ಸಚಿನ್-ವಿರಾಟ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಅಪ್ಘನ್ ಆಟಗಾರ! ಈ ಸಾಧನೆ ಮಾಡಿರುವ ಏಕೈಕ ಕ್ರಿಕೆಟಿಗನೀತ

World Cup 2023, Ibrahim Zadran: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಈ ಶತಕದೊಂದಿಗೆ ಇಬ್ರಾಹಿಂ ಜದ್ರಾನ್ ವಿಶ್ವಕಪ್‌’ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವಕಪ್‌’ನಲ್ಲಿ ಶತಕ ಸಿಡಿಸಿದ ಅಫ್ಘಾನಿಸ್ತಾನದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Written by - Bhavishya Shetty | Last Updated : Nov 7, 2023, 07:53 PM IST
    • ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯ
    • ಅಫ್ಘಾನಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಇಬ್ರಾಹಿಂ ಜದ್ರಾನ್
    • ಈ ಶತಕದೊಂದಿಗೆ ಇಬ್ರಾಹಿಂ ಜದ್ರಾನ್ ವಿಶ್ವಕಪ್‌’ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ
ಸಚಿನ್-ವಿರಾಟ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಅಪ್ಘನ್ ಆಟಗಾರ! ಈ ಸಾಧನೆ ಮಾಡಿರುವ ಏಕೈಕ ಕ್ರಿಕೆಟಿಗನೀತ title=
Afghanistan Batsman Ibrahim Zadran

World Cup 2023, Ibrahim Zadran: ಅಫ್ಘಾನಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಇಬ್ರಾಹಿಂ ಜದ್ರಾನ್ ವಿಶ್ವಕಪ್‌’ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಬಿರುಗಾಳಿ ಆರಂಭಿಕ ಬ್ಯಾಟ್ಸ್‌ಮನ್ ಇಬ್ರಾಹಿಂ ಝದ್ರಾನ್ ಶತಕ ಸಿಡಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ 143 ಎಸೆತಗಳಲ್ಲಿ 129 ರನ್ ಗಳಿಸಿದ ಅವರು, 8 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ವಿಶ್ವಕಪ್‌’ನಲ್ಲಿ ಇತಿಹಾಸ:

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಈ ಶತಕದೊಂದಿಗೆ ಇಬ್ರಾಹಿಂ ಜದ್ರಾನ್ ವಿಶ್ವಕಪ್‌’ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವಕಪ್‌’ನಲ್ಲಿ ಶತಕ ಸಿಡಿಸಿದ ಅಫ್ಘಾನಿಸ್ತಾನದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಫ್ಘಾನಿಸ್ತಾನದ ಇನಿಂಗ್ಸ್‌’ನ 44ನೇ ಓವರ್‌’ನಲ್ಲಿ ಜೋಶ್ ಹೇಜಲ್‌ವುಡ್ ಅವರ ಕೊನೆಯ ಎಸೆತದಲ್ಲಿ 2 ರನ್ ಗಳಿಸುವ ಮೂಲಕ ಜದ್ರಾನ್ ತಮ್ಮ ಐತಿಹಾಸಿಕ ಶತಕವನ್ನು ಪೂರ್ಣಗೊಳಿಸಿದರು.

