ಕೇಂದ್ರ ಸರ್ಕಾರದ ಇ-ಸ್ಕಾಲರ್ ಶಿಪ್ ಯೋಜನೆಯಡಿ 2020-21ನೇ ಸಾಲಿಗೆ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಹಾಗೂ ಟಾಪ್ ಕ್ಲಾಸ್ ವಿಕಲಚೇತನ ವಿದ್ಯಾರ್ಥಿಗಳಿಂದ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನಕ್ಕೆ ಇ-ಸ್ಕಾಲರ್ ಶಿಪ್ ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಲ ಮಂಡಳಿಯಿಂದ ಗ್ರಾಹಕರು ಹೊಸದಾಗಿ ನೀರಿನ ನಳ ಸಂಪರ್ಕ ಪಡೆಯಲು ಜಲನಿಧಿ ತಂತ್ರಾಂಶದ ಮೂಲಕ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ, ಹೊಸ ನಳದ ಸಂಪರ್ಕ ಪಡೆಯಬೇಕೆಂದು ಕರ್ನಾಟಕ ಸರ್ಕಾರ ಆದೇಶಿಸಿದೆ.
2020-21 ನೇ ಸಾಲಿಗೆ ರಾಷ್ಟೀಯ ವಿದ್ಯಾರ್ಥಿವೇತನ ಪೋರ್ಟಲ್ (ಎನ್.ಎಸ್.ಪಿ) ಅನ್ವಯ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ಖ್, ಭೌದ್ದ ಹಾಗೂ ಪಾರ್ಸಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಬೆಂಗಳೂರು : ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಬೀಡಿ, ಸುಣ್ಣದ ಕಲ್ಲು, ಡೊಲೊಮೈಟ್, ಕಬ್ಬಿಣ, ಕ್ರೋಮ್, ಮ್ಯಾಂಗನೀಸ್ ಅದಿರಿನ ಗಣಿಗಳು ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ 2020-21 ನೇ ಸಾಲಿನ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಲು ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಿದೆ.
1 ನೇ ತರಗತಿಯಿಂದ ಪದವಿ, ಸ್ನಾತಕೋತ್ತರ ಪದವಿ ವರೆಗಿನ ವಿದ್ಯಾಥಿಗಳು, ವೃತ್ತಿಪರ ಮತ್ತು ಸಾಮಾನ್ಯ ಶಿಕ್ಷಣ ಕೊರ್ಸುಗಳನ್ನು ಪಡೆಯುತ್ತಿರುವವರು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ನಲ್ಲಿ https://schoolarships.gov.in ಆನ್ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.