ಹೊರಬಿತ್ತು OPPO Reno 10 Series ಬೆಲೆ ! ಅತ್ಯದ್ಭುತ ಫೀಚರ್ಸ್ ನೊಂದಿಗೆ ಮಾರುಕಟ್ಟೆಗೆ ಬಿಡುಗಡೆ

OPPO Reno 8 ಸರಣಿಯ ಬಿಡುಗಡೆಗೆ ಸಿದ್ದತೆ ನಡೆಸುತ್ತಿದೆ.  ಸ್ಮಾರ್ಟ್‌ಫೋನ್‌ಗಳು ಮತ್ತು TWS ಇಯರ್‌ಫೋನ್‌ಗಳ ಬಾಕ್ಸ್ ಬೆಲೆಗಳನ್ನು ಟಿಪ್‌ಸ್ಟರ್ ಮುಕುಲ್ ಶರ್ಮಾ  ಲೀಕ್  ಮಾಡಿದ್ದಾರೆ.

Written by - Ranjitha R K | Last Updated : Jul 6, 2023, 11:59 AM IST
  • OPPO Reno 8 ಸರಣಿಯ ಬಿಡುಗಡೆಗೆ ಸಿದ್ದತೆ
  • ಫೋನ್‌ನೊಂದಿಗೆ Enco Air 3 Pro TWS ಇಯರ್‌ಫೋನ್‌ ಕೂಡಾ ಲಾಂಚ್
  • ಫೋನ್‌ನ ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಬಹಿರಂಗ
ಹೊರಬಿತ್ತು OPPO Reno 10 Series ಬೆಲೆ !  ಅತ್ಯದ್ಭುತ ಫೀಚರ್ಸ್ ನೊಂದಿಗೆ ಮಾರುಕಟ್ಟೆಗೆ ಬಿಡುಗಡೆ  title=

ಬೆಂಗಳೂರು : OPPO Reno 8 ಸರಣಿಯ ಬಿಡುಗಡೆಗೆ ಸಿದ್ದತೆ ನಡೆಸುತ್ತಿದೆ. ಫೋನ್‌ನೊಂದಿಗೆ Enco Air 3 Pro TWS ಇಯರ್‌ಫೋನ್‌ಗಳು ಜುಲೈ 10 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯ ಮೊದಲು, ಕಂಪನಿಯು ಫೋನ್‌ನ ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಬಹಿರಂಗಪಡಿಸಿದೆ. ಬಿಡುಗಡೆಗೂ ಮುನ್ನವೇ ಫೋನ್‌ನ ಬೆಲೆಗಳು ಸೋರಿಕೆಯಾಗಿವೆ.  ಮೂರು ಫೋನ್‌ಗಳನ್ನು (Reno 10, Reno 10 Pro ಮತ್ತು Reno 10 Pro +) ಈ ಸರಣಿಯಲ್ಲಿ ಸೇರಿಸಲಾಗುವುದು. 

OPPO Reno 10 ಸರಣಿ, Enco Air 3 Pro ಬೆಲೆ : 
ಈ ಮೂರು ಸ್ಮಾರ್ಟ್‌ಫೋನ್‌ಗಳು ಮತ್ತು TWS ಇಯರ್‌ಫೋನ್‌ಗಳ ಬಾಕ್ಸ್ ಬೆಲೆಗಳನ್ನು ಟಿಪ್‌ಸ್ಟರ್ ಮುಕುಲ್ ಶರ್ಮಾ  ಲೀಕ್  ಮಾಡಿದ್ದಾರೆ. Reno 10 ಬೆಲೆ  38,999 ರೂಪಾಯಿ ಎಂದು ಹೇಳಲಾಗಿದ್ದು, Reno 10 Pro ಮತ್ತು Reno 10 Pro+ ಬೆಲೆ  44,999 ರೂ. ಮತ್ತು 59,999 ರೂ  ಎಂದು ಹೇಳಲಾಗಿದೆ. 

ಇದನ್ನೂ ಓದಿ : Tech Tips: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಇಂಟರ್ನೆಟ್ ಸರಿಯಾಗಿ ವರ್ಕ್ ಆಗ್ತಿಲ್ಲವೇ?

ಬಾಕ್ಸ್ ಬೆಲೆಗಳು ಅಂತಿಮ ಮಾರಾಟದ ಬೆಲೆಗಳಿಂದ ಸ್ವಲ್ಪ ಮಟ್ಟಿನ ಬದಲಾವಣೆ ಕಾಣಬಹುದು ಎನ್ನುವುದು ಇಲ್ಲಿ ನೆನಪಿನಲ್ಲಿಡಬೇಕಾದ ಅಂಶ.  ಏಕೆಂದರೆ ಅವುಗಳು ಸಾಧನದ ಮೂಲ RAM ಮತ್ತು ಶೇಖರಣಾ ಕಾನ್ಫಿಗರೇಶನ್‌ನಿಂದ ಪ್ರಭಾವಿತವಾಗಿರುತ್ತದೆ. ಇದರ ಹೊರತಾಗಿ, OPPO Enco Air 3 Pro ನ ಬಾಕ್ಸ್ ಬೆಲೆ 7,999 ರೂ ಎಂದು ವರದಿಯಾಗಿದೆ.

Oppo Reno 10 ಸರಣಿಯು ಇತ್ತೀಚಿನ ತಾಂತ್ರಿಕ ವಿಶೇಷಣಗಳೊಂದಿಗೆ ಬರುತ್ತದೆ. ಇದು ಪಂಚ್-ಹೋಲ್ ಕಟೌಟ್‌ನೊಂದಿಗೆ 3D ಸ್ಕ್ರೀನ್  ಒಳಗೊಂಡಿದೆ. ಫೋನ್‌ನ ಹಿಂಭಾಗದಲ್ಲಿ ಪಿಲ್ ಶೇಪ್ ಕ್ಯಾಮೆರಾ ಮಾಡ್ಯೂಲ್  ಇರಲಿದೆ. Reno 10 Pro+ ರೂಪಾಂತರದಲ್ಲಿ, ಮೂರನೇ ಘಟಕವು 64MP OIS-ಸಕ್ರಿಯಗೊಳಿಸಿದ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಮತ್ತು OIS ಜೊತೆಗೆ 50MP ಸೋನಿ IMX890 ಮೇನ್ ಸೆನ್ಸರ್ ಅನ್ನು ಒಳಗೊಂಡಿದೆ.

ಇದನ್ನೂ ಓದಿ : 2,500ರೂ.ಗಿಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ನೋಕಿಯಾದ 4G ಫೋನ್

Reno 10 ಸರಣಿಯ ಸ್ಟ್ಯಾಂಡರ್ಡ್ ಮತ್ತು ಪ್ರೊ ರೂಪಾಂತರಗಳು ಪೆರಿಸ್ಕೋಪ್ ಕ್ಯಾಮೆರಾದ ಬದಲಿಗೆ 32MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುತ್ತದೆ. ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಪ್ರಾಡಕ್ಟ್ ಲಿಸ್ಟ್ ಪ್ರಕಾರ, Reno 10 Pro Duo ಮಾದರಿಯು 12GB + 256GB RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ನೊಂದಿಗೆ ಲಭ್ಯವಿರುತ್ತದೆ. ಆದರೆ ಸ್ಟ್ಯಾಂಡರ್ಡ್  ಮಾದರಿಯು 8GB + 256GB ಆಯ್ಕೆಯೊಂದಿಗೆ ಬರುತ್ತದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News