Guru Vakri: ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರುವಿನ ಸ್ಥಾನ ಪಡೆದಿರುವ ಬೃಹಸ್ಪತಿಯನ್ನು ಅತ್ಯಂತ ಮಂಗಳಕರ ಗ್ರಹ ಎಂದು ಕರೆಯಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಬಲಶಾಲಿಯಾಗಿದ್ದರೆ ಅಂತಹ ವ್ಯಕ್ತಿಯು ಜೀವನದಲ್ಲಿ ಅದೃಷ್ಟವಂತ ಎಂದು ಹೇಳಲಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿ ಶುಭ ಕಾರ್ಯಗಳನ್ನು ಆರಂಭಿಸಲು, ವೈವಾಹಿಕ ಜೀವನದ ಸಂತೋಷವನ್ನು ಪಡೆಯಲು ಜಾತಕದಲ್ಲಿ ಗುರು ಶುಭ ಸ್ಥಾನದಲ್ಲಿ ಇರಬೇಕು ಎಂದು ಹೇಳಲಾಗುತ್ತದೆ.
ಈ ವರ್ಷ ಆರಂಭದಲ್ಲಿ ಮೇಷ ರಾಶಿಯನ್ನು ಪ್ರವೇಶಿಸಿರುವ ಗುರು ಮೇ 1, 2024 ರವರೆಗೆ ಇದೆ ರಾಶಿಯಲ್ಲಿ ಸಂಚರಿಸಲಿದ್ದಾನೆ. ಆದಾಗ್ಯೂ, ಈ ಮಧ್ಯೆ ಮೇಷ ರಾಶಿಯಲ್ಲಿಯೇ ಗುರು ಸಂಚಾರದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಕಾಣಬಹುದು. ಗಮನಾರ್ಹವಾಗಿ, ಸೆಪ್ಟೆಂಬರ್ 4, 2023ರಂದು ಬೃಹಸ್ಪತಿ ಮೇಷ ರಾಶಿಯಲ್ಲಿ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಮೂರು ರಾಶಿಯವರಿಗೆ ಬಂಗಾರದ ಸಮಯ ಅವರು ಕೈತುಂಬಾ ಹಣ ಸಂಪಾದಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಇದನ್ನೂ ಓದಿ- ಆಗಸ್ಟ್ 7 ರಂದು ನಿರ್ಮಾಣಗೊಳ್ಳಲಿದೆ ಗಜಕೇಸರಿ ರಾಜಯೋಗ, ಈ ಜನರಿಗೆ ಅಪಾರ ಧನ ವೃದ್ಧಿಯೋಗ!
ಸೆಪ್ಟೆಂಬರ್ ತಿಂಗಳಿನಿಂದ ಮೂರು ರಾಶಿಯವರಿಗೆ ಧನಯೋಗ ಕರುಣಿಸಲಿದ್ದಾನೆ ಬೃಹಸ್ಪತಿ:
ಮೇಷ ರಾಶಿ:
ಮೇಷ ರಾಶಿಯಲ್ಲಿಯೇ ಬೃಹಸ್ಪತಿ ಹಿಮ್ಮುಖ ಚಲನೆ ಆರಂಭವಾಗಲಿದ್ದು ಈ ರಾಶಿಯವರ ಮೇಲೆ ಇದರ ಮಂಗಳಕರ ಪರಿಣಾಮಗಳು ಕಂಡು ಬರುತ್ತದೆ. ವಕ್ರೀ ಗುರುವು ಮೇಷ ರಾಶಿಯವರ ವ್ಯಕ್ತಿತ್ವವನ್ನು ಹೆಚ್ಚು ಆಕರ್ಷಕವಾಗಿಸಲಿದ್ದಾನೆ. ಇದರೊಂದಿಗೆ ಈ ರಾಶಿಯವರು ತಾವು ಮಾಡುವ ಪ್ರತಿ ಕೆಲಸದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದಾರೆ. ಆರ್ಥಿಕ ಲಾಭ ಹೆಚ್ಚಾಗಲಿದೆ. ಅದರಲ್ಲೂ ಹೂಡಿಕೆಯಿನ ಹೆಚ್ಚಿನ ಪ್ರಯೋಜನವಾಗಲಿದೆ.
ಕರ್ಕಾಟಕ ರಾಶಿ:
ಗುರು ಹಿಮ್ಮುಖ ಚಲನೆಯು ಕರ್ಕಾಟಕ ರಾಶಿಯವರಿಗೂ ಕೂಡ ಬಹಳ ಪ್ರಯೋಜನಕಾರಿ ಆಗಿರಲಿದೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನಿಮ್ಮ ನೆಚ್ಚಿನ ಉದ್ಯೋಗ ಪ್ರಾಪ್ತಿಯಾಗಲಿದೆ. ನಿರುದ್ಯೋಗಿಗಳಿಗೂ ಉತ್ತಮ ಸಮಯ ಇದಾಗಿದೆ. ಇದಲ್ಲದೆ, ಹೊಸ ಆರ್ಥಿಕ ಮೂಲಗಳು ಸೃಷ್ಟಿಯಾಗಲಿದ್ದು ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ದೀರ್ಘ ಕಾಲದ ಸಾಲದಿಂದಲೂ ಪರಿಹಾರ ದೊರೆಯುವ ಸಮಯ ಇದಾಗಿದೆ.
ಇದನ್ನೂ ಓದಿ- Surya Grahan: ಸೂರ್ಯ ಗ್ರಹಣದಲ್ಲಿ ಈ ಕೆಲಸಗಳನ್ನು ಮಾಡಿದ್ರೆ ಹೊಳೆಯುತ್ತೇ ಅದೃಷ್ಟ
ಧನು ರಾಶಿ:
ಗುರುವಿನ ವಕ್ರ ನಡೆಯು ಧನು ರಾಶಿಯವರ ಜೀವನದಲ್ಲಿಯೂ ಧನಾತ್ಮಕ ಫಲಗಳನ್ನು ತರಲಿದೆ. ಈ ಸಮಯದಲ್ಲಿ ಶುಭ ಸುದ್ದಿಗಳು ಕೇಳಿಬರುತ್ತವೆ. ಅದರಲ್ಲೂ, ವಿವಾಹಿತರಿಗೆ ಮಕ್ಕಳಿಗೆ ಸಂಬಂಧಿತ ಶುಭ ಸುದ್ದಿ ಬರಬಹುದು. ಇದಲ್ಲದೆ, ನಿಮ್ಮ ಹಿರಿಯರ ಆಸ್ತಿಯಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಲಿದ್ದೀರಿ. ಕೋರ್ಟು-ಕಚೇರಿಗೆ ಸಂಬಂಧಿಸಿದ ವ್ಯವಹಾರಗಳು ನಿಮ್ಮ ಪರವಾಗಿ ಆಗಳಿವೆ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿದ್ದು ಭೂಮಿ, ಕಟ್ಟಡ, ವಾಹನ ಖರೀದಿಸಲು ಬಯಸುತ್ತಿರುವವರಿಗೆ ಇದನ್ನು ಅತ್ಯುತ್ತಮ ಸಮಯ ಎಂದು ಹೇಳಲಾಗುತ್ತಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