BIG NEWS: CORONAVIRUSಗೆ ಸಿದ್ಧಗೊಂಡಿದೆ ಔಷಧಿ! ಶೀಘ್ರವೇ ನಡೆಯಲಿದೆ ಕ್ಲಿನಿಕಲ್ ಟೆಸ್ಟ್

COVID-19ಕ್ಕೆ ಸಂಬಂಧಿಸಿದಂತೆ ಹಲವು ದಿನಗಳ ಬಳಿಕ ಸಂತಸದ ಸುದ್ದಿಯೊಂದು ಪ್ರಕಟಗೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ಚೀನಾ ಕೊರೊನಾ ವೈರಸ್ ಅನ್ನು ಮಟ್ಟ ಹಾಕಲು ಔಷಧಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿಕೊಂಡಿದೆ.

Last Updated : Mar 16, 2020, 08:29 PM IST
BIG NEWS: CORONAVIRUSಗೆ ಸಿದ್ಧಗೊಂಡಿದೆ ಔಷಧಿ! ಶೀಘ್ರವೇ ನಡೆಯಲಿದೆ ಕ್ಲಿನಿಕಲ್ ಟೆಸ್ಟ್ title=

COVID-19ಕ್ಕೆ ಸಂಬಂಧಿಸಿದಂತೆ ಹಲವು ದಿನಗಳ ಬಳಿಕ ಸಂತಸದ ಸುದ್ದಿಯೊಂದು ಪ್ರಕಟಗೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ಚೀನಾ ಕೊರೊನಾ ವೈರಸ್ ಅನ್ನು ಮಟ್ಟ ಹಾಕಲು ಔಷಧಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿಕೊಂಡಿದೆ. ಎಪ್ರಿಲ್ ತಿಂಗಳಿನಲ್ಲಿ ಚೀನಾ ಈ ಔಷಧಿಯ ಕ್ಲಿನಿಕಲ್ ಟ್ರಯಲ್ ನಡೆಸಬಹುದು ಎನ್ನಲಾಗಿದೆ. ಚೀನಾದಿಂದ ವಿಶ್ವಾದ್ಯಂತ ಪಸರಿಸಿರುವ ಈ ವೈರಸ್ ಗೆ ಔಷಧಿ ತಯಾರಿಸುವ ಕೆಲಸದಲ್ಲಿ ಹಲವು ದೇಶಗಳು ನಿರತವಾಗಿವೆ. ಆದರೆ, ವ್ಯಾಕ್ಸಿನ್ ರಿಸರ್ಚ್ ಮುಂದುವರೆದಿದ್ದು, ಶೀಘ್ರವೇ ಅದರ ಕ್ಲಿನಿಕಲ್ ಟ್ರಯಲ್ ನಡೆಸಲಾಗುವುದು ಎಂದು ಚೀನಾ ಹೇಳಿದೆ. ಆದರೆ, ಈ ಕುರಿತು ಜಾಗತಿಕ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಲಸಿಕೆಯ ಕ್ಲಿನಿಕಲ್ ಟ್ರಯಲ್ ಬಳಿಕವೂ ಕೂಡ ಅದು ಮಾರುಕಟ್ಟೆಗೆ ಬರಲು ಎಷ್ಟು ಕಾಲಾವಕಾಶ ಬೇಕಾಗಲಿದೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟವಾಗಿದೆ ಎಂದಿವೆ.

ಚೀನಾದ ಈ ಲಸಿಕೆಯ ಕುರಿತು ಹಲವು ಸಂಶೋಧನೆಗಳು ಮುಂದುವರೆದಿವೆ. ಇದುವರೆಗೆ ವಿಶ್ವಾದ್ಯಂತ ಈ ಮಹಾಮಾರಿ ರೋಗಕ್ಕೆ ಸುಮಾರು 5000ಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾ ವೈರಸ್ ಗೆ ಇದುವರೆಗೂ ಯಾವುದೇ ಲಸಿಕೆ ಸಿದ್ಧವಾಗಿಲ್ಲ. ಆದರೆ, ಈ ನಡುವೆ ಚೀನಾ ಈ ಕುರಿತು ಹೇಳಿಕೊಂಡಿದ್ದು, ಔಷಧಿಯ ಕುರಿತು ತನ್ನ ಸಂಶೋಧನೆ ಮುಂದುವರೆದಿದ್ದು, ಶೀಘ್ರದಲ್ಲಿಯೇ ವ್ಯಾಕ್ಸಿನ್ ನ ಕ್ಲಿನಿಕಲ್ ಟ್ರಯಲ್ ನಡೆಸಲಾಗುವುದು ಎಂದು ಹೇಳಿದೆ.

