ಕಾಂಗ್ರೆಸ್ ದಲಿತರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ: ನರೇಂದ್ರ ಮೋದಿ

 ಬಿಜೆಪಿ ದಲಿತಪರ ಕಾರ್ಯಗಳಿಗೆ ನೀಡಿದಷ್ಟು ಕೊಡುಗೆಗಳನ್ನು ಇನ್ಯಾವ ಪಕ್ಷವು ಕೊಟ್ಟಿಲ್ಲ ಎದ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Last Updated : May 10, 2018, 10:01 AM IST
ಕಾಂಗ್ರೆಸ್ ದಲಿತರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ: ನರೇಂದ್ರ ಮೋದಿ title=

ನವದೆಹಲಿ : ಕಾಂಗ್ರೆಸ್ ಪಕ್ಷ ಮೀಸಲಾತಿ ವಿಷಯದಲ್ಲಿ ದಲಿತರನ್ನು ದಾರಿ ತಪ್ಪಿಸುವ ಘೋರ ಕೆಲಸಕ್ಕೆ 'ಕೈ' ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಬೆಳಿಗ್ಗೆ ಕರ್ನಾಟಕ ಬಿಜೆಪಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಮತ್ತು ಸ್ಲಂ ಮೋರ್ಚಾ ಕಾರ್ಯಕರ್ತರ ಜತೆ ನಮೋ ಆಪ್ ಮೂಲಕ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು, ಬಿಜೆಪಿ ದಲಿತಪರ ಕಾರ್ಯಗಳಿಗೆ ನೀಡಿದಷ್ಟು ಕೊಡುಗೆಗಳನ್ನು ಇನ್ಯಾವ ಪಕ್ಷವು ಕೊಟ್ಟಿಲ್ಲ. ಕಾಂಗ್ರೆಸ್ ದಲಿತರ ವಿರೋಧಿ ಮಾತ್ರವಲ್ಲದೇ, ಹಿಂದುಳಿದ ಜನಾಂಗದ(ಓಬಿಸಿ )ನಿಗಮ ಸ್ಥಾಪನೆಗೂ ವಿರೋಧ ವ್ಯಕ್ತಪಡಿಸಿತ್ತು. ಕಾಂಗ್ರೆಸ್ ಕೇವಲ ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದೆ. ಅದ್ಯಾವುದನ್ನೂ ನಂಬಬೇಡಿ ಎಂದು ಹೇಳಿದರು.

ಎಷ್ಟೇ ಅಡೆತಡೆಗಳಿದ್ದರೂ ಭಾರತ ಜಗತ್ತಿನಲ್ಲಿಯೇ ಅತ್ಯುನ್ನತ ಸ್ಥಾನಕ್ಕೇರುವುದು ನಿಶ್ಚಿತ ಎಂದು ಭಾರತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಹಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಅಂಬೇಡ್ಕರ್ ವಿಚಾರಗಳು, ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಗಳನ್ನು ಬಿಜೆಪಿ ಅತೀ ಆಸಕ್ತಿಯಿಂದ ಕೈಗೊಳ್ಳುತ್ತಿದೆ. ಅಂಬೇಡ್ಕರ್ ಅವರ ಜೀವನಕ್ಕೆ ಸಂಬಂಧಿಸಿದಂತೆ 5 ಪ್ರಮುಖ ಸ್ಥಳಗಳನ್ನು 'ಪಂಚ ತೀರ್ಥ'ಕ್ಷೇತ್ರಗಳಾಗಿ ಅಭಿವೃದ್ಧಿಪಡಿಸಿ ಆ ಮಹಾನ್ ಚೇತನಕ್ಕೆ ಗೌರವ ಸಲ್ಲಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಮೋದಿ ಹೇಳಿದರು.

