Afghanistan Crisis: ಕಾಬೂಲ್ ನಲ್ಲಿ 'ಪಾಕಿಸ್ತಾನ್ ಮುರ್ದಾಬಾದ್' ಘೋಷಣೆ, ರೊಚ್ಚಿಗೆದ್ದ ತಾಲಿಬಾನನಿಂದ ಮಹಿಳೆಯರ ಮೇಲೆ ಗೋಲಿಬಾರ್

Afghanistan Crisis: ಕಾಬೂಲನ್ನು (Kabul)  ತಾಲಿಬಾನ್ (Taliban) ವಶಕ್ಕೆ ಪಡೆದ ಬಳಿಕ  ಅಫ್ಘಾನಿಸ್ತಾನದಲ್ಲಿ (Afghanistan) ಜನಸಾಮಾನ್ಯರು  ಪಾಕಿಸ್ತಾನವನ್ನು ನಿರಂತರವಾಗಿ ವಿರೋಧಿಸುತ್ತಿದ್ದಾರೆ. ಜನರು ಕಾಬೂಲ್ ಬೀದಿಗಳಲ್ಲಿ ಪಾಕಿಸ್ತಾನ ಮುರ್ದಾಬಾದ್, ಸ್ವಾತಂತ್ರ್ಯ ಮತ್ತು ಪಂಜಶೀರ್ ಗೆ (Panjshir)ಬೆಂಬಲ ನೀಡುವ ಘೋಷಣೆಗಳನ್ನು ಕೂಗುತ್ತಿದ್ದಾರೆ.

Written by - Nitin Tabib | Last Updated : Sep 7, 2021, 02:11 PM IST
  • ಆಫ್ಘಾನಿಸ್ತಾನದಲ್ಲಿ ಪಾಕ್ ವಿರುದ್ಧ ಘೋಷಣೆ ಕೂಗುತ್ತ ಬೀದಿಗಿಳಿದ ಜನ.
  • ತಾಲಿಬಾನ್ ನಿಂದ ಮಹಿಳೆಯರ ಮೇಲೆ ಗೋಲಿಬಾರ್.
  • ಪಾಕಿಸ್ತಾನ್ ಮುರ್ದಾಬಾದ್ ಘೋಷಣೆ ಕೂಗುತ್ತಿರುವ ಆಫ್ಘನ್ ಜನರು.
Afghanistan Crisis: ಕಾಬೂಲ್ ನಲ್ಲಿ 'ಪಾಕಿಸ್ತಾನ್ ಮುರ್ದಾಬಾದ್' ಘೋಷಣೆ, ರೊಚ್ಚಿಗೆದ್ದ ತಾಲಿಬಾನನಿಂದ ಮಹಿಳೆಯರ ಮೇಲೆ ಗೋಲಿಬಾರ್  title=
Anti-Pakistan Protest In Afghanistan (File Photo)

