ಐದು ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್-5 ಸ್ಮಾರ್ಟ್ ವಾಚ್‌ಗಳಿವು

ಕಡಿಮೆ ಬಜೆಟ್ನಲ್ಲಿ ಸ್ಮಾರ್ಟ್ ವಾಚ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲಿವೆ 5 ಸಾವಿರ ರೂಪಾಯಿ ಮೌಲ್ಯದ ಟಾಪ್-5 ಸ್ಮಾರ್ಟ್ ವಾಚ್‌ಗಳು.

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸ್ಮಾರ್ಟ್‌ಫೋನ್‌ಗಳಂತೆ ಸ್ಮಾರ್ಟ್ ವಾಚ್‌ಗಳ ಆಕರ್ಷಣೆ ಕೂಡ ಹೆಚ್ಚಾಗಿದೆ. ಭಾರತದಲ್ಲಿ ಸುಮಾರು 1000ರೂಪಾಯಿಗಳಿಂದ ಹಿಡಿದು  1 ಲಕ್ಷ ರೂಪಾಯಿವರೆಗಿನ ಸ್ಮಾರ್ಟ್ ವಾಚ್‌ಗಳು ಲಭ್ಯವಿವೆ. ಆದರೂ ನೀವು ಕಡಿಮೆ ಬಜೆಟ್ನಲ್ಲಿ ಸ್ಮಾರ್ಟ್ ವಾಚ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಫೋಟೋ ಗ್ಯಾಲರಿಯಲ್ಲಿ ಐದು ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್-5 ಸ್ಮಾರ್ಟ್ ವಾಚ್‌ಗಳ ಬಗ್ಗೆ  ಮಾಹಿತಿ ನೀಡಲಿದ್ದೇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Noise Colorfit Pro 4 ಸ್ಮಾರ್ಟ್ ವಾಚ್ ಎಂಟು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ ವಾಚ್ ಸ್ಪೀಕರ್ ಮತ್ತು ಮೈಕ್ರೊಫೋನ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಲಭ್ಯವಾಗಲಿದೆ. ಇದರ ಬೆಲೆ 2,999 ರೂ. ಆಗಿದೆ.

2 /5

HD ಡಿಸ್ಪ್ಲೇಯೊಂದಿಗೆ ಬರುವ ಫೈರ್‌ಬೋಲ್ಟ್ ರಾಕೆಟ್ ಸ್ಮಾರ್ಟ್‌ವಾಚ್ ನಲ್ಲಿ 100 ಕ್ರೀಡಾ ವಿಧಾನಗಳು ಲಭ್ಯವಿದೆ. ಇದರ ಬೆಲೆ 2,499 ರೂ.ಗಳು.

3 /5

ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಸೆನ್ಸ್ ಎಡಿಸನ್ 1 ಸ್ಮಾರ್ಟ್ ವಾಚ್ ಕೇವಲ 1,699 ರೂ. ಗಳಿಗೆ ಲಭ್ಯವಾಗಲಿದೆ.

4 /5

ಅತ್ಯುತ್ತಮವಾದ ನಿರ್ಮಾಣ ಗುಣಮಟ್ಟ ಮತ್ತು ನಯವಾದ ಟಚ್ ಸ್ಕ್ರೀನ್‌ನೊಂದಿಗೆ ಬರುವ  Realme Techlife ವಾಚ್ R100 ಹಲವು ಸ್ಫೋಟಕ ವೈಶಿಷ್ಟ್ಯಗಳೊಂದಿಗೆ ಲಭ್ಯವಾಗಲಿದೆ. ಇದರ ಬೆಲೆ 3,999 ರೂ. ಆಗಿದೆ.

5 /5

ಐಶಾರಾಮಿ ವಿನ್ಯಾಸದೊಂದಿಗೆ ಬರಲಿರುವ OnePlus ನಾರ್ಡ್ ವಾಚ್  AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ.  ಸಿಂಗಲ್ ಚಾರ್ಜ್‌ನಲ್ಲಿ ಬಹುದಿನಗಳವರೆಗೆ ಕಾರ್ಯನಿರ್ವಹಿಸಬಲ್ಲ ಈ ಸ್ಮಾರ್ಟ್ ವಾಚ್ ಬೆಲೆ 4,999 ರೂ. ಆಗಿದೆ.