Alarming Health Issues: ವರ್ಷ 2021ರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಈ 8 ಅಂಶಗಳ ನಿರ್ಲಕ್ಷ ಬೇಡ - WHO

Alarming Health Issues: ಕಳೆದ ವರ್ಷ 2020 ರಲ್ಲಿ, ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ವಿಶ್ವದಾದ್ಯಂತ ಜನರು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಹೆಚ್ಚಿನ ಸಂಖ್ಯೆಯ ಜನರು ನಿರುದ್ಯೋಗಿಗಳಾದರು. ಈ ವರ್ಷ, ಹೆಚ್ಚಿನ ಸಂಖ್ಯೆಯ ಜನರಿಗೆ ಕರೋನಾ ಲಸಿಕೆ ತಲುಪುವುದು ದೊಡ್ಡ ಸವಾಲಾಗಿದೆ. ಹಾಗಾದರೆ ಬನ್ನಿ ಯಾವ 8 ಅಂಶಗಳ ಬಗ್ಗೆ ನಾವು 2021ರಲ್ಲಿ ಕಾಳಜಿವಹಿಸುವ ಆವಶ್ಯಕತೆ ಇದೆ ಎಂಬುದನ್ನೊಮ್ಮೆ ತಿಳಿಯೋಣ.

Written by - Nitin Tabib | Last Updated : Jan 10, 2021, 04:43 PM IST
  • 2020ರಲ್ಲಿ ಕೊರೊನಾ ಕಾರಣ ಹಲವು ಜನರು ಆರ್ಥಿಕ ಬಿಕ್ಕಟ್ಟು ಎದುರಿಸಿದ್ದಾರೆ.
  • ಹೀಗಾಗಿ 2021ರಲ್ಲಿ 8 ಅಂಶಗಳ ಕುರಿತು ಜನರು ಗಮನಹರಿಸುವ ಆವಶ್ಯಕತೆ ಇದೆ.
  • ಈ 8 ಅಂಶಗಳು ಯಾವುದು ಎಂಬುದರ ಪಟ್ಟಿ ವಿಶ್ವ ಆರೋಗ್ಯ ಸಂಸ್ಥೆ ಜಾರಿಗೊಳಿಸಿದೆ.
Alarming Health Issues: ವರ್ಷ 2021ರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಈ 8 ಅಂಶಗಳ ನಿರ್ಲಕ್ಷ ಬೇಡ - WHO title=
Alarming Health Issues (File Photo)

Alarming Health Issues - ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (WHO) ವರ್ಷ 2021ರ ಆರೋಗ್ಯಕ್ಕೆ ಸಂಬಂಧಿಸಿದ 8 ಅಂಶಗಳನ್ನು ಬಿಡುಗಡೆ ಮಾಡಿದ್ದು, ಇವುಗಳ ಬಗ್ಗೆ ಜನರು ಜಾಗರೂಕರಾಗಿರಬೇಕಾಗಿದೆ ಎಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ವಿಶ್ವದಾದ್ಯಂತದ ದೇಶಗಳು ಈ 8 ಅಂಶಗಳತ್ತ ಗಮನ ಹರಿಸಿದರೆ, 2021ರ ವರ್ಷವು ಗತಿಸಿಹೋದ 2020 ಕ್ಕಿಂತ ಉತ್ತಮವಾಗಿರಲಿದೆ ಎಂದಿದೆ.

ಕಳೆದ ವರ್ಷ 2020 ರಲ್ಲಿ, ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ವಿಶ್ವದಾದ್ಯಂತ ಜನರು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಹೆಚ್ಚಿನ ಸಂಖ್ಯೆಯ ಜನರು  ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಈ ಕುರಿತು ವಿಶ್ವ ಸಂಸ್ಥೆ ಕೂಡ ಎಚ್ಚರಿಕೆ ನೀಡಿದ್ದು, ನಿರುದ್ಯೋಗ, ಆರ್ಥಿಕ ಸಂಕಷ್ಟ ಹಾಗೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಲ್ಲಿ ಸವಾಲುಗಳು ಹೆಚ್ಚಾಗಿವೆ ಎಂದಿದೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಕೊರೊನಾ ವೈರಸ್ ವ್ಯಾಕ್ಸಿನ್ ತಲುಪುವುದು ಕೂಡ ಒಂದು ಸವಾಲಾಗಿದೆ. ಹಾಗಾದರೆ ಯಾವ 8 ಅಂಶಗಳ ಬಗ್ಗೆ ನಾವು 2021ರಲ್ಲಿ ಜಾಗ್ರತರಾಗಿರುವುದು ಹಾಗೂ ಪಾಲಿಸುವ ಆವಶ್ಯಕತೆ ಇದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.

