ದಿನಭವಿಷ್ಯ 18-07-2024: ಇಂದು ಜ್ಯೇಷ್ಠಾ ನಕ್ಷತ್ರ, ಶುಕ್ಲ ಯೋಗ ಈ 4 ರಾಶಿಯವರಿಗೆ ಬಂಪರ್

Today Horoscope 18th July 2024: ಈ ದಿನ ಗುರುವಾರ ಜ್ಯೇಷ್ಠಾ ನಕ್ಷತ್ರ, ಶುಕ್ಲ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jul 18, 2024, 08:07 AM IST
  • ವೃಷಭ ರಾಶಿಯವರ ಮನೆಗೆ ಇಂದು ಅನಿರೀಕ್ಷಿತ ಅತಿಥಿಗಳು ಆಗಮಿಸುವ ಸಾಧ್ಯತೆಯಿದೆ
  • ಸಿಂಹ ರಾಶಿಯವರಿಗೆ ತಾಯಿಯೊಂದಿಗೆ ಭಿನ್ನಾಭಿಪ್ರಾಯಗಳು ಮನಸ್ಸಿನ ನೆಮ್ಮದಿ ಕೆಡಿಸಬಹುದು.
  • ವೃಶ್ಚಿಕ ರಾಶಿಯವರಿಗೆ ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ.
ದಿನಭವಿಷ್ಯ 18-07-2024:  ಇಂದು ಜ್ಯೇಷ್ಠಾ ನಕ್ಷತ್ರ, ಶುಕ್ಲ ಯೋಗ ಈ 4 ರಾಶಿಯವರಿಗೆ ಬಂಪರ್  title=

Guruvara Dina Bhavishya In Kannada: ಶ್ರೀ ಶಾಲಿವಾಣ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿಯ ಈ ದಿನ ಗುರುವಾರ ಜ್ಯೇಷ್ಠಾ ನಕ್ಷತ್ರ, ಶುಕ್ಲ ಯೋಗ ಇರಲಿದೆ. ಇಂದು ಯಾವ ರಾಶಿಯವರಿಗೆ ಏನು ಫಲ ತಿಳಿಯಿರಿ 

ಮೇಷ ರಾಶಿಯವರ ಭವಿಷ್ಯ (Aries Horoscope):  
ಪ್ರಯಾಣದ ವೇಳೆ ಸಹ ಪ್ರಯಾಣಿಕರೊಂದಿಗೆ ಜಗಳವಾಗುವ ಸಾಧ್ಯತೆ. ವ್ಯಾಪಾರ-ವ್ಯವಹಾರದಲ್ಲಿ ನಷ್ಟ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ದುಷ್ಟ ಉದ್ದೇಶಗಳಿಗೆ ಬಲಿಯಾಗಬಹುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು.

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಹೊಸ ಆಲೋಚನೆಗಳಿಂದ ವ್ಯವಹಾರದಲ್ಲಿ ಯಶಸ್ಸನ್ನು ಕಾಣುವಿರಿ. ನಿಮ್ಮ ಸಂವಹನ ಕೌಶಲ್ಯವು ಕೆಲಸದ ಸ್ಥಳದಲ್ಲಿ ಭಾರೀ ಪ್ರಯೋಜನವನ್ನು ತಂದುಕೊಡಲಿದೆ. ಕುಟುಂಬದವರೊಂದಿಗೆ ಕೆಲವು ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಅನಿರೀಕ್ಷಿತ ಅತಿಥಿಗಳು ಆಗಮಿಸುವ ಸಾಧ್ಯತೆಯಿದೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ಶುಕ್ಲ ಯೋಗವು ಇಂದು ನಿಮಗೆ ಉದ್ಯೋಗ ಸ್ಥಳದಲ್ಲಿ ವಿಶೇಷವಾಗಿ ಫಲಪ್ರದ ದಿನ ಎಂದು ಸಾಬೀತುಪಡಿಸಲಿದೆ.  ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿವೆ. ನಿಮ್ಮ ಪ್ರತಿ ಕೆಲಸದಲ್ಲೂ ಕುಟುಂಬದವರ ಬೆಂಬಲ ಸಹಕಾರ ಸಿಗಲಿದೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಶುಕ್ಲ ಯೋಗದ ಪರಿಣಾಮವಾಗಿ ಇಂದು ಯಾವುದೇ ರೀತಿಯ ಕಾನೂನಾತ್ಮಕ ವಿಷಯಗಳಲ್ಲಿ ಪರಿಹಾರವನ್ನು ಕಾಣಬಹುದು. ರಾಜಕಾರಣಿಗಳು ಕೆಲಸದಲ್ಲಿ ಅಡೆತಡೆಗಳನ್ನು ಅನುಭವಿಸಬಹುದು. ಕಠಿಣ ಪ್ರಯತ್ನದಿಂದ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. 

ಇದನ್ನೂ ಓದಿ- ಶೀಘ್ರದಲ್ಲೇ ಮುಖಾಮುಖಿಯಾಗಲಿದ್ದಾರೆ ಶನಿ-ಬುಧ: ವೃತ್ತಿ ಬದುಕಿನಲ್ಲಿ ಭಾರೀ ಜಯ ಸಾಧಿಸಲಿದ್ದಾರೆ ಈ ರಾಶಿಯ ಜನ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ತಾಯಿಯೊಂದಿಗೆ ಭಿನ್ನಾಭಿಪ್ರಾಯಗಳು ಮನಸ್ಸಿನ ನೆಮ್ಮದಿ ಕೆಡಿಸಬಹುದು. ಆಲಸ್ಯ ಮತ್ತು ಆಲೋಚನೆಯಿಲ್ಲದೆ ಮಾಡಿದ ಕೆಲಸದಿಂದಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. ಹಣಕಾಸಿನ್ ವ್ಯವಹಾರದಲ್ಲಿ ದಾಖಲೆಗಳ ಪರಿಶೀಲನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಬೇರೆಡೆ ಸಿಲುಕಿರುವ ಹಣ ಇಂದು ನಿಮ್ಮ ಕೈ ಸೇರಬಹುದು. ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಕುಟುಂಬಸ್ಥರೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬಹುದು. 

