ಈ ಬಡ ಫಕೀರನ ಜೋಳಿಗೆಯನ್ನು ನೀವು ಪ್ರೀತಿಯ ಆಶೀರ್ವಾದದಿಂದ ತುಂಬಿಸಿದ್ದೀರಿ. ನನಗೆ ದೇಶ ಮುನ್ನಡೆಸಲು ಪ್ರಚಂಡ ಬಹುಮತ ಕೊಟ್ಟಿದ್ದೀರಿ. ನಿಮಗೆಲ್ಲರಿಗೂ ನನ್ನ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪಾಟಲಿಪುತ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಮ್ ಕೃಪಾಲ್ ಯಾದವ್ ಮತ್ತು ಆರ್ಜೆಡಿಯಿಂದ ಸ್ಪರ್ಧಿಸಿದ್ದ ಮೀಸಾ ಭಾರ್ತಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ರಮೇಶ್ ಶರ್ಮಾ ಸ್ಪರ್ಧಿಸಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹೆಸರಿನ ಮುಂದಿದ್ದ ಚೌಕಿದಾರ್ ಪದವನ್ನು ಕೈಬಿಟ್ಟಿದ್ದಾರೆ.
ಮತ್ತೊಂದು ಬಾರಿ ದೇಶದಲ್ಲಿ ಸ್ಥಿರ ಸರ್ಕಾರ ದೊರೆತಿದೆ. ಇದು ಕೋಟ್ಯಂತರ ಭಾರತೀಯರ ಅದೃಷ್ಟವಾಗಿದ್ದು, ರಾಷ್ಟ್ರೀಯ ಶಕ್ತಿಗೆ ಸಿಕ್ಕ ದಿಗ್ವಿಜಯ ಎಂದ ಅವರು, ಪ್ರಜಾಪ್ರಭುತ್ವದ ಯಶಸ್ಸಿನ ಹಾದಿಯಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಎಂದು ಆರ್ಎಸ್ಎಸ್ ನಾಯಕ ಭಯ್ಯಾಜಿ ಜೋಷಿ ಹೇಳಿದ್ದಾರೆ.
ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಅಮೋಘ ವಿಜಯಕ್ಕಾಗಿ ರಾಮಗೋಪಾಲ್ ವರ್ಮಾ ಅಭಿನಂದಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.