ಆಪಲ್ ಉದ್ಯೋಗಿಗೆ ಗುಂಡು ಹಾರಿಸಿದ ಪೊಲೀಸ್ ಪೇದೆ; ಸಿಬಿಐ ತನಿಖೆ ಪತ್ನಿ ಆಗ್ರಹ

ಆಪಲ್ ಸ್ಟೋರ್ ಉದ್ಯೋಗಿಗೆ ಉತ್ತರ ಪ್ರದೇಶ ಪೋಲಿಸ್ ಪೇದೆ ಗುಂಡು ಹಾರಿಸಿದ ಘಟನೆ ಗೋಮತಿ ನಗರ ಪ್ರದೇಶದಲ್ಲಿ ನಡೆದಿದೆ.

Last Updated : Sep 29, 2018, 07:10 PM IST
ಆಪಲ್ ಉದ್ಯೋಗಿಗೆ ಗುಂಡು ಹಾರಿಸಿದ ಪೊಲೀಸ್ ಪೇದೆ; ಸಿಬಿಐ ತನಿಖೆ ಪತ್ನಿ ಆಗ್ರಹ title=

ಲಕ್ನೋ: ಕಾರು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಆಪಲ್ ಸ್ಟೋರ್ ಉದ್ಯೋಗಿಗೆ ಉತ್ತರ ಪ್ರದೇಶ ಪೋಲಿಸ್ ಪೇದೆ ಗುಂಡು ಹಾರಿಸಿದ ಘಟನೆ ಗೋಮತಿ ನಗರ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಶುಕ್ರವಾರ ತಡರಾತ್ರಿ ಮಹಿಳಾ ಸಹೋದ್ಯೋಗಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಆಪಲ್ ಸ್ಟೋರ್ ಉದ್ಯೋಗಿ ವಿವೇಕ್ ತಿವಾರಿ, ಮಾರ್ಗ ಮಧ್ಯದಲ್ಲಿ ಕಾರು ನಿಲ್ಲಿಸುವಂತೆ ಸೂಚನೆ ನೀಡಿದರೂ, ನಿಲ್ಲಿಸದೆ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವರ್ತನೆಯಿಂದ ಅನುಮಾನಗೊಂಡ ಪೇದೆ ವಿವೇಕ್ ತಿವಾರಿ ಮೇಲೆ ಗುಂಡು ಹಾರಿಸಿದ್ದಾರೆ. ಕೂಡಲೇ ಕಾರು ಅಂಡರ್ ಪಾಸ್ ಪಿಲ್ಲರ್'ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯವಾಗಿದ್ದ ಉದ್ಯೋಗಿ ತಿವಾರಿಗೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಮೃತ ವಿವೇಕ್ ತಿವಾರಿ ಪತ್ನಿ ಕಲ್ಪನಾ ತಿವಾರಿ, "ಪೊಲೀಸರಿಗೆ ನನ್ನ ಪತಿಯನ್ನು ಕೊಲ್ಲುವ ಯಾವುದೇ ಅಧಿಕಾರ ಇಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕು" ಎಂದು ಒತ್ತಾಯಿಸಿದ್ದಾರೆ. 

Trending News