Wrestlers Protest: 'ನಮ್ಮ ಹೋರಾಟ ಬೃಜ್ ಭೂಷಣ್ ವಿರುದ್ಧ, ಸರ್ಕಾರದ ವಿರುದ್ಧ ಅಲ್ಲ' ಮುಂದಿನ ಕಾರ್ಯತಂತ್ರ ಸಿದ್ಧಪಡಿಸುತ್ತಿದ್ದೇವೆ ಎಂದ ಸಾಕ್ಷಿ ಮಲಿಕ್

Wrestlers Protest: ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.  

Written by - Nitin Tabib | Last Updated : Jun 5, 2023, 10:20 PM IST
  • ನಮ್ಮ ಹೋರಾಟ ಬ್ರಿಜ್ ಭೂಷಣ್ ವಿರುದ್ಧ ಎಂದು ಸಾಕ್ಷಿ ಮಲಿಕ್ ಪತಿ ಹಾಗೂ ಕುಸ್ತಿಪಟು ಸತ್ಯವ್ರತ್ ಕಡಯನ್ ಹೇಳಿದ್ದಾರೆ.
  • ಕುಸ್ತಿ ಒಕ್ಕೂಟದ ಅಧ್ಯಕ್ಷರ ವಿರುದ್ಧ. ನಮ್ಮ ಕುಸ್ತಿಯನ್ನು ಸ್ವಚ್ಛಗೊಳಿಸಲು ನಾವು ಹೋರಾಟ ನಡೆಸುತ್ತಿದ್ದೇವೆ.
  • ನಮಗೆ ಸರ್ಕಾರ ನೌಕರಿ ನೀಡಿದೆ ಮತ್ತು ನಮ್ಮ ಹೋರಾಟ ಸರ್ಕಾರದ ವಿರುದ್ಧ ಅಲ್ಲ.
  • ನಮ್ಮಿಂದ ನಾವು ಮಾಡುತ್ತಿರುವ ಸರ್ಕಾರದ ಕೆಲಸ ನಿಲ್ಲಬಾರದು ಅಂದುಕೊಂಡಿದ್ದೇವೆ,
  • ಹೀಗೇಕೆ ನೆಗೆಟಿವ್ ಆಗಿ ಬಿಂಬಿಸಲಾಯಿತು ಎಂಬುದು ಗೊತ್ತಾಗಲಿಲ್ಲ ಎಂದು ಅವರು ಹೇಳಿದ್ದಾರೆ.
Wrestlers Protest: 'ನಮ್ಮ ಹೋರಾಟ ಬೃಜ್ ಭೂಷಣ್ ವಿರುದ್ಧ, ಸರ್ಕಾರದ ವಿರುದ್ಧ ಅಲ್ಲ' ಮುಂದಿನ ಕಾರ್ಯತಂತ್ರ ಸಿದ್ಧಪಡಿಸುತ್ತಿದ್ದೇವೆ ಎಂದ ಸಾಕ್ಷಿ ಮಲಿಕ್ title=

Wrestlers Protest: ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಿಂದ  ಹಿಂದೆ ಸರಿಯುವ ವರದಿಗಳನ್ನು ಕುಸ್ತಿಪಟುಗಳು ತಳ್ಳಿಹಾಕಿದ್ದಾರೆ. ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಸತ್ಯವ್ರತ್ ಕಡಯನ್ ಸೋಮವಾರ ಫೇಸ್ ಬುಕ್ ಲೈವ್ ನಲ್ಲಿ ನಮ್ಮ ಹೋರಾಟ ಬ್ರಿಜ್ ಭೂಷಣ್ ವಿರುದ್ಧವೇ ಹೊರತು ಸರ್ಕಾರದ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೇ ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಒಲಂಪಿಕ್ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ನ್ಯಾಯ ಸಿಗುವವರೆಗೂ ನಾವು ನಮ್ಮ  ಹೋರಾಟವನ್ನು ಮುಂದುವರೆಸುತ್ತಿದ್ದೇವೆ ಹೇಳಿದ್ದಾರೆ. ಮುಂದಿನ ಕಾರ್ಯಾತಂತ್ರ ರೂಪಿಸಲು ನಾವು ಹೋಲ್ಡ್ ಮಾಡಿದ್ದೆವು ಎಂದು ಅವರು ಹೇಳಿದ್ದಾರೆ, ನಕಲಿ ಸುದ್ದಿಗಳಿಗೆ ಗಮನ ಕೊಡಬೇಡಿ. ನಮ್ಮ ಹೋರಾಟ ಮುಂದುವರಿಯುತ್ತದೆ. ತುಂಬಾ ಯೋಚಿಸಿ ಕಾರ್ಯತಂತ್ರ ರೂಪಿಸುತ್ತಿರುವ ಕಾರಣ ಸ್ವಲ್ಪ ನಿಂತು ಮುಂದಕ್ಕೆ ಸಾಗಿದ್ದೇವೆ. ನಡೆಯುತ್ತಿರುವ ಸುಳ್ಳು ಸುದ್ದಿಯಿಂದ ಇಂದು ಇಡೀ ದಿನ ನಾವು ಮಾನಸಿಕವಾಗಿ ತುಂಬಾ ನೊಂದಿದ್ದೇವೆ. ಇಡೀ ದಿನ ಸ್ಪಷ್ಟೀಕರಣ ನೀಡುವಲ್ಲಿ ಕಳೆದು ಹೋಗಿದೆ.

