ಮೈತ್ರಿ ಸರ್ಕಾರಕ್ಕೆ ಭರ್ಜರಿ ಸಿದ್ದತೆ: ದೆಹಲಿಯಲ್ಲಿಂದು ಹೆಚ್.ಡಿ. ಕುಮಾರಸ್ವಾಮಿ

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಇಂದು ಮಧ್ಯಾಹ್ನ 03:30ಕ್ಕೆ ದೆಹಲಿಯ ತುಘಲಕ್ ಲೈನ್ ನಲ್ಲಿರುವ ಮನೆ ನಂ. 12 ರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.

Last Updated : May 21, 2018, 10:37 AM IST
ಮೈತ್ರಿ ಸರ್ಕಾರಕ್ಕೆ ಭರ್ಜರಿ ಸಿದ್ದತೆ: ದೆಹಲಿಯಲ್ಲಿಂದು ಹೆಚ್.ಡಿ. ಕುಮಾರಸ್ವಾಮಿ  title=

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೊದಲು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸೋಮವಾರ 2:30 ಕ್ಕೆ ದೆಹಲಿಗೆ ಆಗಮಿಸಲ್ಲಿದ್ದಾರೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸುವಂತೆ ಆಮಂತ್ರಣ ನೀಡಲು ಹೆಚ್.ಡಿ.ಕೆ ದೆಹಲಿಗೆ ಆಗಮಿಸುತ್ತಿದ್ದು, ಇಂದು ಮಧ್ಯಾಹ್ನ 03:30ಕ್ಕೆ ದೆಹಲಿಯ ತುಘಲಕ್ ಲೈನ್ ನಲ್ಲಿರುವ ಮನೆ ನಂ. 12 ರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಆಮಂತ್ರಣ ನೀಡಲಿದ್ದಾರೆ. ನಂತರ ನಂ 10, ಜನ್ ಪಥ್ ನಲ್ಲಿರುವ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ನಿವಾಸಕ್ಕೆ ಭೇಟಿ ನೀಡಿ ಸೋನಿಯಾ ಅವರನ್ನೂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಳು ಬೆಂಗಳೂರಿಗೆ ಬರಲು ಆಹ್ವಾನಿಸಲಿದ್ದಾರೆ.

ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ತಮ್ಮ ಶಪಥ ಸಮಾರಂಭದಲ್ಲಿ ಭಾಗವಹಿಸಬೇಕೆಂದು ಕುಮಾರಸ್ವಾಮಿ ಬಯಸಿದ್ದು, ಕರ್ನಾಟಕದಲ್ಲಿ ಐದು ವರ್ಷಗಳ ಪೂರ್ಣಾವಧಿ ಆಡಳಿತ ನಡೆಸಲು ಸಹಕರಿಸುವಂತೆ ರಾಹುಲ್ ಹಾಗೂ ಸೋನಿಯಾ ಜತೆ ಸಂವಹನ ನಡೆಸಲಿದ್ದಾರೆ. ವಾಸ್ತವವಾಗಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸಚಿವ ಸ್ಥಾನದ ಬಗ್ಗೆ ಹಗ್ಗಾ-ಜಗ್ಗಾಟ ಈಗಾಗಲೇ ಪ್ರಾರಂಭವಾಗಿದೆ.

ಕಾಂಗ್ರೆಸ್ ಉಪ ಮುಖ್ಯಮಂತ್ರಿಯ ಹುದ್ದೆ ಜತೆಗೆ ತನ್ನ ಸಚಿವ ಸಂಪುಟದ 20 ಕಾಂಗ್ರೆಸ್ ಸಚಿವರು ಇರುವುದಾಗಿ ಕುಮಾರಸ್ವಾಮಿಗೆ ತಿಳಿಸಿದ್ದಾರೆ. ಇನ್ನು ಜೆಡಿಎಸ್ ನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಹುದ್ದೆ ಜತೆಗೆ ಹಣಕಾಸು ಸಚಿವ ಸ್ಥಾನ ಹಾಗೂ  ಪಕ್ಷದ ಇತರೆ  13 ಶಾಸಕರಿಗೆ ವಿವಿಧ ಖಾತೆ ಹಂಚಿಕೆ ಮಾಡಲಾಗುತ್ತದೆ ಎನ್ನಲಾಗಿದೆ.

Trending News