32 ವರ್ಷಗಳ ನಂತರ ಕಾಶ್ಮೀರದಲ್ಲಿ ಚಿತ್ರಮಂದಿರ ಓಪನ್, ಕಣಿವೆ ರಾಜ್ಯದಲ್ಲಿ ಉದ್ಘಾಟನೆಯಾಯಿತು ಮೊದಲ ಮಲ್ಟಿಪ್ಲೆಕ್ಸ್

ಮಲ್ಟಿಪ್ಲೆಕ್ಸ್ ಉದ್ಘಾಟನೆ ಮೂಲಕ, ಮೂರು ದಶಕಗಳ ನಂತರ ಕಾಶ್ಮೀರ ನಿವಾಸಿಗಳಿಗೆ ದೊಡ್ಡ ಪರದೆಯ ಮೇಲೆ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶ ಸಿಕ್ಕಂತಾಗಿದೆ.

Written by - Ranjitha R K | Last Updated : Sep 20, 2022, 12:11 PM IST
  • ಕಣಿವೆ ರಾಜ್ಯದ ಮೊದಲ ಮಲ್ಟಿಪ್ಲೆಕ್ಸ್
  • ಮೂರು ದಶಕಗಳ ನಂತರ ಚಿತ್ರಮಂದಿರ ಓಪನ್
  • ಮತ್ತೆ ಕಣಿವೆ ಜನಕ್ಕೆ ಮನರಂಜನೆ ಆರಂಭ
32 ವರ್ಷಗಳ ನಂತರ ಕಾಶ್ಮೀರದಲ್ಲಿ ಚಿತ್ರಮಂದಿರ ಓಪನ್, ಕಣಿವೆ ರಾಜ್ಯದಲ್ಲಿ ಉದ್ಘಾಟನೆಯಾಯಿತು ಮೊದಲ ಮಲ್ಟಿಪ್ಲೆಕ್ಸ್  title=
Kashmir First Multiplex

ಕಾಶ್ಮೀರ : ಕಾಶ್ಮೀರ ಕಣಿವೆಯ ಮೊದಲ ಮಲ್ಟಿಪ್ಲೆಕ್ಸ್ ಇಂದು ಉದ್ಘಾಟನೆಗೊಂಡಿದೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ಮಲ್ಟಿಪ್ಲೆಕ್ಸ್ ಅನ್ನು ಉದ್ಘಾಟಿಸಿದ್ದಾರೆ. ಈ ಮಲ್ಟಿಪ್ಲೆಕ್ಸ್ ಉದ್ಘಾಟನೆ ಮೂಲಕ, ಮೂರು ದಶಕಗಳ ನಂತರ ಕಾಶ್ಮೀರ ನಿವಾಸಿಗಳಿಗೆ ದೊಡ್ಡ ಪರದೆಯ ಮೇಲೆ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶ ಸಿಕ್ಕಂತಾಗಿದೆ. ಎರಡು ದಿನಗಳ ಹಿಂದೆ, ಪುಲ್ವಾಮಾ ಮತ್ತು ಶೋಪಿಯಾನ್‌ನಲ್ಲಿ ಕೂಡಾ ಮಲ್ಟಿಪ್ಲೆಕ್ಸ್‌ಗಳನ್ನು ಉದ್ಘಾಟಿಸಲಾಯಿತು.

ಈ ಹಿಂದೆ ಈ ಪ್ರದೇಶ,  ಸಿನಿಮಾಗಳ ಚಿತ್ರೀಕರಣಕ್ಕೆ, ಅತ್ಯಂತ ನೆಚ್ಚಿನ ತಾಣವಾಗಿತ್ತು. ಆದರೆ ಭಯೋತ್ಪಾದನಾ ಚಟುವಟಿಕೆ ಹೆಚ್ಚುತ್ತಿದ್ದಂತೆಯೇ, ಚಿತ್ರರಂಗ ಈ ಕಣಿವೆಯಿಂದ ದೂರವೇ ಉಳಿಯಿತು. ಕಾಶ್ಮೀರದಲ್ಲಿ ಚಿತ್ರಮಂದಿರಗಳಿಗೆ ಬೀಗ ಹಾಕಲಾಯಿತು. 

