Viral Video: ಚಿಪ್ಸ್ ಕೊಟ್ಟಿಲ್ಲ ಅಂತಾ ವ್ಯಕ್ತಿಯ ಜುಟ್ಟು ಹಿಡಿದು ನೆಲಕ್ಕೆ ಬಡಿದ ಕೋತಿ: ವಿಡಿಯೋ ನೋಡಿ

ಸಾಮಾನ್ಯವಾಗಿ ಮಂಗಗಳು ಎಲ್ಲಾ ತರಹದ ಆಹಾರಗಳನ್ನು ತಿನ್ನುತ್ತವೆ. ಅದಕ್ಕೆ ಮೆಚ್ಚುಗೆಯಾದ ಆಹಾರ ನೀಡಿಲ್ಲವೆಂದರೆ ಕೋಪದಿಂದ ಏನು ಬೇಕಾದರು ಮಾಡಲು ಸಿದ್ಧರಿರುವ ಪ್ರಾಣಿಗಳವು.  

Written by - Bhavishya Shetty | Last Updated : Oct 30, 2022, 04:48 PM IST
    • ಚಿಪ್ಸ್ ನೀಡಿಲ್ಲ ಎಂದು ಕೋಪಗೊಂಡು ವ್ಯಕ್ತಿಯ ಜುಟ್ಟನ್ನು ಹಿಡಿದ ಮಂಗ
    • ಚಿಪ್ಸ್ ಪ್ಯಾಕ್ ಅನ್ನು ಕೊಡಲು ನಿರಾಕರಿಸಿದ ವ್ಯಕ್ತಿಯ ಮೇಲೆ ಕೋತಿ ದಾಳಿ
    • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ವಿಡಿಯೋ
Viral Video: ಚಿಪ್ಸ್ ಕೊಟ್ಟಿಲ್ಲ ಅಂತಾ ವ್ಯಕ್ತಿಯ ಜುಟ್ಟು ಹಿಡಿದು ನೆಲಕ್ಕೆ ಬಡಿದ ಕೋತಿ: ವಿಡಿಯೋ ನೋಡಿ title=
Monkey

Viral Video Today: ಮಂಗಗಳು ಚೇಷ್ಟೆಯ ಪ್ರಾಣಿಗಳಾಗಿದ್ದು, ಅವುಗಳು ಸಾಮಾನ್ಯವಾಗಿ ಜನರ ಮನೆಗಳಿಂದ ಆಹಾರವನ್ನು ಕದಿಯುವುದು ಅಥವಾ ಪ್ರವಾಸಿಗರಿಂದ ತಿಂಡಿಗಳನ್ನು ಕಸಿದುಕೊಳ್ಳುವುದನ್ನು ಮಾಡುತ್ತವೆ. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಮಂಗನಿಗೆ ಚಿಪ್ಸ್ ನೀಡಿಲ್ಲ ಎಂದು ಕೋಪಗೊಂಡು ವ್ಯಕ್ತಿಯ ಜುಟ್ಟನ್ನು ಹಿಡಿದು ನೆಲಕ್ಕೆ ದೂಡಿ ಹಾಕುವುದನ್ನು ನೋಡಬಹುದು.

ಇದನ್ನೂ ಓದಿ: T20 World Cup: ಆಫ್ರಿಕಾ ವಿರುದ್ಧ ‘ಬ್ರಹ್ಮಾಸ್ತ್ರ’ ಪ್ರಯೋಗಿಸಲಿದ್ದಾರೆ ಕ್ಯಾಪ್ಟನ್ ರೋಹಿತ್: ಪ್ಲೇಯಿಂಗ್ XIನಲ್ಲಿ ಈ ಆಟಗಾರನಿಗೆ ಸ್ಥಾನ!

ಸಾಮಾನ್ಯವಾಗಿ ಮಂಗಗಳು ಎಲ್ಲಾ ತರಹದ ಆಹಾರಗಳನ್ನು ತಿನ್ನುತ್ತವೆ. ಅದಕ್ಕೆ ಮೆಚ್ಚುಗೆಯಾದ ಆಹಾರ ನೀಡಿಲ್ಲವೆಂದರೆ ಕೋಪದಿಂದ ಏನು ಬೇಕಾದರು ಮಾಡಲು ಸಿದ್ಧರಿರುವ ಪ್ರಾಣಿಗಳವು.  

ಇದೀಗ ವೈರಲ್ ವಿಡಿಯೋದಲ್ಲಿಯೂ ಕೂಡ ಹಾಗೇ ಇದ್ದು, ತನ್ನ ಚಿಪ್ಸ್ ಪ್ಯಾಕ್ ಅನ್ನು ಕೊಡಲು ನಿರಾಕರಿಸಿದ ವ್ಯಕ್ತಿಯ ಮೇಲೆ ಕೋತಿಯು ಕೋಪದಿಂದ ದಾಳಿ ಮಾಡಿ ಆತನ ಕೂದಲನ್ನು ಎಳೆಯುತ್ತಿರುವ ಕಾಣಬಹುದು.  ಚಿಪ್ಸ್ ಪ್ಯಾಕೆಟ್ ಅನ್ನು ತೆರೆಯುತ್ತಿರುವ ವ್ಯಕ್ತಿಯ ಸುತ್ತಲು ಕೆಲವು ಮಂಗಗಳು ಕುಳಿತಿವೆ. ಆದರೆ ಆ ಚಿಪ್ಸ್ ಕೊಡದಿದ್ದಾಗ ಆತನ ಮೇಲೆ ಹಾರಿ, ಪ್ಯಾಕ್ ಹರಿದು ಹಾಕುತ್ತವೆ. ಈ ಸಂದರ್ಭದಲ್ಲಿ ನೆಲಕ್ಕೆ ಬಿದ್ದ ಆ ವ್ಯಕ್ತಿ ಎದ್ದೇಳಲು ಕೊಂಚ ಸಮಯ ತೆಗೆದುಕೊಳ್ಳುತ್ತಾನೆ.

 

 

ಇದನ್ನೂ ಓದಿ: Virat Kohli Sand Art: ವಿರಾಟ್ ಕೊಹ್ಲಿಗೆ ಪಾಕಿಸ್ತಾನದ ಅಭಿಮಾನಿಯಿಂದ ಸ್ಪೆಷಲ್ ಗಿಫ್ಟ್! ಏನದು ನೀವೇ ನೋಡಿ

ನಂತರ ಆತನ ಜೊತೆಯೇ ಕುಳಿತುಕೊಂಡು ನೆಲದಿಂದ ಚಿಪ್ಸ್ ಹೆಕ್ಕಿ ತಿನ್ನುತ್ತವೆ. ಈ ಕ್ಲಿಪ್ ಅನ್ನು 'parida20208' ಬಳಕೆದಾರರು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದು 3.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು 61 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News