ನನ್ನ ಪತ್ನಿಗೆ ಬಿಜೆಪಿಯಿಂದ ಯಾವುದೇ ಕರೆ ಬಂದಿಲ್ಲ: ಕಾಂಗ್ರೆಸ್ ಶಾಸಕ

ಇವತ್ತು ನ್ಯೂಸ್ ಚಾನಲ್ ಗಳಲ್ಲಿ ನನ್ನ ಪತ್ನಿಯೊಂದಿಗೆ ಬಿಜೆಪಿಯವರು ನಡೆಸಿದ್ದಾರೆ ಎನ್ನುವ ಟೇಪ್ ಬಿಡುಗಡೆ ವಿಷಯ, ಸದನದಲ್ಲಿದ್ದ ನನಗೆ ತಡವಾಗಿ ಮಾಹಿತಿ ಬಂತು- ಶಿವರಾಂ ಹೆಬ್ಬಾರ್  

Last Updated : May 21, 2018, 11:54 AM IST
ನನ್ನ ಪತ್ನಿಗೆ ಬಿಜೆಪಿಯಿಂದ ಯಾವುದೇ ಕರೆ ಬಂದಿಲ್ಲ: ಕಾಂಗ್ರೆಸ್ ಶಾಸಕ title=

ಬೆಂಗಳೂರು: ಯಲ್ಲಾಪುರದ ಕಾಂಗ್ರೆಸ್ ಶಾಸಕ ಶಿವರಾಂ ಹೆಬ್ಬಾರ್ ತಮ್ಮ ಪತ್ನಿಗೆ ಬಿಜೆಪಿಯಿಂದ ಯಾವುದೇ ಕರೆ ಬಂದಿಲ್ಲ ಎಂದು ಹೇಳುವ ಮೂಲಕ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ಯಲ್ಲಾಪುರದ ಕಾಂಗ್ರೆಸ್ ಶಾಸಕ ಶಿವರಾಂ ಹೆಬ್ಬಾರ್, ಮಾನ್ಯರೇ

ಇವತ್ತು ನ್ಯೂಸ್ ಚಾನಲ್ ಗಳಲ್ಲಿ ನನ್ನ ಪತ್ನಿಯೊಂದಿಗೆ ಬಿಜೆಪಿಯವರು ನಡೆಸಿದ್ದಾರೆ ಎನ್ನುವ ಟೇಪ್ ಬಿಡುಗಡೆ ವಿಷಯ, ಸದನದಲ್ಲಿದ್ದ ನನಗೆ ತಡವಾಗಿ ಮಾಹಿತಿ ಬಂತು.

ಇದು ನನ್ನ ಹೆಂಡತಿಯ ದ್ವನಿಯೂ ಅಲ್ಲ ಮತ್ತು ನನ್ನ ಹೆಂಡತಿಗೆ ಯಾರ ಪೋನ್ ಕರೆ ಬಂದೂ ಇಲ್ಲ. ರಾಜಕೀಯ ಕಾರಣಕ್ಕಾಗಿ ಈ ರೀತಿ ಸುಳ್ಳು ಟೇಪ್ ಗಳನ್ನು ಯಾರೇ ಬಿಡಿಗಡೆ ಮಾಡಿದರೂ ಅದಕ್ಕೆ ನನ್ನ ದಿಕ್ಕಾರ.

ಈ ಆಡಿಯೋ ಟೇಪ್ ಫೇಕ್.... ಇದನ್ನು ಖಂಡಿಸುತ್ತೇನೆ. ನನ್ನ ಕ್ಷೇತ್ರದ ಜನರು ಮತ್ತೊಮ್ಮೆ ಸೇವೆ ಮಾಡಲು ನನಗೆ ಅವಕಾಶ ಕೊಟ್ಟಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ನನ್ನ ಜನಪರ ಕೆಲಸಗಳು ಮುಂದುವರಿಯಲಿದೆ ಎಂದು ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.

Trending News