ಅಮಿತ್ ಶಾ 'ಸನಾತನ ಹಿಂದೂ' ಎಂದ ಪ್ರಕಾಶ್ ಜಾವಡೆಕರ್

   

Last Updated : Apr 20, 2018, 05:27 PM IST
 ಅಮಿತ್ ಶಾ 'ಸನಾತನ ಹಿಂದೂ' ಎಂದ ಪ್ರಕಾಶ್ ಜಾವಡೆಕರ್ title=

ಬೆಂಗಳೂರು: ಅಮಿತ್ ಶಾ ಅವರು 'ಸನಾತನ ಹಿಂದೂ' ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಶುಕ್ರವಾರ ತಿಳಿಸಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯನವರು ಅಮಿತ್ ಶಾರನ್ನು ಹಿಂದೂ ಅಲ್ಲ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಈಗ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್  "ಅಮಿತ್ ಷಾ ಮತ್ತು ಅವರ ಕುಟುಂಬವು ಹಲವಾರು ಪಿಳಿಗೆಗಳಿಂದಲೂ 'ಸನಾತನ ಹಿಂದೂ' ಎಂದು ನಾನು  ಸ್ಪಷ್ಟಪಡಿಸುತ್ತೇನೆ "ಎಂದರು. ಇನ್ನು ಮುಂದುವರೆದು "ಚುನಾವಣೆಯಲ್ಲಿ ಸಂಪೂರ್ಣ ಸೋಲಿನ ಭಯದಿಂದಾಗಿ ಅವರು ಅಮಿತ್ ಷಾ ಹಿಂದೂ ಅಲ್ಲ ಎನ್ನುವ ಕೀಳು ಮಟ್ಟದ ಆರೋಪವನ್ನು ಮಾಡುತ್ತಿದ್ದಾರೆ.ಇದರಿಂದ ಕಾಂಗ್ರೆಸ್ ಯಾವ ಲೆವೆಲ್ ಗೆ ಇಳಿದಿದೆ ಎನ್ನುವುದನ್ನು ತಿಳಿಸುತ್ತದೆ" ಎಂದು ಜಾವಡೆಕರ್ ಕಿಡಿಕಾರಿದರು.

Trending News