1. ಇಡೀ ವಿಶ್ವ ಒಗ್ಗಟ್ಟನ್ನು ಪ್ರದರ್ಶಿಸಬೇಕು
ಆರೋಗ್ಯ ಸಂಬಂಧಿಸಿದ ಬಿಕ್ಕಟ್ಟುಗಳನ್ನು ಎದುರಿಸಲು ಇಡೀ ಜಗತ್ತು ಒಂದಾಗಬೇಕು ಮತ್ತು ಇದಕ್ಕಾಗಿ ಬಲವಾದ ವ್ಯವಸ್ಥೆಯನ್ನು ರಚಿಸಬೇಕು. ಯುದ್ಧದಂತಹ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದ ಜನರ ರಕ್ಷಣೆ ಮಾಡಬೇಕಿದೆ. ಇದಲ್ಲದೆ, ನಿರ್ಗತಿಕರಿಗೆ ಮತ್ತು ಬಡ ಜನರಿಗೆ ದೊಡ್ಡ ಪ್ರಮಾಣದಲ್ಲಿ ನೆರವು ಒದಗಿಸುವ ಆವಶ್ಯಕತೆ ಇದೆ.

2. ಸಮಾಜದ ಕೊನೆಯ ವ್ಯಕ್ತಿಯವರೆಗೆ ಕೊರೊನಾ ಲಸಿಕೆ ತಲುಪುವಂತಾಗಬೇಕು
ಆದಷ್ಟು ಬೇಗ ಕೊರೊನಾ ಲಸಿಕೆಯನ್ನು ಸಾರ್ವಜನಿಕರ ಬಳಿ ತಲುಪಿಸುವ ಆವಶ್ಯಕತೆ ಇದೆ. ಸಮಾಜದ ಕೊನೆಯ ವ್ಯಕ್ತಿಯವರೆಗೂ ಕೂಡ ಲಸಿಕೆ ತಲುಪಬೇಕಿದೆ.  ಭಾರತ ಸೇರಿದಂತೆ ಇತರೆ ಕೆಲವು ದೇಶಗಳು ತಮ್ಮ ದೇಶದ ನಿವಾಸಿಗಳಿಗೆ ಕರೋನಾ ಲಸಿಕೆ ಉಚಿತವಾಗಿ ನೀಡುವ ಭರವಸೆ ನೀಡಿದ್ದರೆ, ವಿಶ್ವ ಆರೋಗ್ಯ ಸಂಸ್ಥೆ (WHO) ಬಡ ದೇಶಗಳಿಗೆ 2 ಬಿಲಿಯನ್ ಕರೋನಾ ಲಸಿಕೆ ನೀಡುವಂತೆ ಕೇಳಿದೆ. ಈ ಭರವಸೆಗಳನ್ನು 2021 ರಲ್ಲಿ ಈಡೇರಿಸಬೇಕು.

ಇದನ್ನು ಓದಿ- Bird flu ಮೊಟ್ಟೆ, ಚಿಕನ್ ತಿಂದರೆ ಕೋಳಿ ಜ್ವರ ಬರುತ್ತಾ..? ಈ ಹೊತ್ತಲ್ಲಿ ಗೊತ್ತಿರಲೇಬೇಕಾದ ವಾಸ್ತವಾಂಶಗಳು ಇವು..!

