ಇವಿಎಂ ಟ್ಯಾಂಪರಿಂಗ್ ಕುರಿತು ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು

ಇವಿಎಂ ಟ್ಯಾಂಪರಿಂಗ್ ಮತ್ತು  ಬದಾಮಿ ಕ್ಷೇತ್ರದಲ್ಲಿನ ಅಂಚೆ ಪತ್ರ ಪತ್ತೆ ಪ್ರಕರಣ ಬಗ್ಗೆ ದೂರು ದಾಖಲಿಸಿದ ಕಾಂಗ್ರೆಸ್ ನಾಯಕರು.

Last Updated : May 15, 2018, 07:40 AM IST
ಇವಿಎಂ ಟ್ಯಾಂಪರಿಂಗ್ ಕುರಿತು ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು  title=

ಬೆಂಗಳೂರು: ಇವಿಎಂ ಟ್ಯಾಂಪರಿಂಗ್ ಮತ್ತು  ಬದಾಮಿ ಕ್ಷೇತ್ರದಲ್ಲಿನ ಅಂಚೆ ಪತ್ರ ಪತ್ತೆ ಪ್ರಕರಣ ಬಗ್ಗೆ ಕಾಂಗ್ರೆಸ್ ನಾಯಕರು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ. ಜತೆಗೆ ಇವಿಎಂ ಮತ್ತು ವಿವಿ ಪ್ಯಾಟ್ ಎರಡನ್ನೂ ಎಣಿಕೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. 

ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರೇ ಇವಿಎಂ ಟ್ಯಾಂಪರಿಂಗ್ ಬಗ್ಗೆ ಮಾತನಾಡಿದ್ದಾರೆ. ಶೆಟ್ಟರ್ ಹೇಳಿಕೆಯಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ. ಈ ಹಿನ್ನೆಲೆಯಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್ ನ್ನು ನೂರಕ್ಕೆ ನೂರಷ್ಟು ಟ್ಯಾಲಿಗೆ ಅವಕಾಶ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ರಿಜ್ವಾನ್ ಅರ್ಷದ್ ಭಾಗಿಯಾಗಿದ್ದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್, ಇವಿಎಂ ಮತ್ತು ವಿವಿಪ್ಯಾಟ್ ಶೇ.100 ಎಣಿಕೆಗೆ ಕಾಂಗ್ರೆಸ್ ಮನವಿ ಮಾಡಿದೆ. ಅದು ಸಾಧ್ಯವಾಗದಿದ್ರೆ 5 % ಆದ್ರು ಎಣಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ನಾವು ಯಾವುದಾದರು ಒಂದು ಕ್ಷೇತ್ರದ ವಿವಿಪ್ಯಾಟ್ ರ್ಯಾಂಡಮ್ ಆಗಿ ಎಣಿಗೆ ಮಾಡುವುದಾಗಿ ತಿಳಿಸಿದ್ದೇವೆ ಎಂದು ತಿಳಿಸಿದರು.

ಪಕ್ಷಾವಾರು ಮಾಹಿತಿ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ

Trending News