ತುಲಾ ರಾಶಿಯವರ ಭವಿಷ್ಯ (Libra Horoscope): 
ವ್ಯವಹಾರದಲ್ಲಿ ತೊಂದರೆಗಳ ಹೊರತಾಗಿಯೂ ಯಶಸ್ಸು ಕಾಣುವಿರಿ. ಉದ್ಯಮಿಗಳು ತಾಳ್ಮೆಯಿಂದ ವರ್ತಿಸದಿದ್ದರೆ ವಿವಾದದಲ್ಲಿ ಸಿಲುಕಬಹುದು. ಕೆಲಸದ ಸ್ಥಳದಲ್ಲಿ ಒತ್ತಡದ ಸಂದರ್ಭಗಳು ಉಂಟಾಗಬಹುದು. ಆದಾಗ್ಯೂ, ಇಂದು ಕುಟುಂಬದಲ್ಲಿ ಆಹ್ಲಾದಕರ ವಾತಾವರಣವನ್ನು ಆನಂದಿಸುವಿರಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಶುಕ್ಲ ಯೋಗದ ಶುಭ ಫಲದಿಂದಾಗಿ ಕೆಲಸದ ಸ್ಥಳದಲ್ಲಿ ದಿನವು ನಿಮಗೆ ಅನುಕೂಲಕರವಾಗಿರುತ್ತದೆ. ಕೆಲಸ ಮಾಡುವ ಜನರು ಧನಾತ್ಮಕ ಶಕ್ತಿಯನ್ನು ಪಡೆಯುತ್ತಾರೆ. ದೀರ್ಘ ಸಮಯದಿಂದ ಬೇರೆಡೆ ಸಿಲುಕಿರುವ ಹಣ ಇಂದು ಕೈ ಸೇರಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ.

ಇದನ್ನೂ ಓದಿ- Budhaditya Rajyoga 2024: ಬುಧಾದಿತ್ಯ ರಾಜಯೋಗದಿಂದ ಈ ಮೂರು ರಾಶಿಗೆ ಬಂಪರ್‌ ಲಾಭ!

ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ವಿದೇಶ ವ್ಯವಹಾರದಲ್ಲಿ ನಷ್ಟ ಸಾಧ್ಯತೆ. ಉದ್ಯಮಿಗಳು ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳುವ ಮೊದಲು ಸರಿಯಾಗಿ ಯೋಚಿಸಿ ನಿರ್ಧರಿಸಿ. ಕೆಲಸದ ಸ್ಥಳದಲ್ಲಿ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ತಪ್ಪು ತಿಳುವಳಿಕೆ ಉಂಟಾಗಬಹುದು. ಇದರಿಂದಾಗಿ ಬಾಸ್‌ನ ಕೋಪಕ್ಕೆ ತುತ್ತಾಗಬಹುದು. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವ ಬಿಸಿನೆಸ್ ಸಂಬಂಧಿತ ವ್ಯಕ್ತಿಗಳಿಗೆ ಉತ್ತಮ ದಿನ. ಉದ್ಯೋಗಸ್ಥರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಮನೆಗೆ ಸಂಬಂಧಿಸಿದ ಪ್ರಮುಖ ಕಾರ್ಯಗಳ ಬಗ್ಗೆ ಅಸಹನೆ ಬೇಡ. ಕುಟುಂಬದೊಂದಿಗೆ ರುಚಿಕರವಾದ ಆಹಾರವನ್ನು ಆನಂದಿಸುವಿರಿ.

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕೆಲಸದ ಸ್ಥಳದಲ್ಲಿ ಬಡ್ತಿಗೆ ಅವಕಾಶವಿರಬಹುದು. ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಬಗ್ಗೆ ಕಾಳಜಿವಹಿಸಿ. ಕುಟುಂಬದಲ್ಲಿ ಹೊಸ ಸದಸ್ಯರ ಆಗಮನದಿಂದ ಸಂತೋಷದ ವಾತಾವರಣ ಇರುತ್ತದೆ. ಸಾಮಾಜಿಕ ಮಟ್ಟದಲ್ಲಿ, ನೀವು ಯಾವುದೇ ಕೆಲಸದಲ್ಲಿ ಕಾನೂನು ಬೆಂಬಲವನ್ನು ಪಡೆಯಬಹುದು.

ಮೀನ ರಾಶಿಯವರ ಭವಿಷ್ಯ (Pisces Horoscope): 
ಆಮದು-ರಫ್ತು ವ್ಯವಹಾರದಲ್ಲಿರುವವರು ವಿದೇಶಗಳಿಂದ ಹೊಸ ಒಪ್ಪಂದಗಳನ್ನು ಪಡೆಯುತ್ತೀರಿ. ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಾರ ಮಾಡುವ ಉದ್ಯಮಿಗಳು ಖ್ಯಾತಿಯನ್ನು ಪಡೆಯಬಹುದು. ಜೀವನ ಸಂಗಾತಿಯೊಂದಿಗೆ ಇಡೀ ದಿನವನ್ನು ಆನಂದಿಸುವಿರಿ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News