Afghanistan Crisis: ಕಾಬೂಲನ್ನು (Kabul)  ತಾಲಿಬಾನ್ (Taliban) ವಶಕ್ಕೆ ಪಡೆದ ಬಳಿಕ  ಅಫ್ಘಾನಿಸ್ತಾನದಲ್ಲಿ (Afghanistan) ಜನಸಾಮಾನ್ಯರು  ಪಾಕಿಸ್ತಾನವನ್ನು ನಿರಂತರವಾಗಿ ವಿರೋಧಿಸುತ್ತಿದ್ದಾರೆ. ಜನರು ಕಾಬೂಲ್ ಬೀದಿಗಳಲ್ಲಿ ಪಾಕಿಸ್ತಾನ ಮುರ್ದಾಬಾದ್, ಸ್ವಾತಂತ್ರ್ಯ ಮತ್ತು ಪಂಜಶೀರ್ ಗೆ (Panjshir)ಬೆಂಬಲ ನೀಡುವ ಘೋಷಣೆಗಳನ್ನು ಕೂಗುತ್ತಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯ ವಿರುದ್ಧ ಅಫ್ಘಾನ್ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಮಾಡುವಾಗ, ಈ ಜನರು ಕಾಬೂಲ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯನ್ನು ತಲುಪಿದ್ದಾರೆ. ಅಲ್ಲಿ ಅವರು ಪಾಕಿಸ್ತಾನ ಮುರ್ದಾಬಾದ್ (Pakistan Murdabad)ಘೋಷಣೆಗಳನ್ನು ಕೂಗಿದ್ದಾರೆ. ಸುದ್ದಿ ಸಂಸ್ಥೆ AFP ವರದಿಯ ಪ್ರಕಾರ, ಈ ಪ್ರತಿಭಟನಾಕಾರರನ್ನು ಚದುರಿಸಲು ತಾಲಿಬಾನ್‌ಗಳು ಗೋಲಿಬಾರ್ ನಡೆಸಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಸಾವಿರಾರು ಮಹಿಳೆಯರು ಮತ್ತು ಪುರುಷರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ. ಈ ಜನರು ಅಫ್ಘಾನಿಸ್ತಾನಕ್ಕೆ ಸ್ವತಂತ್ರ ಸರ್ಕಾರ ಬೇಕು ಮತ್ತು ಪಾಕಿಸ್ತಾನದ ಕೈಗೊಂಬೆ ಸರ್ಕಾರವಲ್ಲ ಎಂದು ಹೇಳುತ್ತಿದ್ದಾರೆ. ಜನರು 'ಪಾಕಿಸ್ತಾನ್, ಅಫ್ಘಾನಿಸ್ತಾನವನ್ನು ತೊರೆ' ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಇದನ್ನೂ ಓದಿ-Amrullah Saleh: ಪಂಜ್‌ಶಿರ್ ಪಡೆಯ ನೇತೃತ್ವ ವಹಿಸಿದ ಅಮೃಲ್ಲಾ ಸಲೇಹ್, ಈ ವಿಶೇಷ ತಂತ್ರದಿಂದ ತಾಲಿಬಾನ್ ಮೇಲೆ ದಾಳಿ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 4 ರಂದು ಕಾಬೂಲ್ ತಲುಪಿದ್ದರು. ವರದಿಗಳ ಪ್ರಕಾರ ಹಮೀದ್, ಹಿರಿಯ ತಾಲಿಬಾನ್ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ ಮತ್ತು ಸರ್ಕಾರದಲ್ಲಿ ಹಕ್ಕಾನಿ ನೆಟ್ವರ್ಕ್ ಗೆ ಸರಿಯಾದ ಪ್ರಾತಿನಿಧ್ಯ ನೀಡುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ-No Clearance To Fly: ಅಫ್ಘಾನ್ ವಿಮಾನ ನಿಲ್ದಾಣದಲ್ಲಿಯೇ ಸಿಲುಕಿಕೊಂಡ 6 ವಿಮಾನಗಳು..!

ಪಾಕಿಸ್ತಾನವು ತಾಲಿಬಾನ್ ಅನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಲಾಗಿದೆ. ಅಫ್ಘಾನ್ ಸರ್ಕಾರವನ್ನು ಅಸ್ಥಿರಗೊಳಿಸುವ ಮೂಲಕ ಪಾಕಿಸ್ತಾನವು ಹೇಗೆ ತಾಲಿಬಾನ್‌ (Taliban) ನೊಂದಿಗೆ ಸಹಕರಿಸುತ್ತಿದೆ ಎಂಬುದಕ್ಕೆ ಈಗಾಗಲೇ ಹಲವಾರು ಮಾಧ್ಯಮ ವರದಿಗಳು ಸಾಕ್ಷ್ಯವನ್ನು ಪ್ರಸ್ತುತಪಡಿಸಿವೆ. ಅಫ್ಘಾನಿಸ್ತಾನ ಮತ್ತು ಅಮೆರಿಕದೊಂದಿಗಿನ ವರ್ಷಗಳ ಯುದ್ಧದಲ್ಲಿ, ಪಾಕಿಸ್ತಾನ ಮಾತ್ರ ತಾಲಿಬಾನ್‌ನ ಬೆಂಬಲಿಗ ರಾಷ್ಟ್ರವಾಗಿದೆ. ತಾಲಿಬಾನ್ ಪಾಕಿಸ್ತಾನವನ್ನು ತಮ್ಮ ಎರಡನೇ ಮನೆ ಎಂದು ನಿರಂತರವಾಗಿ ಹೇಳುತ್ತದೆ. ಇತ್ತೀಚೆಗೆ, ಪಾಕಿಸ್ತಾನದ ಕೇಂದ್ರ ಸಚಿವರು ಪಾಕಿಸ್ತಾನವು ತಾಲಿಬಾನ್‌ನ 'ರಕ್ಷಕ' ರಾಷ್ಟ್ರವಾಗಿದೆ ಮತ್ತು ದೀರ್ಘಕಾಲದವರೆಗೆ ಅದರ ಕಾಳಜಿ ವಹಿಸುತ್ತಿದೆ ಎಂದು ಹೇಳಿದ್ದರು. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡಿದ ಮೊದಲ ರಾಷ್ಟ್ರ ಪಾಕಿಸ್ತಾನವಾಗಿದೆ.

ಇದನ್ನೂ ಓದಿ-Panjshir Valley Resistance: ಸುದ್ದಿಗೋಷ್ಠಿ ನಡೆಸಿ ಪಂಜಶೀರ್ ವಶಪಡಿಸಿಕೊಂಡ ಕುರಿತು ಘೋಷಿಸಿದ ತಾಲಿಬಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News