3.ಸದೃಢ ಆರೋಗ್ಯ ವ್ಯವಸ್ಥೆ
ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮದೇ ಆದ ಬಲವಾದ ಆರೋಗ್ಯ ವ್ಯವಸ್ಥೆ ನಿರ್ಮಿಸಬೇಕು ಅಥವಾ ಪ್ರಸ್ತುತ ಇರುವ ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆಗಳನ್ನು ಮಾಡಬೇಕಾಗಿದೆ. ಇದರಿಂದಾಗಿ ಕರೋನವೈರಸ್ ನಂತಹ ಬಿಕ್ಕಟ್ಟು ಎದುರಾದಾಗಲೆಲ್ಲಾ ಅದನ್ನು ಸುಲಭವಾಗಿ ನಿಭಾಯಿಸಬಹುದು. ಗಮನಾರ್ಹವಾಗಿ, ಜಾಗತಿಕ ಸಾಂಕ್ರಾಮಿಕ ಕರೋನಾ ವೈರಸ್ನ ಹಿನ್ನೆಲೆಯಲ್ಲಿ, ಅಭಿವೃದ್ಧಿ ಹೊಂದಿದ ದೇಶಗಳಾದ ಅಮೆರಿಕ ಮತ್ತು ಯುನೈಟೆಡ್ ಕಿಂಗ್‌ಡಂನ ಬಲವಾದ ಆರೋಗ್ಯ ವ್ಯವಸ್ಥೆಯೂ ಕೂಡ ಪೊಳ್ಳು ಎಂದು ಸಾಬೀತಾಗಿವೆ.

4. ವಿಜ್ಞಾನ ಹಾಗೂ ದತ್ತಾಂಶಗಳ ಸದ್ಬಳಕೆ
ಆರೋಗ್ಯ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಪ್ರಾಮಾಣಿಕವಾಗಿ ಮತ್ತು ಸಮಯ ಇರುವಂತೆ ಆದಷ್ಟು ಹೆಚ್ಚಿನ ಜನರ ಜೊತೆಗೆ ಹಂಚಿಕೊಳ್ಳುವ ಆವಶ್ಯಕತೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೊರೊನಾ ಹಾಗೂ ಇತರೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸಂಬಂಧಪಟ್ಟ ಸಂಶೋಧನೆಗಳಿಗೆ ಈ ಮೊದಲಿಗಿಂತ ಹೆಚ್ಚಿನ ವೇಗ ನೀಡುವ ಆವಶ್ಯಕತೆ ಇದೆ.

ಇದನ್ನು ಓದಿ- Good News : Pfizer - BioNTech ಸಂಸ್ಥೆಗಳ ಲಸಿಕೆ ತುರ್ತು ಬಳಕೆಗೆ WHO ಒಪ್ಪಿಗೆ

5.ಜಾಗತಿಕ ಸಂಘಟನೆಗಳ ಅಸ್ತಿತ್ವ ರಕ್ಷಿಸಬೇಕಿದೆ
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) ಸೇರಿದಂತೆ ಜಾಗತಿಕ ಸಂಘಟನೆಗಳಿಗೆ ನಿರ್ಗಮನದ ಬೆದರಿಕೆ ಹಾಕಲಾಯಿತು ಅಥವಾ ಅಮೆರಿಕ ಅವುಗಳಿಂದ ಹೊರಗುಳಿಯಿತು. ಆದರೆ, ಅಮೆರಿಕದಲ್ಲಿ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಜೋ ಬಿಡನ್ ಅಮೆರಿಕ ಮತ್ತೆ ಅನೇಕ ವಿಷಯಗಳಲ್ಲಿ ಜಗತ್ತನ್ನು ಪ್ರತಿನಿಧಿಸಲಿದೆ ಎಂಬ  ಭರವಸೆ ನೀಡಿದ್ದಾರೆ. ಜಾಗತಿಕ ಬಿಕ್ಕಟ್ಟುಗಳನ್ನು ಎದುರಿಸಲು ಕೆಲಸ ಮಾಡುವ ಯಾವುದೇ ಜಾಗತಿಕ ಸಂಘಟನೆಯ ಅಸ್ತಿತ್ವ 2021 ರಲ್ಲಿ ಬಿಕ್ಕಟ್ಟಿನಲ್ಲಿ ಸಿಲುಕಿಕೊಳ್ಳಬಾರದು ಎಂಬುದರ ಕಾಳಜಿವಹಿಸಬೇಕಿದೆ.