ಕ್ಲಿನಿಕಲ್ ಟ್ರಯಲ್ ಅರ್ಥ ಏನು?
ಈ ಕುರಿತು ತಜ್ಞರು ಹೇಳುವ ಪ್ರಕಾರ ಕ್ಲಿನಿಕಲ್ ಟ್ರಯಲ್ ಅಂದರೆ, ಸಂಶೋಧನೆಯ ಆಧಾರದ ಮೇಲೆ ಲಸಿಕೆಯನ್ನು ಸಿದ್ಧಪಡಿಸಲಾಗಿದ್ದು, ಇದನ್ನು ಮಲ್ಟಿಪಲ್ ಸೋರ್ಸ್ ಅಂದರೆ ಜಾನುವಾರಗಳ ಮೇಲೆ ಪರೀಕ್ಷೆ ನಡೆಸಲಾಗುವುದು ಎಂದರ್ಥ. ಕೊರೊನಾ ಪೀಡಿತ ಯಾವ ಪ್ರಾಣಿಯ ಮೇಲೆ ಯಾವ ಔಷಧಿ ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ ಎಂದು ಅಂದಾಜಿಸುವುದೇ ಈ ಟೆಸ್ಟ್ ನ ಉದ್ದೇಶವಾಗಿದೆ. ಆದರೆ, ಇದೊಂದು ಸುದೀರ್ಘ ಪ್ರಕ್ರಿಯೆಯಾಗಿದೆ. ಈ ಔಷಧಿಯ ಯಶಸ್ವಿ ಕ್ಲಿನಿಕಲ್ ಟ್ರಯಲ್ ಬಳಿಕವೂ ಕೂಡ ಈ ಔಷಧಿ ಮಾರುಕಟ್ಟೆಗೆ ಬರಲು ಸುಮಾರು ಮೂರು ತಿಂಗಳ ಕಾಲಾವಕಾಶ ಬೇಕಾಗಲಿದೆ.

