ಒಂದು ಲಕ್ಷ ಮೌಲ್ಯದ ಫೋನ್ ಅನ್ನು ಕೇವಲ 22 ಸಾವಿರ ರೂ.ಗೆ ಖರೀದಿಸಿ! Samsung ಮೊಬೈಲ್ ಮೇಲೆ ಭಾರೀ ಡಿಸ್ಕೌಂಟ್

Samsung Galaxy S22 Plus: 1 ಲಕ್ಷ ರೂಪಾಯಿ ಬೆಲೆಬಾಳುವ ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಅನ್ನು  ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ ನಲ್ಲಿ ಈ ಫೋನ್ ಅನ್ನು ಕೇವಲ 22,000 ರೂ.ಗೆ ಖರೀದಿಸುವುದು ಸಾಧ್ಯವಾಗುತ್ತದೆ.  ಈ ಫೋನ್ ಅನ್ನು ಇಎಂಐ ಮೂಲಕ ಕೂಡಾ ಖರೀದಿಸಬಹುದು.  

Written by - Ranjitha R K | Last Updated : May 19, 2023, 10:36 AM IST
  • Samsung Galaxy S22 Plus ಖರೀದಿಯ ಮೇಲೆ ಬಂಪರ್ ರಿಯಾಯಿತಿ
  • 22,000 ರೂಪಾಯಿಗೆ ಖರೀದಿಸಲು ಸಾಧ್ಯವಾಗುವಂಥಹ ಆಫರ್
  • ಆಫರ್ ನ ಲಾಭವನ್ನು ಪಡೆಯುವುದು ಹೇಗೆ ?
ಒಂದು ಲಕ್ಷ ಮೌಲ್ಯದ ಫೋನ್ ಅನ್ನು ಕೇವಲ 22 ಸಾವಿರ ರೂ.ಗೆ ಖರೀದಿಸಿ! Samsung ಮೊಬೈಲ್ ಮೇಲೆ ಭಾರೀ ಡಿಸ್ಕೌಂಟ್  title=

Samsung Galaxy S22 Plus : Samsung Galaxy S22 Plus ಖರೀದಿಯ ಮೇಲೆ ಬಂಪರ್ ರಿಯಾಯಿತಿಗಳು ಲಭ್ಯವಿದೆ. 1 ಲಕ್ಷ ರೂಪಾಯಿ ಬೆಲೆಬಾಳುವ ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಅನ್ನು ಕೇವಲ 22,000 ರೂಪಾಯಿಗೆ  ಖರೀದಿಸಲು ಸಾಧ್ಯವಾಗುವಂಥಹ ಆಫರ್ ಗಳನ್ನು ನೀಡಲಾಗಿದೆ. ಹೌದು Samsung Galaxy S22 Plus ಪ್ರೀಮಿಯಂ ಸ್ಮಾರ್ಟ್‌ಫೋನ್ ಮೇಲೆ ಈ ರಿಯಾಯಿತಿ ನೀಡಲಾಗಿದೆ. ಇದು Qualcomm Snapdragon 8 Gen 1ನ ಪ್ರೊಸೆಸರ್ ಸಪೋರ್ಟ್ ನೊಂದಿಗೆ ಬರುತ್ತದೆ. ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ ನಲ್ಲಿ ಈ ಫೋನ್ ಅನ್ನು ಕೇವಲ 22,000 ರೂ.ಗೆ ಖರೀದಿಸುವುದು ಸಾಧ್ಯವಾಗುತ್ತದೆ. ಈ ಪ್ರೀಮಿಯಂ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ 8 GB RAM ಜೊತೆಗೆ 128 GB ಮತ್ತು 256 GB  ಸ್ಟೋರೇಜ್ ರೂಪಾಂತರವನ್ನು ಹೊಂದಿದೆ.

