Trending News: ಹಾವು ಹಾರುವುದನ್ನು ನೋಡಿದ್ದೀರಾ? ಇಲ್ಲವಾದರೆ ಚಾಲಾಕಿ ಸರ್ಪದ ಈ ವಿಡಿಯೋ ಈಗಲೇ ನೋಡಿ… ಅಪರೂಪದ ದೃಶ್ಯವಿದು

Flying Snake Viral Video: ವಾಸ್ತವವಾಗಿ, ಈ ವೀಡಿಯೊವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಈ ಪೋಸ್ಟ್ ಜೊತೆ ಇನ್‌ಕ್ರೆಡಿಬಲ್ ಎಂದು ವಿವರಿಸುವ ಎಮೋಜಿಯನ್ನು ಹಾಕಿದ್ದಾರೆ. ಮನೆಯೊಂದರ ಮೇಲ್ಛಾವಣಿಯ ಅಂಚಿನಲ್ಲಿ ಹಾವು ಕುಳಿತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

Written by - Bhavishya Shetty | Last Updated : Jan 31, 2023, 10:30 PM IST
    • ಕೆಲವೊಮ್ಮೆ ಹಾವುಗಳು ತಮ್ಮ ವರ್ತನೆಗಳಿಂದ ಜನರನ್ನು ಬೆಚ್ಚಿಬೀಳಿಸುತ್ತದೆ.
    • ಇತ್ತೀಚೆಗಷ್ಟೇ ಬಂದೂಕು ತೆಗೆದು ಬೆದರಿಸುತ್ತಿದ್ದ ಬಾಲಕನ ಮೇಲೆ ಹಾವೊಂದು ದಾಳಿ ನಡೆಸಿತ್ತು
    • ಇಂದು ನಾವು ಅಪರೂಪದ ದೃಶ್ಯವನ್ನು ನಿಮಗೆ ತೋರಿಸಲಿದ್ದೇವೆ
Trending News: ಹಾವು ಹಾರುವುದನ್ನು ನೋಡಿದ್ದೀರಾ? ಇಲ್ಲವಾದರೆ ಚಾಲಾಕಿ ಸರ್ಪದ ಈ ವಿಡಿಯೋ ಈಗಲೇ ನೋಡಿ… ಅಪರೂಪದ ದೃಶ್ಯವಿದು  title=
Flying Snake

Flying Snake Viral Video: ಹಾವುಗಳ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಆದರೆ ಕೆಲವೊಮ್ಮೆ ಹಾವುಗಳು ತಮ್ಮ ವರ್ತನೆಗಳಿಂದ ಜನರನ್ನು ಬೆಚ್ಚಿಬೀಳಿಸುತ್ತದೆ. ಇತ್ತೀಚೆಗಷ್ಟೇ ಬಂದೂಕು ತೆಗೆದು ಬೆದರಿಸುತ್ತಿದ್ದ ಬಾಲಕನ ಮೇಲೆ ಹಾವೊಂದು ದಾಳಿ ನಡೆಸಿತ್ತು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಆದರೆ ಇಂದು ನಾವು ಅಪರೂಪದ ದೃಶ್ಯವನ್ನು ನಿಮಗೆ ತೋರಿಸಲಿದ್ದೇವೆ. ಇದರಲ್ಲಿ ಹಾವೊಂದು ಛಾವಣಿಯ ಮೇಲಿಂದ ಹಾರಿದ ವಿಚಿತ್ರ ಮತ್ತು ಅಪರೂಪದ ವೀಡಿಯೊ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: Budget 2023: ಬಜೆಟ್ ಮಂಡನೆಗೂ ಮುನ್ನ ಶುಭ ಸುದ್ದಿ: 2023ರಲ್ಲಿ ಹಣದುಬ್ಬರ ಇಳಿಕೆ; ಅಂಕಿ ಅಂಶಗಳು ಹೀಗಿವೆ!

ಮನೆಯ ಛಾವಣಿಯ ಮೇಲೆ ಹಾವು!

ವಾಸ್ತವವಾಗಿ, ಈ ವೀಡಿಯೊವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಈ ಪೋಸ್ಟ್ ಜೊತೆ ಇನ್‌ಕ್ರೆಡಿಬಲ್ ಎಂದು ವಿವರಿಸುವ ಎಮೋಜಿಯನ್ನು ಹಾಕಿದ್ದಾರೆ. ಮನೆಯೊಂದರ ಮೇಲ್ಛಾವಣಿಯ ಅಂಚಿನಲ್ಲಿ ಹಾವು ಕುಳಿತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಮುಂದೆ ರಸ್ತೆ ಕಾಣಿಸುತ್ತಿದೆ. ಕೊಂಚ ಸಮಯದ ಬಳಿಕ ಟೆರೇಸ್‌ನ ತುದಿಯನ್ನು ತಲುಪಿದ ಹಾವು ಅಲ್ಲಿಂದ ಹಾರಿದೆ.

ಹಾವು ನೆಗೆದು ಮಾರುದ್ದ ಹೋಗಿ ರಸ್ತೆಯ ಮೇಲೆ ಬಿದ್ದಿದೆ. ಆದರೆ ಅದೇ ಸಂದರ್ಭದಲ್ಲಿ ಯಾರಾದರೂ ಆ ದಾರಿಯಲ್ಲಿ ಬರುತ್ತಿದ್ದರೆ ಭಯದಲ್ಲಿ ಓಡಿ ಹೋಗುತ್ತಿದ್ದರೇನೋ… ಛಾವಣಿ ಮೇಲಿಂದ ಹಾವು ರಸ್ತೆಗೆ ಬಿದ್ದ ತಕ್ಷಣ ತೆವಳಿಕೊಂಡು ಮುಂದೆ ಸಾಗಿದೆ.

ಈ ಅಪರೂಪದ ವಿಡಿಯೋ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ತಕ್ಷಣ, ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾವು ಕೂಡ ಹೀಗೆ ಜಿಗಿಯಬಹುದೇ ಎಂದು ಜನ ಅಚ್ಚರಿಪಟ್ಟಿದ್ದಾರೆ. ಹಾರುವ ಹಾವುಗಳ ಬಗ್ಗೆ ಈ ಹಿಂದೆ ಸಾಕಷ್ಟು ಉಲ್ಲೇಖಗಳು ಬಂದಿದ್ದರೂ, ಸಾಮಾನ್ಯ ಹಾವುಗಳು ಈ ರೀತಿ ನೆಗೆಯುವುದನ್ನು ಜನರು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ಇದನ್ನೂ ಓದಿ:  Budget 2023: ನಿರೀಕ್ಷೆಯ ಭಾರ ಹೊತ್ತ ಕೇಂದ್ರ ಬಜೆಟ್ ನ್ನು ವೀಕ್ಷಿಸಲು ಇಲ್ಲಿದೆ ಸುಲಭ ಮಾರ್ಗ...!

ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ನೀವು ಕೂಡ ಈ ಅಪರೂಪದ ದೃಶ್ಯವನ್ನು ನೋಡಿ:

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News