Surya-Shukra Yuti 2022: 9 ದಿನಗಳ ನಂತರ ಈ ರಾಶಿಯವರ ಜೀವನದಲ್ಲಿ ಸಂತೋಷ-ಲಾಭ ಸಿಗಲಿದೆ

ಜ್ಯೋತಿಷ್ಯದ ಪ್ರಕಾರ ಗ್ರಹದ ಸಂಚಾರವು ಎಲ್ಲಾ ರಾಶಿಯ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸೂರ್ಯ ಮತ್ತು ಶುಕ್ರನ ಸಂಯೋಜನೆಯಿಂದ ಈ ರಾಶಿಯವರು ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ.

Written by - Puttaraj K Alur | Last Updated : Jul 28, 2022, 04:54 PM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರ ವೈವಾಹಿಕ ಜೀವನ ಸುಖಮಯವಾಗಿರುತ್ತದೆ
  • ಶುಕ್ರ ಮತ್ತು ಸೂರ್ಯನ ಸಂಯೋಜನೆಯಿಂದ ಮಿಥುನ ರಾಶಿಯವರ ಇಷ್ಟಾರ್ಥಗಳು ನೆರವೇರುತ್ತವೆ
  • ತುಲಾ, ಧನು ಮತ್ತು ಕುಂಭ ರಾಶಿಯವರಿಗೆ ಈ ಸಮಯವು ಸ್ವಲ್ಪ ಸಮಸ್ಯೆಯಿಂದ ಕೂಡಿರುತ್ತದೆ
Surya-Shukra Yuti 2022: 9 ದಿನಗಳ ನಂತರ ಈ ರಾಶಿಯವರ ಜೀವನದಲ್ಲಿ ಸಂತೋಷ-ಲಾಭ ಸಿಗಲಿದೆ   title=
Surya-Shukra Yuti 2022

ನವದೆಹಲಿ: ವೈದಿಕ ಜ್ಯೋತಿಷ್ಯದ ಪ್ರಕಾರ ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರನ ಶುಭ ಸ್ಥಾನದಿಂದಾಗಿ ವ್ಯಕ್ತಿಯು ಭೌತಿಕ ಸಂತೋಷ, ವೈವಾಹಿಕ ಸಂತೋಷ ಮತ್ತು ಮಕ್ಕಳ ಸಂತೋಷ ಪಡೆಯುತ್ತಾನೆ. ಆದ್ದರಿಂದ ವ್ಯಕ್ತಿಯ ಮದುವೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಮಾಹಿತಿಗಾಗಿ ಜಾತಕದಲ್ಲಿ ಶುಕ್ರ ಗ್ರಹದ ಸ್ಥಾನವನ್ನು ಮಾತ್ರ ನೋಡಲಾಗುತ್ತದೆ. ಯಾವುದೇ ಗ್ರಹವು ರಾಶಿಚಕ್ರವನ್ನು ಬದಲಾಯಿಸಿದಾಗ ಅದು ಎಲ್ಲಾ ರಾಶಿಯವರ ಆರ್ಥಿಕ ಸ್ಥಿತಿ, ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ 7ರಂದು ಶುಕ್ರ ಗ್ರಹವು ಕರ್ಕ ರಾಶಿಯನ್ನು ಪ್ರವೇಶಿಸಲಿದೆ. ಸೂರ್ಯ ಈಗಾಗಲೇ ಇಲ್ಲಿ ಕುಳಿತಿದ್ದಾನೆ. ಶುಕ್ರನು ಕರ್ಕಾಟಕಕ್ಕೆ ಪ್ರವೇಶಿಸಿದ ಕೂಡಲೇ ಸೂರ್ಯನೊಂದಿಗೆ ಅಂದರೆ ಸೂರ್ಯ ಮತ್ತು ಶುಕ್ರನ ಸಂಯೋಗವಾಗುತ್ತದೆ. ಈ ಸಂಯೋಗದ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಕೆಲವು ರಾಶಿಯವರ ಜೀವನದಲ್ಲಿ ಶುಭ ಪರಿಣಾಮವನ್ನು ಬೀರಲಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Feng Shui Shastra: ವ್ಯಾಪಾರ ವೃದ್ಧಿಗಾಗಿ ಮನೆಗೆ ಈ ಮೀನಿನ ವಿಗ್ರಹ ತನ್ನಿ