ವಿಶ್ವಕಪ್‌’ನಲ್ಲಿ ಅಫ್ಘಾನಿಸ್ತಾನ ಪರ ಗರಿಷ್ಠ ವೈಯಕ್ತಿಕ ಸ್ಕೋರ್

  • 129 ರನ್ - ಇಬ್ರಾಹಿಂ ಜದ್ರಾನ್ vs ಆಸ್ಟ್ರೇಲಿಯಾ, ಮುಂಬೈ, 2023
  • 96 ರನ್ - ಸಮೀವುಲ್ಲಾ ಶಿನ್ವಾರಿ vs ಸ್ಕಾಟ್ಲೆಂಡ್, ಡ್ಯುನೆಡಿನ್, 2015
  • 87 ರನ್ - ಇಬ್ರಾಹಿಂ ಜದ್ರಾನ್ vs ಪಾಕಿಸ್ತಾನ, ಚೆನ್ನೈ, 2023
  • 86 ರನ್ - ಇಕ್ರಮ್ ಅಲಿಖಿಲ್ vs ವೆಸ್ಟ್ ಇಂಡೀಸ್, ಲೀಡ್ಸ್, 2019
  • 80 ರನ್ - ಹಶ್ಮತುಲ್ಲಾ ಶಾಹಿದಿ vs ಭಾರತ, ದೆಹಲಿ, 2023
  • 80 ರನ್ - ರಹಮಾನುಲ್ಲಾ ಗುರ್ಬಾಜ್ vs ಇಂಗ್ಲೆಂಡ್, ದೆಹಲಿ, 2023

ಸಚಿನ್ ಮತ್ತು ವಿರಾಟ್ ದಾಖಲೆಗಳು ಬ್ರೇಕ್:

ಆಸ್ಟ್ರೇಲಿಯಾ ವಿರುದ್ಧದ ಇನ್ನಿಂಗ್ಸ್‌’ನಲ್ಲಿ ಶತಕ ಸಿಡಿಸುವ ಮೂಲಕ ಇಬ್ರಾಹಿಂ ಝದ್ರಾನ್ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್‌’ಗಳಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ. ಏಕದಿನ ವಿಶ್ವಕಪ್‌’ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇಬ್ರಾಹಿಂ ಜದ್ರಾನ್ 21 ವರ್ಷ 330 ದಿನಗಳ ವಯಸ್ಸಿನಲ್ಲಿ ಶತಕ ಬಾರಿಸಿದರೆ, ವಿರಾಟ್ ಕೊಹ್ಲಿ 2011ರ ವಿಶ್ವಕಪ್‌’ನಲ್ಲಿ ಬಾಂಗ್ಲಾದೇಶ ವಿರುದ್ಧ 22 ವರ್ಷ ಮತ್ತು 106 ದಿನಗಳಲ್ಲಿ ಶತಕ ಬಾರಿಸಿದ್ದರು. ಇನ್ನು ಸಚಿನ್ ತೆಂಡೂಲ್ಕರ್ ಅವರು 1996 ರ ವಿಶ್ವಕಪ್‌’ನಲ್ಲಿ ಕೀನ್ಯಾ ವಿರುದ್ಧ 22 ವರ್ಷ ಮತ್ತು 300 ದಿನಗಳ ವಯಸ್ಸಿನಲ್ಲಿ ಶತಕ ಬಾರಿಸಿದ್ದರು.

ಏಕದಿನ ವಿಶ್ವಕಪ್‌’ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್:

  • 20 ವರ್ಷ 196 ದಿನಗಳು: ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್) ವಿಶ್ವಕಪ್ 2011
  • 21 ವರ್ಷ 76 ದಿನಗಳು: ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) ವಿಶ್ವಕಪ್ 1996
  • 21 ವರ್ಷ 87 ದಿನಗಳು: ಅವಿಷ್ಕಾ ಫೆರ್ನಾಂಡೊ (ಶ್ರೀಲಂಕಾ) ವಿಶ್ವಕಪ್ 2019
  • 21 ವರ್ಷ 330 ದಿನಗಳು: ಇಬ್ರಾಹಿಂ ಜದ್ರಾನ್ (ಅಫ್ಘಾನಿಸ್ತಾನ) ವಿಶ್ವಕಪ್ 2023
  • 22 ವರ್ಷ 106 ದಿನಗಳು: ವಿರಾಟ್ ಕೊಹ್ಲಿ (ಭಾರತ) ವಿಶ್ವಕಪ್ 2011
  • 22 ವರ್ಷ 300 ದಿನಗಳು: ಸಚಿನ್ ತೆಂಡೂಲ್ಕರ್ (ಭಾರತ) ವಿಶ್ವಕಪ್ 1996

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News