ಇಸ್ರೇಲ್ ಕೂಡ ಲಸಿಕೆ ಕುರಿತು ಹೇಳಿಕೊಂಡಿದೆ
ಚೀನಾಗೂ ಮೊದಲು ಲಸಿಕೆ ತಯಾರಿಕೆಯ ಕುರಿತು ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್ ನ ಇನ್ಸ್ಟಿಟ್ಯೂಟ್ ಆಫ್ ಬಯಾಲಾಜಿಕಲ್ ರಿಸರ್ಚ್ ನ ವಿಜ್ಞಾನಿಗಳು, ಈ ಮಹಾಮಾರಿ ಕಾಯಿಲೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದಿದ್ದರು. ಈ ಕುರಿತು ಹೇಳಿಕೆ ನೀಡಿದ್ದ ವಿಜ್ಞಾನಿಗಳು ಕೊರೊನಾ ವೈರಸ್ ಗೆ ಲಸಿಕೆಯನ್ನು ಸಿದ್ಧಪಡಿಸಲಾಗಿದ್ದು, ಶೀಘ್ರವೇ ಅವುಗಳಿಗೆ ಅಧಿಕೃತ ಒಪ್ಪಿಗೆ ನೀಡಲಾಗುವುದು ಎಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಇಸ್ರೇಲ್ ನ ರಕ್ಷಣಾ ಸಚಿವ ಬೇನಿಟ್, ನಮ್ಮ ಸಂಶೋಧಕರು ಕೊರೊನಾ ವೈರಸ್ ಕುರಿತು ಸಂಶೋಧನೆ ನಡೆಸಿ, ವೈರಸ್ ನ ಗುಣಧರ್ಮಗಳನ್ನು ತಿಳಿದುಕೊಂಡಿದ್ದಾರೆ. ಕೊರೊನಾ ವೈರಸ್ ನ ಬಯಾಲಾಜಿಕಲ್ ಸಿಸ್ಟಮ್ (ಜೈವಿಕ ತಂತ್ರ) ಕುರಿತು ಸೂಕ್ಷ್ಮ ಅಧ್ಯಯನ ನಡೆಸಿ ಅವುಗಳನ್ನು ಗುರುತಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಭಾರತದಲ್ಲಿಯೂ ಕೂಡ ನಡೆಯುತ್ತಿದೆ ಶೋಧ
ಭಾರತದಲ್ಲಿಯೂ ಕೂಡ ಕೊರೊನಾ ವೈರಸ್ ಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನಗಳು ಮುಂದುವರೆದಿವೆ. ಈ ಕುರಿತು ಭರವಸೆ ವ್ಯಕ್ತಪಡಿಸಿರುವ AIIMSನ ವೈದ್ಯರ ತಂಡ, ಶೀಘ್ರದಲ್ಲಿಯೇ ಈ ವೈರಸ್ ಗೆ ಪರಿಹಾರ ಸೂಚಿಸಲಾಗುವುದು ಎಂದಿದ್ದಾರೆ. ಆದರೆ, ಇಂತಹ ಸ್ಥಿತಿಯಲ್ಲಿ ಜನರು ಭಯ ಪಡಬಾರದು ಮತ್ತು ಸುರಕ್ಷತೆಯಿಂದ ಇರುವುದೇ ಸದ್ಯ ಈ ಮಾರಕ ಕಾಯಿಲೆ ತಡೆಯುವ ಮಾರ್ಗವಾಗಿದೆ ಎಂದು ವೈದರು ಹೇಳಿದ್ದಾರೆ.

ಗಾಳಿಯಿಂದ ಪಸರಿಸುವುದಿಲ್ಲ ಈ ಕಾಯಿಲೆ
AIIMSನ ಮೈಕ್ರೋಬಯಾಲಾಜಿಸ್ಟ್ ವೈದ್ಯ ಲಲಿತ್ ಧರ್ ಹೇಳಿಕೆ ಪ್ರಕಾರ, ಕೊರೊನಾ ವೈರಸ್ ಗಾಳಿಯಿಂದ ಪಸರಿಸುವ ರೋಗವಲ್ಲ. ಕೇವಲ, ಡ್ರಾಪ್ಲೆಟ್ಸ್ ನ ಸಂಪರ್ಕದಲ್ಲಿ ಬರುವುದರಿಂದ ಮಾತ್ರ ಈ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸುತ್ತದೆ. ಹೀಗಾಗಿ ಶಂಕಿತ ರೋಗಿಗಳಿಂದ ಒಂದು ಮೀಟರ್ ಅಂತರ ಕಾಯ್ದುಕೊಳ್ಳುವುದು ಉಚಿತ ಎಂದು ಅವರು ಹೇಳಿದ್ದಾರೆ. ಈ ರೋಗಕ್ಕೆ ತುತ್ತಾಗಿರುವ ವ್ಯಕ್ತಿ ಒಂದು ವೇಳೆ ಕೆಮ್ಮಿದರೆ ಅಥವಾ ಸೀನಿದರೆ , ಆತನ ಸೀತದ ಹನಿಗಳು ಗರಿಷ್ಠ ಅಂದರೆ 1 ಮೀಟರ್ ಅಂತರದವರೆಗೆ ಹೋಗುವ ಸಾಧ್ಯತೆ ಇದೆ. ಆದರೆ, ಇದು ಗಾಳಿಯಿಂದ ಹರಡುವುದಿಲ್ಲ. ಆದ್ದರಿಂದ ಜನರು ಇಂತಹ ವದಂತಿಗಳಿಂದ ದೂರ ಇರಬೇಕು ಹಾಗೂ ಆವಶ್ಯಕತೆ ಇರುವದನ್ನು ಮಾಡಲು ಮರೆಯಬಾರದು ಎಂದು ಧರ್ ಹೇಳಿದ್ದಾರೆ.

Trending News