Oppo F23 5G: ಐದೇ ನಿಮಿಷದಲ್ಲಿ ಚಾರ್ಜ್ ಆಗುವ ಈ ಫೋನ್ ಅನ್ನು ನಾಲ್ಕು ಸಾವಿರ ರೂಪಾಯಿಗೆ ಖರೀದಿಸಿ

ಈ ಬಾರಿ ಕಂಪನಿಯು ಫೋನ್ ಬ್ಯಾಟರಿಗೆ ಹೆಚ್ಚಿನ ಒತ್ತು ನೀಡಿದೆ. ಫೋನ್‌ನ ವಿನ್ಯಾಸವು OPPO Reno 8  ಸಿರೀಸ್ ನಂತೆಯೇ ಕಾಣಿಸುತ್ತದೆ. Oppo F23 5G ಬೆಲೆ ಮತ್ತು ವೈಶಿಷ್ಟ್ಯಗಳನ್ನು  ನೋಡೋಣ.  

Written by - Ranjitha R K | Last Updated : May 16, 2023, 01:03 PM IST
  • ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ OPPO
  • ಈ ಫೋನ್ ಗೆ Oppo F23 5G ಎಂದು ಹೆಸರಿಸಲಾಗಿದೆ.
  • ಇದರ ಬೆಲೆ ವೈಶಿಷ್ಟ್ಯ ಏನಿದೆ ತಿಳಿಯಿರಿ
Oppo F23 5G: ಐದೇ ನಿಮಿಷದಲ್ಲಿ ಚಾರ್ಜ್ ಆಗುವ ಈ ಫೋನ್ ಅನ್ನು ನಾಲ್ಕು ಸಾವಿರ ರೂಪಾಯಿಗೆ ಖರೀದಿಸಿ   title=

ಬೆಂಗಳೂರು : OPPO ಭಾರತದಲ್ಲಿ ತನ್ನ ಅತ್ಯಂತ ಶಕ್ತಿಶಾಲಿ ಬ್ಯಾಟರಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದನ್ನು Oppo F23 5G ಎಂದು ಹೆಸರಿಸಲಾಗಿದೆ. ಈ ಫೋನ್ ನೇರವಾಗಿ Redmi Note 12 Pro ನೊಂದಿಗೆ ಸ್ಪರ್ಧಿಸುತ್ತದೆ. ಕಂಪನಿಯ F-ಸಿರೀಸ್ ಫೋನ್ ಗಳು ಕೈಗೆಟುಕುವ ಬೆಲೆಯಲ್ಲಿ  ಸಿಗುತ್ತಿದ್ದು, ಪವರ್ ಫುಲ್ ಕ್ಯಾಮೆರಾಗಳಿಗೆ ಹೆಸರು ವಾಸಿಯಾಗಿದೆ. ಆದರೆ, ಈ ಬಾರಿ ಕಂಪನಿಯು ಫೋನ್ ಬ್ಯಾಟರಿಗೆ ಹೆಚ್ಚಿನ ಒತ್ತು ನೀಡಿದೆ. ಫೋನ್‌ನ ವಿನ್ಯಾಸವು OPPO Reno 8  ಸಿರೀಸ್ ನಂತೆಯೇ ಕಾಣಿಸುತ್ತದೆ. Oppo F23 5G ಬೆಲೆ ಮತ್ತು ವೈಶಿಷ್ಟ್ಯಗಳನ್ನು  ನೋಡೋಣ. 

Oppo F23 5G ಬೆಲೆ :
Oppo F23 5G ಅನ್ನು ಮೇ 18 ರಿಂದ ಎರಡು ಬಣ್ಣ ಆಯ್ಕೆಗಳಲ್ಲಿ ನೀಡಲಾಗುವುದು. ಬೋಲ್ಡ್ ಗೋಲ್ಡ್ ಮತ್ತು ಕೂಲ್ ಬ್ಲ್ಯಾಕ್ ಎನ್ನುವ ಎರಡು ಕಲರ್ ನಲ್ಲಿ ಈ ಫೋನ್ ಲಭ್ಯವಿರಲಿದೆ.  8GB RAM ಮತ್ತು 256GB ಸ್ಟೋರೇಜ್ ಹೊಂದಿರುವ ರೂಪಾಂತರವನ್ನು Oppo ಇಂಡಿಯಾ ಸ್ಟೋರ್, ಅಮೆಜಾನ್ ಮತ್ತು ಆಫ್‌ಲೈನ್ ರೀಟೇಲ್ ಸ್ಟೋರ್‌ಗಳು ಸೇರಿದಂತೆ ವಿವಿಧ ಚಾನಲ್‌ಗಳ ಮೂಲಕ ಮುಂಗಡವಾಗಿ ಆರ್ಡರ್ ಮಾಡಬಹುದು. Oppo F23 5G ಬೆಲೆ  24,999 ರೂ. ಆದರೆ, ಈ ಪೋನ್ ಮೇಲೆ  ಬ್ಯಾಂಕ್ ಆಫರ್ ಗಳನ್ನೂ ನೀಡಲಾಗುತ್ತದೆ. ಗ್ರಾಹಕರು ತಿಂಗಳಿಗೆ 
4,167 ರೂಪಾಯಿ ಪಾವತಿಸುವ ಮೂಲಕ ಆಯ್ದ ಬ್ಯಾಂಕ್‌ಗಳಿಂದ ನೋ ಕಾಸ್ಟ್ ಇಎಂಐ  ಸೌಲಭ್ಯ ಪಡೆಯಬಹುದು. 