"ನಮಗೆ ನೌಕರಿ ಸರ್ಕಾರ ನೀಡಿದೆ"
ನಮ್ಮ ಹೋರಾಟ ಬ್ರಿಜ್ ಭೂಷಣ್ ವಿರುದ್ಧ ಎಂದು ಸಾಕ್ಷಿ ಮಲಿಕ್ ಪತಿ ಹಾಗೂ ಕುಸ್ತಿಪಟು ಸತ್ಯವ್ರತ್ ಕಡಯನ್ ಹೇಳಿದ್ದಾರೆ. ಕುಸ್ತಿ ಒಕ್ಕೂಟದ ಅಧ್ಯಕ್ಷರ ವಿರುದ್ಧ. ನಮ್ಮ ಕುಸ್ತಿಯನ್ನು ಸ್ವಚ್ಛಗೊಳಿಸಲು ನಾವು ಹೋರಾಟ ನಡೆಸುತ್ತಿದ್ದೇವೆ. ನಮಗೆ ಸರ್ಕಾರ ನೌಕರಿ ನೀಡಿದೆ ಮತ್ತು ನಮ್ಮ ಹೋರಾಟ ಸರ್ಕಾರದ ವಿರುದ್ಧ ಅಲ್ಲ.  ನಮ್ಮಿಂದ ನಾವು ಮಾಡುತ್ತಿರುವ ಸರ್ಕಾರದ ಕೆಲಸ ನಿಲ್ಲಬಾರದು ಅಂದುಕೊಂಡಿದ್ದೇವೆ, ಹೀಗೇಕೆ ನೆಗೆಟಿವ್ ಆಗಿ ಬಿಂಬಿಸಲಾಯಿತು ಎಂಬುದು ಗೊತ್ತಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Wrestlers Protest: ಕುಸ್ತಿಪಟುಗಳ ಪ್ರತಿಭಟನೆ ಹಿಂಪಡೆತದ ಕುರಿತು ಸಾಕ್ಷಿ ಮಲಿಕ್ ಹೇಳಿದ್ದೇನು?

"ಯಾರೂ ಹಿಂದಕ್ಕೆ ಸರಿದಿಲ್ಲ ಮತ್ತು ಸರಿಯುವು ಪ್ರಶ್ನೆಯೂ ಇಲ್ಲ"
ಸೋಮವಾರ ಮುಂಜಾನೆ, ಸುದ್ದಿ ಸಂಸ್ಥೆ ಎಎನ್‌ಐ ಕುಸ್ತಿಪಟು ಸಾಕ್ಷಿ ಮಲಿಕ್ ಬಗ್ಗೆ ಅವರು ಭಾರತೀಯ ರೈಲ್ವೆಯಲ್ಲಿ ಮತ್ತೆ ಕೆಲಸಕ್ಕೆ ಸೇರಿದ್ದಾರೆ ಎಂದು ವರದಿ ಬಿತ್ತರಿಸಿತ್ತು. ಈ ಸುದ್ದಿ ಮುನ್ನೆಲೆಗೆ ಬಂದ ಬಳಿಕ ಸಾಕ್ಷಿ ಮಲಿಕ್ ಮತ್ತು ಕುಸ್ತಿಪಟುಗಳ ಪ್ರತಿಭಟನೆಯಿಂದ ದೂರ ಸರಿದಿದ್ದಾರೆ ಎಂದು ಹೇಳಲಾಯಿತು. ಇದಾದಬಾಲಿಕ ಈ ಸುದ್ದಿ ಸಂಪೂರ್ಣ ತಪ್ಪು ಎಂದು ಸಾಕ್ಷಿ ಟ್ವೀಟ್ ಮಾಡಿದ್ದರು. ನ್ಯಾಯಕ್ಕಾಗಿ ನಡೆದ ಹೋರಾಟದಲ್ಲಿ ನಾವೇನೂ ಹಿಂದೆ ಸರಿದಿಲ್ಲ, ಸರಿಯುವುದು ಇಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ-Test Cricket ಗೆ ವಿದಾಯ ಹೇಳಿದ ಡೇವಿಡ್ ವಾರ್ನರ್! ಇದುವೇ ನನ್ನ ಕೊನೆಯ ಟೆಸ್ಟ್ ಪಂದ್ಯ ಎಂದ ವಾರ್ನರ್

ಸಾಕ್ಷಿ ಜೊತೆಗೆ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಕೂಡ ಪ್ರತಿಭಟನೆಯಿಂದ ಹಿಂದೆ ಸರಿಯುವ ವರದಿಗಳನ್ನು ತಳ್ಳಿಹಾಕಿದ್ದಾರೆ ಮತ್ತು ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ. ಹೋರಾಟ ಹಿಂಪಡೆಯುವ ಸುದ್ದಿ ಕೇವಲ ವದಂತಿಯಾಗಿದೆ. ನಮಗೆ ಹಾನಿ ಮಾಡಲು ಈ ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಅವರು ಹೇಳಿದ್ದರು. ಲೈಂಗಿಕ ಕಿರುಕುಳದ ಆರೋಪದ ಮೇಲೆ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸುವಂತೆ ಕುಸ್ತಿಪಟುಗಳು ಒತ್ತಾಯಿಸುತ್ತಿದ್ದಾರೆ. ಕುಸ್ತಿಪಟುಗಳು ಸೋಮವಾರ ತಮ್ಮ ರೈಲ್ವೆ ಉದ್ಯೋಗಗಳಿಗೆ ಮರಳಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News