ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಸಹಿ ಪಡೆದು ರಾಜ್ಯಪಾಲರಿಗೆ ನೀಡಲು ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ. ಸರ್ಕಾರ ರಚನೆಗೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದರೆ ಒಳ್ಳೆಯದು. ಇಲ್ಲವಾದರೆ ಶಾಸಕರನ್ನು ಆಪರೇಷನ್ ಕಮಲದಿಂದ ರಕ್ಷಿಸಲು ರೆಸಾರ್ಟ್ ಮೊರೆ ಹೋಗಲಿರುವ ಕೈ ನಾಯಕರು ಸಿದ್ಧತೆ ನಡೆಸಿದ್ದಾರೆ.
ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ವಿಶೇಷ ಬಸ್ ನಲ್ಲಿ ಕೈ ನಾಯಕರು ಕೇರಳದ ಕೊಚ್ಚಿನ್ ಗೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಜೆಪಿಯಿಂದ ಕಾಂಗ್ರೆಸ್ ಶಾಸಕರ ಸೆಳೆಯುವ ಪ್ರಯತ್ನ ನಡೆದಿದೆ- ಡಿಕೆಶಿ
ನಮ್ಮ ಶಾಸಕರ ಮೇಲೆ ಬಹಳಷ್ಟು ಒತ್ತಡವಿದೆ. ಬಿಜೆಪಿಯಿಂದ ಕಾಂಗ್ರೆಸ್ ಶಾಸಕರ ಸೆಳೆಯುವ ಪ್ರಯತ್ನ ನಡೆದಿದೆ. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಸಾಕಷ್ಟು ಸ್ಥಾನಗಳನ್ನು ಹೊಂದಿರುವುದರಿಂದ ಶಾಸಕರನ್ನು ಸೆಳೆಯುವ ಯತ್ನ ಫಲ ನೀಡುವುದಿಲ್ಲ. ರಾಜ್ಯದ ಜನತೆ ಎಲ್ಲವನ್ನೂ ವೀಕ್ಷಿಸುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
They (BJP) are poaching our MLAs, we know that. Everyday there is a lot of pressure. But it not so easy because two parties have the necessary number. People are watching this: DK Shivakumar, Congress #KarnatakaElections2018 pic.twitter.com/ByrMuW2o9X
— ANI (@ANI) May 16, 2018
ಇನ್ನು ಶಾಸಕರನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ, ಹೌದು ಖಂಡಿತವಾಗಿ ಒಂದು ಯೋಜನೆ ಇದೆ. ನಾವು ನಮ್ಮ ಶಾಸಕರನ್ನು ಕಾಪಾಡಿಕೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
Yes definitely there is a plan. We have to safeguard our MLAs, We will let you know what is the plan: DK Shivakumar, Congress on being asked if Congress MLAs in Karnataka will be shifted somewhere else pic.twitter.com/WxyIDAFLcW
— ANI (@ANI) May 16, 2018