Viral Video: ಮೈಮೇಲೆ ರೈಲು ಹರಿದರೂ ಬದುಕುಳಿದ ಭೂಪ: ಮೈಜುಂ ಎನ್ನುವಂತಿದೆ ವಿಡಿಯೋ

ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿರುವ ಪ್ರಯಾಣಿಕರು ಚಿತ್ರೀಕರಿಸಿದ ವೀಡಿಯೊದಲ್ಲಿ ಈ ದೃಶ್ಯ ಸೆರೆಯಾಗಿದೆ. ರೈಲು ಹಾದುಹೋಗುವ ಸ್ಥಳದ ಬಳಿ ಹಲವಾರು ಜನರು ಜಮಾಯಿಸಿರುವುದನ್ನು ಕಾಣಬಹುದು.

Written by - Bhavishya Shetty | Last Updated : Sep 10, 2022, 01:07 PM IST
    • ವ್ಯಕ್ತಿಯೊಬ್ಬ ರೈಲಿನ ಹಳಿಗೆ ಆಯತಪ್ಪಿ ಬಿದ್ದಿದ್ದಾನೆ

    • ಅದೇ ವೇಳೆ ರೈಲು ಬಂದಿದ್ದು, ಆತನ ಮೇಲೆಯೇ ಹರಿದಿದೆ

    • ಆದರೆ ಆತನ ಆಯುಷ್ಯ ಗಟ್ಟಿಯಿತ್ತೇನೋ ಬದುಕುಳಿದು ಬಿಟ್ಟಿದ್ದಾನೆ
Viral Video: ಮೈಮೇಲೆ ರೈಲು ಹರಿದರೂ ಬದುಕುಳಿದ ಭೂಪ: ಮೈಜುಂ ಎನ್ನುವಂತಿದೆ ವಿಡಿಯೋ  title=
Railway Track

Today Viral Video: ಕೆಲವೊಂದು ಬಾರಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಡಿಯೋಗಳು ಮನಸ್ಸಿಗೆ ಖುಷಿ ನೀಡಿದರೆ, ಇನ್ನೂ ಕೆಲವು ವಿಡಿಯೋಗಳು ಭಯವನ್ನು ಹುಟ್ಟಿಸುತ್ತವೆ. ಜೊತೆಗೆ ಪವಾಡವೂ ಎಂದೆನಿಸುತ್ತದೆ. ಇಂತಹದ್ದೇ ಸಾಲಿಗೆ ಸೇರಿದ ವಿಡಿಯೋವೊಂದು ಟ್ರೆಂಡಿಂಗ್ ನಲ್ಲಿ ಓಡಾಡುತ್ತಿದೆ. ವ್ಯಕ್ತಿಯೊಬ್ಬ ರೈಲಿನ ಹಳಿಗೆ ಆಯತಪ್ಪಿ ಬಿದ್ದಿದ್ದಾನೆ. ಅದೇ ವೇಳೆ ರೈಲು ಬಂದಿದ್ದು, ಆತನ ಮೇಲೆಯೇ ಹರಿದಿದೆ. ಆದರೆ ಆತನ ಆಯುಷ್ಯ ಗಟ್ಟಿಯಿತ್ತೇನೋ ಬದುಕುಳಿದು ಬಿಟ್ಟಿದ್ದಾನೆ. ಇದು ಪವಾಡವೇ ಸರಿ. 

ಇದನ್ನೂ ಓದಿ: Viral Video : ಮದುಮಗನಾದ 102 ವರ್ಷದ ವೃದ್ಧ, ಬಾರಾತ್‌ನಲ್ಲಿ ಕಂಗೊಳಿಸಿದ್ದು ಹೀಗೆ

ರೈಲೊಂದು ವ್ಯಕ್ತಿಯೊಬ್ಬನ ಮೇಲೆ ಹಾದು ಹೋಗಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದ್ದು, ಬಳಿಕ ಪವಾಡಸದೃಶ ರೀತಿಯಲ್ಲಿ ಆ ವ್ಯಕ್ತಿ ತನ್ನ ಮೈಮೇಲೆ ಯಾವುದೇ ಗಾಯವಿಲ್ಲದೆ ಪರಾರಿಯಾಗಿದ್ದಾನೆ. ಉತ್ತರ ಪ್ರದೇಶದ ಇಟಾವಾದಲ್ಲಿರುವ ಭರ್ತನ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

 

 

ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿರುವ ಪ್ರಯಾಣಿಕರು ಚಿತ್ರೀಕರಿಸಿದ ವೀಡಿಯೊದಲ್ಲಿ ಈ ದೃಶ್ಯ ಸೆರೆಯಾಗಿದೆ. ರೈಲು ಹಾದುಹೋಗುವ ಸ್ಥಳದ ಬಳಿ ಹಲವಾರು ಜನರು ಜಮಾಯಿಸಿರುವುದನ್ನು ಕಾಣಬಹುದು. ಮೊದಲಿಗೆ, ಸುಮಾರು ಒಂದು ನಿಮಿಷದವರೆಗೆ ರೈಲು ಅವನ ಮೇಲೆ ಹಾದು ಹೋಗುವುದರಿಂದ ನೀವು ಆ ವ್ಯಕ್ತಿಯನ್ನು ನೋಡಲಾಗುವುದಿಲ್ಲ. ಆತ ಪ್ಲಾಟ್‌ಫಾರ್ಮ್‌ಗೆ ವಿರುದ್ಧವಾಗಿ ಟ್ರ್ಯಾಕ್‌ಗಳ ಮೂಲೆಯಲ್ಲಿ ಇರುವ ಸ್ಥಳದಲ್ಲಿ ಅವಿತು ಕುಳಿತಿರುತ್ತಾನೆ.

ರೈಲು ನಿಲ್ದಾಣವನ್ನು ದಾಟಿದ ನಂತರ, ವ್ಯಕ್ತಿ ಎದ್ದು ತನ್ನ ಕೈಗಳನ್ನು ಮಡಚಿ ತನ್ನನ್ನು ಜೀವಂತವಾಗಿರಿಸಿದ ದೇವರಿಗೆ ಧನ್ಯವಾದ ಹೇಳುತ್ತಾನೆ. 

ಇದನ್ನೂ ಓದಿ:  Viral Video : ಬಾರ್ ಹೊರಗೆ ಹುಡುಗ ಹುಡುಗಿಯ ಬಿಗ್ ಫೈಟ್..! ಬಿಡಿಸಲು ಹೋಗಿ ಸೋತು ಸುಣ್ಣಾದ ಜನ

ಘಟನೆಯನ್ನು ನೋಡಿದ ಜನರು ಇದೇನೋ ಪವಾಡವೇ ಎಂಬಂತೆ ಶಾಕ್ ಆಗಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News