ಇದನ್ನೂ ಓದಿ : Google Facts: ನೀವೂ ಗೂಗಲ್ ಬಳಸುತ್ತೀರಾ? ಹಾಗಾದರೆ ಗೂಗಲ್ ಕುರಿತಾದ ಈ ಸಂಗತಿಗಳು ನಿಮಗೆ ಗೊತ್ತಿರಬೇಕಲ್ಲ!

Oppo F23 5G ವಿಶೇಷಣಗಳು :
Oppo F23 5G 6.7-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ.  ಇದು ಅತ್ಯಂತ ತೆಳುವಾದ ಫೋನ್ ಆಗಿದ್ದು, Oppo ಫುಲ್ HD+ ರೆಸಲ್ಯೂಶನ್‌ನೊಂದಿಗೆ LCD ಡಿಸ್‌ಪ್ಲೇಯನ್ನು ಹೊಂದಿದೆ. 

Oppo F23 5G ಬ್ಯಾಟರಿ :
Oppo F23 ಕ್ವಾಲ್ಕಾಮ್ ನ ಸ್ನಾಪ್ಡ್ರಾಗನ್ 695 SoCನಿಂದ ಚಾಲಿತವಾಗಿದೆ. ಈ ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ. ಫೋನ್ 67W ಫಾಸ್ಟ್  ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. Oppo ತನ್ನ 67W SuperVOOC ಫ್ಲ್ಯಾಷ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೈಲೈಟ್ ಮಾಡಿದೆ.  ಇದು ಕೇವಲ 18 ನಿಮಿಷಗಳಲ್ಲಿ 50 ಪ್ರತಿಶತದಷ್ಟು  ಚಾರ್ಜ್ ಆಗುತ್ತದೆ. ಇನ್ನು ಕೇವಲ 5 ನಿಮಿಷ ಚಾರ್ಜ್ ಮಾಡಿದರೂ ಫೋನ್ 6 ಗಂಟೆಗಳವರೆಗೆ ನಡೆಯುತ್ತದೆ. 5 ನಿಮಿಷ ಚಾರ್ಜ್ ಮಾಡುವ ಮೂಲಕ ಫೋನ್ ಕರೆಗಳನ್ನು ಅಥವಾ 2.5 ಗಂಟೆಗಳ YouTube ವೀಡಿಯೊ ವೀಕ್ಷಣೆ ಮಾಡುವುದು ಸಾಧ್ಯವಾಗುತ್ತದೆ. ಸಾಧನವು 5000mAh ಬ್ಯಾಟರಿಯೊಂದಿಗೆ ಬರುತ್ತದೆ. ಫುಲ್ ಚಾರ್ಜ್ ಮಾಡಿದರೆ  39 ಗಂಟೆಗಳವರೆಗೆ ಫೋನ್ ಕಾಲ್ ಮತ್ತು 16 ಗಂಟೆಗಳವರೆಗೆ YouTube ವೀಡಿಯೊಗಳನ್ನು ವೀಕ್ಷಿಸಬಹುದಾಗಿದೆ. 

ಇದನ್ನೂ ಓದಿ : Twitter ಹಾಗೂ Instagram ಅಷ್ಟೇ ಅಲ್ಲ ಇನ್ಮುಂದೆ Gmail ನಲ್ಲಿಯೂ ನಿಮಗೆ ಬ್ಲೂ ಟಿಕ್ ಸಿಗಲಿದೆ

Oppo F23 5G ಕ್ಯಾಮೆರಾ :
Oppo F23 5G 64-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಇದರ ಜೊತೆಗೆ, ಹಿಂಭಾಗದಲ್ಲಿ 2-ಮೆಗಾಪಿಕ್ಸೆಲ್ ನ ಎರಡು ಕ್ಯಾಮೆರಾಗಳಿವೆ. ಫ್ರಂಟ್ ಪ್ಯಾನಲ್ ನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಪೋರ್ಟ್ರೇಟ್ ಮೋಡ್, ಎಐ ಪೋರ್ಟ್ರೇಟ್ ರಿಟೌಚಿಂಗ್, ಸೆಲ್ಫಿ ಎಚ್‌ಡಿಆರ್ ಮತ್ತು ಎಐ ಕಲರ್ ಪೋರ್ಟ್ರೇಟ್‌ನಂತಹ ಜನಪ್ರಿಯ ವೈಶಿಷ್ಟ್ಯಗಳನ್ನು ಈ ಫೋನ್ ಹೊಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News