ಅಂಬೇಡ್ಕರ್ ರನ್ನು ಕಾಂಗ್ರೆಸ್ ಬಹಳಷ್ಟು ಅವಮಾನಪಡಿದೆ. ಅವರನ್ನು ಸೋಲಿಸಿ ಅವಮಾನ ಪಡಿಸಿದ್ದು ಅಲ್ಲದೇ ಹಾಗೂ ಭಾರತರತ್ನ ಪ್ರಶಸ್ತಿ ನೀಡಲು ಕೂಡ ಮನಸ್ಸು ಮಾಡಲಿಲ್ಲ. ಆ ಮಹಾನ್ ಚೇತನಕ್ಕೆ ಭಾರತ ರತ್ನ ಪ್ರಶಸ್ತಿ ನೀಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ಅಲ್ಲದೆ, ದಲಿತ ಮತ್ತು ಹಿಂದುಳಿದ ವರ್ಗದ ಅತಿ ಹೆಚ್ಚು ಸಂಸದರನ್ನು ಬಿಜೆಪಿ ಚುನಾಯಿಸಿ ಲೋಕ ಸಭೆಗೆ ಕಳಿಸಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೂ ಮೊದಲು ಮಹಾತ್ಮ ಫುಲೆ ಜಾತಿಯ ತಾರತಮ್ಯದ ವಿರುದ್ಧ ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿದ್ದರು. ಮಹಾತ್ಮ ಫುಲೆ ನಮ್ಮ ಪಕ್ಷಕ್ಕೆ ಸ್ಫೂರ್ತಿದಾಯಕ ವಾಗಿದ್ದಾರೆ ಎಂದರು.

ಪ್ರಸ್ತುತ ಇರುವ ಎಲ್ಲಾ ಎಸ್‍ಸಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಹೆಚ್ಚಿಸಲು, 600 ಎಸ್‍ಸಿ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಗಲು ರೂ 3,000 ಕೋಟಿ ಮೊತ್ತದ “ಬಾಬು ಜಗಜೀವನ ರಾಮ್ ವಿದ್ಯಾರ್ಥಿವೇತನ ಯೋಜನೆ” ಸ್ಥಾಪಿಸಲ್ಲಿದ್ದು, ಸಾಂಪ್ರದಾಯಿಕ ಕಸುಬುಗಳನ್ನು ಲಾಭದಾಯಕವನ್ನಾಗಿಸಲು ಮತ್ತು ಸಾಂಪ್ರದಾಯಿಕ ಕಸುಬು ನಡೆಸುವವರ ಕಲ್ಯಾಣಕ್ಕಾಗಿ “ಒಬಿಸಿ ನಿಧಿ”ಯಡಿ ರೂ 1,000 ಕೋಟಿ ಅನುದಾನ ನೀಡುವುದಾಗಿ ಮೋದಿ ಹೇಳಿದರು. 

ಪರಿವಾರ ಮತ್ತು ತಳವಾರ ಸಮುದಾಯದ ಬಹುದಿನಗಳ ಬೇಡಿಕೆಯನ್ನು ಕಳೆದ 30 ವರ್ಷಗಳಿಂದ ನಿರ್ಲಕ್ಷ ಮಾಡಲಾಗಿತ್ತು. ಆ ಸಮುದಾಯಕ್ಕೆ ಆಗುತ್ತಿದ್ದ ಅನ್ಯಾಯಕ್ಕೆ ಈ ಹಿಂದಿನ ಯಾವ ಸರ್ಕಾರಗಳೂ ಸ್ಪಂದಿಸಿರಲಿಲ್ಲ.ಆದರೆ,ನಮ್ಮ ಬಿಜೆಪಿ ಸರ್ಕಾರ ಈ ಎರಡೂ ಪಂಗಡಗಳನ್ನು ಎಸ್ ಟಿ ಯಲ್ಲಿ ಸೇರ್ಪಡೆ ಮಾಡಿದೆ. ದಲಿತರ ಉದ್ಧಾರಕ್ಕಾಗಿ ಬಿಜೆಪಿ ಸರ್ಕಾರ ಸನ್ನದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Trending News