ಆಫರ್ ನ ಲಾಭವನ್ನು ಪಡೆಯುವುದು ಹೇಗೆ ? :
Samsung Galaxy S22 Plus ಬೆಲೆ  1,01,999 ರೂಪಾಯಿ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ  ಈ ಫೋನ್ ಮೇಲೆ  46 ಪ್ರತಿಶತ ರಿಯಾಯಿತಿ ನೀಡಲಾಗುತ್ತಿದ್ದು, 54,999 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಖರೀದಿ ಮೇಲೆ 30,000 ರೂ.ಗಳ ನೇರ ವಿನಿಮಯ ಕೊಡುಗೆಯನ್ನು ಸಹ ನೀಡಲಾಗುತ್ತಿದೆ. ಈ ಆಫರ್ ನೊಂದಿಗೆ ಫೋನ್ ಅನ್ನು ಖರೀದಿಸುವುದಾದರೆ ಈ ಫೋನ್ ಬೆಲೆ 24,999 ರೂ. ಆಗಿರಲಿದೆ. ಇನ್ನು ನೀವು ಫೋನ್ ಖರೀದಿಸುವಾಗ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, 10 ಪ್ರತಿಶತದಷ್ಟು ರಿಯಾಯಿತಿಯನ್ನು  ಕೂಡಾ ಪಡೆಯಬಹುದು. ಅಲ್ಲಿದೆ ಮತ್ತೆ  2499 ರೂಪಾಯಿ ಕಡಿಮೆಯಾಗಿ ಈ ಫೋನ್ ಬೆಲೆ ಕೇವಲ 22,500 ರೂ.ಗೆ ಇಳಿಯುತ್ತದೆ. 

ಇದನ್ನೂ ಓದಿ : ಮತ್ತೆ ಮೂರು ಹೊಸ ಬೈಕ್ ಬಿಡುಗಡೆ ಮಾಡಿದ Hero!ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಬೈಕ್ ಗಳಿವು !

ಇಎಂಐ ರೂಪದಲ್ಲಿ ಎಷ್ಟು ಹಣ ಪಾವತಿಸಬೇಕಾಗುತ್ತದೆ ? : 
Samsung Galaxy S22 Plus ಅನ್ನು EMI ನಲ್ಲಿ ಸಹ ಖರೀದಿಸಬಹುದು. ಇದಕ್ಕಾಗಿ ನೀವು ಪ್ರತಿ ತಿಂಗಳು 9,167 ರೂಪಾಯಿಗಳನ್ನು EMI ಆಗಿ ಪಾವತಿಸಬೇಕಾಗುತ್ತದೆ. ನೀವು ಈ ಸ್ಮಾರ್ಟ್‌ಫೋನ್ ಖರೀದಿಸಿದರೆ ನಿಮಗೆ 1 ವರ್ಷದ ಮ್ಯಾನುಫ್ಯಾಕ್ಚರಿಂಗ್ ವಾರಂಟಿ ಸಿಗುತ್ತದೆ. ಇದಲ್ಲದೆ, ನೀವು 6 ತಿಂಗಳ ಇನ್-ಬಾಕ್ಸ್  ಪ್ರಾಡಕ್ಟ್ ವಾರಂಟಿಯನ್ನು  ಕೂಡಾ ನೀಡಲಾಗುತ್ತದೆ. 

Samsung Galaxy S22 Plus ನ ವೈಶಿಷ್ಟ್ಯಗಳು : 
Samsung Galaxy S22 Plus 6.6-ಇಂಚಿನ  ಫುಲ್ HD ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಫೋನ್ 50MP ಮೇನ್ ಕ್ಯಾಮೆರಾವನ್ನು ಹೊಂದಿದೆ.  12 ಎಂಪಿ ಮತ್ತು 10 ಎಂಪಿ ಎರಡು ಕ್ಯಾಮೆರಾಗಳನ್ನು ಕೂಡಾ ಈ ಫೋನ್ ಪಡೆಯುತ್ತದೆ. ಇದಲ್ಲದೇ 10MP ಫ್ರಂಟ್ ಕ್ಯಾಮೆರಾವನ್ನು ಕೂಡಾ ಇದು ಪಡೆಯುತ್ತದೆ. ಸ್ಮಾರ್ಟ್ಫೋನ್ 4500 mAh ಬ್ಯಾಟರಿಯೊಂದಿಗೆ ಬರುತ್ತದೆ. 

ಇದನ್ನೂ ಓದಿ : ಅಗ್ಗದ ದರದಲ್ಲಿ 4K Smart TV ಬಿಡುಗಡೆ ಮಾಡಿದ Samsung!ಫೀಚರ್ಸ್ ಕೂಡಾ ಅದ್ಭುತ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News