ಕನ್ಯಾ ರಾಶಿ: ಶುಕ್ರ ಮತ್ತು ಸೂರ್ಯನ ಸಂಯೋಜನೆಯೊಂದಿಗೆ ಕನ್ಯಾ ರಾಶಿಯ ಜನರ ವೈವಾಹಿಕ ಜೀವನದ ಮೇಲೆ ಪರಿಣಾಮವನ್ನು ಸ್ಪಷ್ಟವಾಗಿ ಕಾಣಬಹುದು. ಈ ಸಮಯದಲ್ಲಿ ಅವರ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ಪ್ರೀತಿ ಮತ್ತು ಪರಸ್ಪರ ತಿಳುವಳಿಕೆ ಹೆಚ್ಚಾಗುತ್ತದೆ. ಈ ವೇಳೆ ನಿಮ್ಮ ದೀರ್ಘಕಾಲದ ಕಾಯಿಲೆಗಳು ನಿವಾರಣೆಯಾಗುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಅವಧಿಯಲ್ಲಿ ಜೀವನ ಸಂಗಾತಿಯು ಉದ್ಯೋಗದಲ್ಲಿ ಲಾಭ ಪಡೆಯಬಹುದು. ಅದೇ ರೀತಿ ಮಕ್ಕಳಿಗೆ ಸಂಬಂಧಿಸಿದ ಸಿಹಿ ಸುದ್ದಿಗಳು ಬರಬಹುದು.

ಮೇಷ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರಿಗೆ ಗೌರವ ಹೆಚ್ಚಾಗಲಿದೆ. ಈ ಜನರ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲು ಸಾಧ್ಯವಾಗುತ್ತದೆ. ಪರಸ್ಪರ ವಿವಾದಗಳಿಂದ ಮುಕ್ತಿ ಸಿಗುತ್ತದೆ. ಅಲ್ಲದೆ ಕೆಲವು ಆಹ್ಲಾದಕರ ಸುದ್ದಿಗಳು ಜೀವನದಲ್ಲಿ ಬದಲಾವಣೆಯನ್ನು ತರುತ್ತವೆ.

ಇದನ್ನೂ ಓದಿ: Raksha Bandhan: ಪ್ರೀತಿಯ ಅಣ್ಣನಿಗೆ ರಾಖಿ ಕೊಳ್ಳುವಾಗ ಈ ವಿಷಯ ಗಮನದಲ್ಲಿರಲಿ..!

ಮಿಥುನ ರಾಶಿ: ಶುಕ್ರ ಮತ್ತು ಸೂರ್ಯನ ಸಂಯೋಜನೆಯಿಂದ ಈ ರಾಶಿಯ ಜನರ ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ. ಸಂತಾನ ಬಯಸುವ ಜನರ ಇಷ್ಟಾರ್ಥಗಳು ನೆರವೇರುತ್ತವೆ. ಜೀವನ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗುತ್ತದೆ ಮತ್ತು ಆರೋಗ್ಯವು ಉತ್ತಮವಾಗಿರುತ್ತದೆ.

ಈ ರಾಶಿಯವರಿಗೆ ತೊಂದರೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವುದೇ ಗ್ರಹದ ಚಲನೆಯು ಎಲ್ಲಾ ರಾಶಿಯವರ ಜೀವನದ ಮೇಲೆ ಶುಭ ಮತ್ತು ಅಶುಭ ಪರಿಣಾಮ ಬೀರುತ್ತದೆ. ಮೇಲೆ ತಿಳಿಸಿದ ರಾಶಿಯವರಿಗೆ ಮಂಗಳಕರ ಲಾಭವಿದ್ದರೆ, ತುಲಾ, ಧನು ರಾಶಿ ಮತ್ತು ಕುಂಭ ರಾಶಿಯವರಿಗೆ ಈ ಸಮಯವು ಸ್ವಲ್ಪ ಸಮಸ್ಯೆಯಿಂದ ಕೂಡಿರುತ್ತದೆ. ಈ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಮನಸ್ತಾಪ ಹೊಂದಿರುತ್ತಾರೆ. ಸಂಬಂಧದಲ್ಲಿ ಹುಳುಕು ಬರುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ನಡೆಯುವುದು ಉತ್ತಮ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News