ನವದೆಹಲಿ: ಈಗ ಕ್ರಿಕೆಟ್ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಸ್ಫೂರ್ತಿಯ ಕ್ಷಣಗಳು ಅದ್ಬುತ ಎಂದು ಹೇಳಬಹುದು. ಅದರಲ್ಲೂ ಕ್ಷೇತ್ರ ರಕ್ಷಣೆಯಲ್ಲಿ ಇದು ಇನ್ನು ವಿಭಿನ್ನ ಎಂದು ಹೇಳಬಹುದು. ಇತ್ತೀಚಿಗೆ ಇಂತಹ ಪ್ರಯೋಗಗಳು ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಜನಪ್ರಿಯವಾಗಿವೆ.
ಬಿಗ್ ಬ್ಯಾಷ್ ಲೀಗ್‌ನಲ್ಲಿ ಭಾನುವಾರ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ನಡುವಿನ ಪಂದ್ಯದಲ್ಲಿ ಟಾಮ್ ಕೂಪರ್ ಅವರ ಅದ್ಭುತ ಕ್ಯಾಚ್ ಮಾತ್ರ ಇದಕ್ಕೆ ನಿದರ್ಶನವಾಗಿದೆ. ಮಿಡ್ ವಿಕೆಟ್ ಬೌಂಡರಿಯಲ್ಲಿದ್ದ ಟಾಮ್ ಕೂಪರ್ ಕ್ಯಾಚ್ ಅನ್ನು ಗಡಿರೇಖೆಯನ್ನು ಬೌಂಡರಿ ರೇಖೆಯ ಮೇಲೆ ತೆಗೆದುಕೊಂಡು, ನಂತರ ಚೆಂಡನ್ನು ಗಾಳಿಯಲ್ಲಿ ಎಸೆದು ಹಿಡಿಯುವ ಮೂಲಕ ಒಂದು ಕ್ಷಣ ಎಲ್ಲರನ್ನು ನಿಬ್ಬೆರುಗುಗೊಳಿಸಿದರು.
Remember the time when we thought these catches were the most incredible things ever?
Those were the days #BBL09 pic.twitter.com/UYtNn2PI84
— KFC Big Bash League (@BBL) January 12, 2020
ಬಿಬಿಎಲ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಸಹ ವೀಡಿಯೊವನ್ನು ಪೋಸ್ಟ್ ಮಾಡಿ "ಈ ಕ್ಯಾಚ್‌ಗಳು ಅತ್ಯಂತ ನಂಬಲಾಗದ ಸಂಗತಿಗಳು ಎಂದು ನಾವು ಭಾವಿಸಿದ ಸಮಯವನ್ನು ನೆನಪಿಸಿಕೊಳ್ಳಿ?" ಎಂದು ಹೇಳಿದೆ.ಕೂಪರ್ ಅವರ ಅದ್ಭುತ ಫೀಲ್ಡಿಂಗ್ ಪ್ರಯತ್ನವು ಮೆಲ್ಬೋರ್ನ್ ಕಾರಣಕ್ಕೆ ನಿರ್ಣಾಯಕವಾಗಿತ್ತು, ಏಕೆಂದರೆ ಇದು ಜೇಕ್ ವೀಥರಾಲ್ಡ್ ಮತ್ತು ಫಿಲಿಪ್ ಸಾಲ್ಟ್ ನಡುವಿನ ಮೊದಲ ವಿಕೆಟ್ ಪಾಲುದಾರಿಕೆಯನ್ನು ಮುರಿಯಿತು.