ಇದನ್ನೂ ಓದಿ : ವಿಧಾನಸಭೆಗೆ ಹಸು ತಂದ ಬಿಜೆಪಿ ಶಾಸಕ: ಎಂಎಲ್ಎ ಮಾತನಾಡುತ್ತಿದ್ದಂತೆ ಓಡಿಹೋಯ್ತು!

ಒಂದು ಕಾಲದಲ್ಲಿ ಇಲ್ಲಿತ್ತು 15 ಚಿತ್ರಮಂದಿರಗಳು :
ಕಾಶ್ಮೀರ ಕಣಿವೆಯಲ್ಲಿ ಸುಮಾರು 15 ಚಿತ್ರಮಂದಿರಗಳಿದ್ದು, ದಶಕಗಳ ಹಿಂದೆಯೇ ಅವುಗಳನ್ನು ಮುಚ್ಚಲಾಗಿತ್ತು. ಮುಚ್ಚಿರುವ ಎಲ್ಲಾ ಥಿಯೇಟರ್‌ಗಳನ್ನು ಮತ್ತೆ ತೆರೆಯಬೇಕು ಎನ್ನುವುದು  ಮಲ್ಟಿಪ್ಲೆಕ್ಸ್‌ಗಳ ಮಾಲೀಕರು ಅಭಿಪ್ರಾಯ. 32 ವರ್ಷಗಳ ನಂತರ ಸಿನಿಮಾ ಕಾಶ್ಮೀರಕ್ಕೆ ಮರಳುತ್ತಿದ್ದು, ಇದೊಂದು ಐತಿಹಾಸಿಕ ದಿನ ಎಂದು ಮಲ್ಟಿಪ್ಲೆಕ್ಸ್‌ಗಳ ಮಾಲೀಕ ವಿಜಯ್ ಧರ್ ಹೇಳಿದ್ದಾರೆ. 
 
 ಈ ದಿನದಿಂದ ತೆರೆಯಲಿದೆ ಚಿತ್ರಮಂದಿರದ ಬಾಗಿಲು : 
ನಮ್ಮ ಕನಸು ನನಸಾಗಿದೆ. ಇಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಇನ್ನೂ ಕೆಲವು ಸವಲತ್ತುಗಳನ್ನು ಅಭಿವೃದ್ದಿ ಪಡಿಸಲು ಒಂದು ವಾರ ಸಮಯ ಬೇಕಾಗುತ್ತದೆ. ಸೆಪ್ಟೆಂಬರ್ 30 ಅಥವಾ ಅಕ್ಟೋಬರ್ 1 ರೊಳಗೆ ಸಾರ್ವಜನಿಕರಿಗೆ ಚಿತ್ರಮಂದಿರದ ಬಾಗಿಲು ತೆರೆಯಲಾಗುತ್ತದೆ ಎಂದು ವಿಜಯ್ ಧರ್  ಮಾಹಿತಿ ನೀಡಿದ್ದಾರೆ. ಇಂದಿನಿಂದ ಕಣಿವೆಯಲ್ಲಿ ಮನರಂಜನೆಯ ಹೊಸ ಅಧ್ಯಾಯ  ಪ್ರಾರಂಭವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಇದನ್ನೂ ಓದಿ ಈ ಕೆಲಸ ಮಾಡಿದಕ್ಕೆ ಯುವಕರಿಗೆ 38 ಲಕ್ಷ ನೀಡಿದ Instagram: ಕಾರಣ ತಿಳಿದರೆ ನೀವು ಹೇಳುತ್ತೀರಿ ‘ವಾಹ್!’

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News