದಾರೆ. 

ನನ್ನನ್ನು ಕೇಳದೆ ಸಚಿವ ಸ್ಥಾನದಿಂದ ಕೆಳಗಿಳಿಸಿ ರಾಜೀನಾಮೆ ಕೊಡಿಸಿದಿರಿ. ಈಗೇಕೆ ನನ್ನನ್ನು ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಿರಿ. ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಕೈ ನಾಯಕರಿಗೆ ಸ್ಪಷ್ಟ ಮಾಹಿತಿ ರವಾನಿಸಿದ್ದಾರೆ.

 

Trending News