ಹೆಚ್ಚಾಗುತ್ತಿರುವ ಸಾಂಕ್ರಾಮಿಕ ರೋಗಗಳ ಮೇಲೆ ನಿಗಾವಹಿಸಬೇಕಾಗಿದೆ
ವಿಶ್ವಾದ್ಯಂತ ಕೊರೊನಾದಂತಹ ಹಲವು ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗತೊಡಗಿದೆ. 2020 ರಲ್ಲಿ ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೇ ಸಂಕಷ್ಟಕ್ಕೀಡು ಮಾಡಿದೆ. ಯಾವ ದೇಶ ಕೂಡ ಈ ಮಹಾಮಾರಿಯಿಂದ ಅಸ್ಪ್ರಶ್ಯವಾಗಿ ಉಳಿದಿಲ್ಲ. ಮಹಾಮಾರಿಯ ವೇಳೆ ಭಾರಿ ಪ್ರಮಾಣದಲ್ಲಿ ಜನರು ಆರ್ಥಿಕ ಮತ್ತು ಆರೋಗ್ಯ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ದೇಶಗಳು ಒಗ್ಗೂಡಿ ಕೆಲಸ ಮಾಡುವ ಆವಶ್ಯಕತೆ ಇದೆ.

7. ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣ
2019 ಮತ್ತು 2020 ರಲ್ಲಿ ಜನರ ಸಾವಿಗೆ ಕಾರಣವಾಗಿರುವ 10 ರೋಗಗಳಲ್ಲಿ 7 ರೋಗಗಳು ಸಾಂಕ್ರಾಮಿಕವಲ್ಲದ ರೋಗಗಳಾಗಿದ್ದವು ಎಂಬುದು ಇಲ್ಲಿ ಗಮನಾರ್ಹವಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಹರಡದ ಕಾಯಿಲೆಗಳನ್ನು ನಾನ್-ಕಮ್ಯೂನಿಕೆಬಲ್ ಕಾಯಿಲೆಗಳೆಂದು ಕರೆಯುತ್ತಾರೆ. ಇವುಗಳಲ್ಲಿ ಅತ್ಯಂತ ಮಾರಣಾಂತಿಕ ಕಾಯಿಲೆ ಎಂದರೆ ಕ್ಯಾನ್ಸರ್. ಇಂತಹ ಕಾಯಿಲೆಗಳನ್ನು ತಡೆಯಲು ಹಾಗೂ ಅವುಗಳ ಚಿಕಿತ್ಸೆಗಳನ್ನು ಮತ್ತಷ್ಟು ಉತ್ಕೃಷ್ಟ ದರ್ಜೆಗೆ ಏರಿಸುವ ಆವಶ್ಯಕತೆ ಇದೆ.

ಇದನ್ನು ಓದಿ- ಕೊರೊನಾ ಔಷಧಿಯಿಂದ ಗುಪ್ತರೋಗದ ಅಪಾಯ, ಎಚ್ಚರಿಕೆ ನೀಡಿದ WHO

8. ಮಾನಸಿಕ ಆರೋಗ್ಯ ಹಾಗೂ ಚಿಕಿತ್ಸೆ
ಔಷಧಿಗಳು ಹಾಗೂ ಚಿಕಿತ್ಸೆಯ ಕೊರತೆಯ ಕಾರಣ ಬಡ ಹಾಗೂ ಹಿಂದುಳಿದ ದೇಶಗಳಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಾಗುತ್ತದೆ. ಕೊರೊನಾ ಪ್ರಕೋಪದ ಕಾಲದಲ್ಲಿ ಇದು ಇನ್ನಷ್ಟು ವಿಕೋಪಕ್ಕೆ ತಲುಪಿದೆ. ಇನ್ನೊಂದೆಡೆ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಡಿಪ್ರೆಶನ್ ಗೆ ಒಳಗಾಗಿದ್ದಾರೆ. ಹೀಗಾಗಿ ಈ ನಿಟ್ಟಿನಲ್ಲಿ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಆವಶ್ಯಕತೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News