ಚಿಕ್ಕಮಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ ಶೃಂಗೇರಿಯ ಭಾರತೀ ತೀರ್ಥ ಸ್ವಾಮೀಜಿ ದರ್ಶನ ಪಡೆದರು.
ಭಾರತೀ ತೀರ್ಥ ಸ್ವಾಮೀಜಿ ಜತೆ ಕೆಲ ಕಾಲ ಸಮಾಲೋಚನೆ ನಡೆಸಿದ ಶಾ ನಂತರ, ತಾಯಿ ಶಾರದಾಂಬೆ ದರ್ಶನ ಪಡೆದರು. ಇವರಿಗೆ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಬಿಜೆಪಿ ಮುಖಂಡರು ಸಾಥ್ ನೀಡಿದರು.
Fortunate to have visited the Sringeri Sharada Peetham in Chikkamagaluru, Karnataka and took blessings of Jagadguru Shankaracharya Sri Sri Bharati Tirtha Mahaswamiji. This is one of the four Peeth set up by pujya Adi Shankaracharya ji to spread the teachings of Advaita Vedanta. pic.twitter.com/eUepbhCTs8
— Amit Shah (@AmitShah) May 1, 2018