ಮತದಾನಕ್ಕೆ ಚುನಾವಣಾ ಆಯೋಗದ ಸಕಲ ಸಿದ್ಧತೆ

ಮತದಾನ ಪ್ರಕ್ರಿಯೆ ಬೆಳಿಗ್ಗೆ 07:00 ಗಂಟೆಯಿಂದ ಪ್ರಾರಂಭವಾಗಲಿದೆ.

Last Updated : May 12, 2018, 07:21 AM IST
ಮತದಾನಕ್ಕೆ ಚುನಾವಣಾ ಆಯೋಗದ ಸಕಲ ಸಿದ್ಧತೆ title=

ಬೆಂಗಳೂರು: ಇಡೀ ದೇಶದ ಚಿತ್ತ ಈಗ ಕರ್ನಾಟಕದತ್ತ ನೆಟ್ಟಿದೆ. ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭೆ ಚುನಾವಣಾ ಮತದಾನ ಇಂದು(ಮೇ 12). 222 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯವನ್ನು ಪ್ರತಿಯೊಬ್ಬ ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ
ಬರೆಯಲಿದ್ದಾರೆ.

ರಾಜಾದ್ಯಂತ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಮತದಾನ ಪ್ರಕ್ರಿಯೆ ಬೆಳಿಗ್ಗೆ 07:00 ಗಂಟೆಯಿಂದ ಪ್ರಾರಂಭವಾಗಲಿದೆ. ಮತದಾನಕ್ಕೆ ರಾಜ್ಯಾದ್ಯಂತ 56,696 ಮತಗಟ್ಟೆಗಳನ್ನು ನಿರ್ಮಿಸಿದೆ. 

ಕರ್ನಾಟಕ ವಿಧಾನಸಭೆಗೆ ಈ ಭಾರಿ ನಡೆಯುತ್ತಿರುವ ಮತದಾರ-ಸ್ನೇಹಿಯಾಗಿದೆ. ವಿಷಯಾಧರಿತ ಮತಗಟ್ಟೆಗಳನ್ನು ರೂಪಿಸಿದ್ದೇ ಅಲ್ಲದೆ ಖ್ಯಾತನಾಮರ ಮೂಲಕ ಮತದಾರರಲ್ಲಿ ಸ್ಫೂರ್ತಿ ತುಂಬಲಾಗಿದೆ. ಇದು ಸಮರ್ಥ ನಿರ್ವಹಣೆಯ ಚುನಾವಣೆಯಾಗಿ ಮಾತ್ರವಲ್ಲದೆ ಅತ್ಯಂತ ಹೆಚ್ಚಿನ ಸಂಖ್ಯೆಯ ಮತದಾರ-ಸ್ನೇಹಿ ಉಪಕ್ರಮಗಳಿಂದ ಇತಿಹಾಸ ನಿರ್ಮಿಸಲಿದೆ. ಈ ಉಪಕ್ರಮಗಳು ಹೀಗಿವೆ. 

  • ಆದಿವಾಸಿಗಳಲ್ಲಿ ಜಾಗೃತಿ
  • ಪಿಂಕ್ ಸಖಿ ಮತಗಟ್ಟೆಗಳು
  • ಬುಡಕಟ್ಟು ಮತಗಟ್ಟೆಗಳು
  • ವಿಶೇಷ ಚೇತನರ ಮತಗಟ್ಟೆಗಳು
  • ಚುನಾವಣಾ ಧ್ಯೇಯಗೀತೆ
  • ಪ್ರಚಾರ ರಾಯಭಾರಿಗಳು
  • ಅಭ್ಯರ್ಥಿಗಳ ಛಾಯಾಚಿತ್ರ
  • ಮತದಾರರ ಚೀಟಿಗಳು
  • ಚುನಾವಣೆಯ ವಸ್ತು
  • ಇವಿಎಂ ಪ್ರಾತ್ಯಕ್ಷಿಕೆ
  • ಚುನಾವಣಾ ಕ್ವಿಜ್ -ಆ್ಯಪ್ ಬಿಡುಗಡೆ
  • ಡೈರೆಕ್ಟರಿ ಆ್ಯಪ್
  • ಎಂಸಿಸಿ ಆ್ಯಪ್
  • ನ್ಯಾವಿಗೇಟರ್ ಆ್ಯಪ್
  • ಚುನಾವಣಾ ಆ್ಯಪ್

ಚುನಾವಣಾ ಆ್ಯಪ್ ನಿಮಗೆ ನಿಮ್ಮ ಪ್ರಸ್ತುತ ಸ್ಥಳದಲ್ಲಿರುವ ಮತಕೇಂದ್ರ ಕುರಿತು ಮಾರ್ಗದರ್ಶನ ನೀಡುತ್ತದೆ. ನಿಮ್ಮಎಪಿಕ್ ಸಂಖ್ಯೆ ಮತ್ತು ಹೆಸರು ಬಳಸಿ ಮಾಹಿತಿ ಹುಡುಕಲು, ನಿಮ್ಮ ಮತಗಟ್ಟೆ ಕಂಡುಕೊಳ್ಳಲು, ವ್ಹೀಲ್‍ಚೇರ್ ಬುಕ್ ಮಾಡಲು, ನಿಮ್ಮ ಅಭ್ಯರ್ಥಿಯನ್ನು ತಿಳಿಯಲು ಮತ್ತಿತರ ಮಾಹಿತಿಗೆ ನೆರವಾಗುತ್ತದೆ.

Trending News