ತುಲಾ ರಾಶಿಯಲ್ಲಿ ಕುಳಿತಿರುವ ಕೇತು: ಮುಂದಿನ 4 ತಿಂಗಳು ಈ 3 ರಾಶಿಗಳ ಮೇಲೆ ದೊಡ್ಡ ತೊಂದರೆ!

ಕೇತು ಗ್ರಹವು ಪ್ರಸ್ತುತ ತುಲಾ ರಾಶಿಯಲ್ಲಿ ಕುಳಿತಿದೆ ಮತ್ತು ಅದು 2023ರವರೆಗೆ ಅಲ್ಲಿಯೆ ಇರುತ್ತದೆ. ಇದರಿಂದಾಗಿ ಮುಂದಿನ 4 ತಿಂಗಳಲ್ಲಿ 3 ರಾಶಿಯವರಿಗೆ ದೊಡ್ಡ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ.

Written by - Puttaraj K Alur | Last Updated : Sep 9, 2022, 07:30 AM IST
  • ಮೀನ ರಾಶಿಯವರು ಮುಂದಿನ 4 ತಿಂಗಳಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆ ಎದುರಿಸಬೇಕಾಗಬಹುದು
  • ಮಕರ ರಾಶಿಯವರು ವ್ಯಾಪಾರದಲ್ಲಿ ಹಣ ಹೂಡಿಕೆ ಮಾಡಿದ್ರೆ ನಷ್ಟವಾಗುವ ಸಾಧ್ಯತೆ ಇದೆ
  • ತುಲಾ ರಾಶಿಯವರ ಕುಟುಂಬ ಸದಸ್ಯರಲ್ಲಿ ಪರಸ್ಪರ ಕಲಹಗಳು ಹೆಚ್ಚಾಗುವ ಸಾಧ್ಯತೆ ಇದೆ
ತುಲಾ ರಾಶಿಯಲ್ಲಿ ಕುಳಿತಿರುವ ಕೇತು: ಮುಂದಿನ 4 ತಿಂಗಳು ಈ 3 ರಾಶಿಗಳ ಮೇಲೆ ದೊಡ್ಡ ತೊಂದರೆ! title=
Ketu Gochar 2022

ನವದೆಹಲಿ: ಜ್ಯೋತಿಷ್ಯದ ಪ್ರಕಾರ ಪ್ರತಿ ನಿಗದಿತ ಸಮಯದ ಮಧ್ಯಂತರದಲ್ಲಿ ರಾಶಿಚಕ್ರವು ಬದಲಾಗುತ್ತದೆ. ರಾಶಿಚಕ್ರದಲ್ಲಿನ ಈ ಬದಲಾವಣೆಯು ವಿವಿಧ ರಾಶಿಯ ಜನರ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಕೇತು ಗ್ರಹವು ಪ್ರಸ್ತುತ ತುಲಾ ರಾಶಿಯಲ್ಲಿ ಕುಳಿತಿದ್ದು 2023ರವರೆಗೆ ಇರುತ್ತದೆ. ಈ ರೀತಿ ತುಲಾ ರಾಶಿಯಲ್ಲಿ ಕೇತು ಇರುವುದರಿಂದ 3 ರಾಶಿಯ ಜನರ ಮೇಲೆ ಬಿಕ್ಕಟ್ಟಿನ ಮೋಡ ಕವಿಯಲಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ರಾಶಿಯವರು ಅನೇಕ ಕೆಟ್ಟ ಸುದ್ದಿಗಳನ್ನು ಕೇಳಬೇಕಾಗಬಹುದು. ಆ ರಾಶಿಗಳು ಯಾವುವು ಎಂದು ತಿಳಿಯಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ

ಮೀನ ರಾಶಿ:ರಾಶಿಯ ಜನರು ಮುಂದಿನ 4 ತಿಂಗಳಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇವರಿಗೆ ಚರ್ಮದ ಕಾಯಿಲೆ ಅಥವಾ ವೈರಲ್ ಸೋಂಕಿನ ಸಮಸ್ಯೆ ಕಾಡಬಹುದು. ನಿಮಗೆ ಕೆಲವರಿಂದ ವಂಚನೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಯಾರಿಗೂ ಸಾಲ ನೀಡುವುದನ್ನು ತಪ್ಪಿಸಬೇಕು. ಕೆಲಸದ ಸ್ಥಳದಲ್ಲಿ ನಷ್ಟ ಉಂಟಾಗಬಹುದು. ಸಮಾಜದಲ್ಲಿ ನೀವು ಮುಂದೆ ಬರಬೇಕೆಂದರೆ ಶ್ರಮಿಸಬೇಕು. ಅತಿಯಾದ ದುರಾಸೆ ತಪ್ಪಿಸಿ ಮತ್ತು ಇರುವದರಲ್ಲಿಯೇ ಸಂತೋಷವಾಗಿರಲು ಪ್ರಯತ್ನಿಸಿ.

ಇದನ್ನೂ ಓದಿ: Pitru Paksha : ಹೆಣ್ಣು ಮಕ್ಕಳೂ ಶ್ರಾದ್ಧ ಕರ್ಮ ಮಾಡಬಹುದೇ! ಧರ್ಮಗ್ರಂಥ ಏನು ಹೇಳುತ್ತೆ?

ಆಸ್ತಿಯಲ್ಲಿ ನಷ್ಟ ಉಂಟಾಗಬಹುದು

ಮಕರ ರಾಶಿ: ಈ ವರ್ಷದ ಅಂತ್ಯದ ವೇಳೆಗೆ ನೀವು ನ್ಯಾಯಾಲಯ-ವ್ಯಾಜ್ಯಗಳನ್ನು ಎದುರಿಸಬೇಕಾಗಬಹುದು. ಆಸ್ತಿಯಲ್ಲಿ ಹೂಡಿಕೆ ಮಾಡಿದ್ರೆ ನಷ್ಟವನ್ನು ಅನುಭವಿಸಬೇಕಾಗಬಹುದು. ನಿಮ್ಮ ಸಹೋದ್ಯೋಗಿಗಳಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಭಾವನೆ ಇರುತ್ತದೆ. ಆದ್ದರಿಂದ ಸಂಯಮದಿಂದ ವರ್ತಿಸಿ ಮತ್ತು ಈ ಕಷ್ಟದ ಸಮಯವನ್ನು ಶಾಂತಿಯಿಂದ ಕಳೆಯಲು ಪ್ರಯತ್ನಿಸಿ. ವ್ಯಾಪಾರದಲ್ಲಿ ಹಣವನ್ನು ಹೂಡಿಕೆ ಮಾಡಿದ್ರೆ ನಷ್ಟವಾಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯ ನಿರ್ಧಾರ ಕೈಗೊಳ್ಳಿರಿ. ಹೆಚ್ಚು ಹಣವನ್ನು ಹೂಡಿಕೆ ಮಾಡುವುದನ್ನು ತಪ್ಪಿಸಿರಿ.

ಗೃಹ ಕಲಹ ಎದುರಿಸುವಿರಿ

ತುಲಾ ರಾಶಿ: ಈ ರಾಶಿಯ ಜನರು ಮನೆಯಲ್ಲಿ ವೈಷಮ್ಯವನ್ನು ಎದುರಿಸಬೇಕಾಗುತ್ತದೆ. ಕುಟುಂಬ ಸದಸ್ಯರಲ್ಲಿ ಪರಸ್ಪರ ಕಲಹಗಳು ಹೆಚ್ಚಾಗುತ್ತವೆ ಮತ್ತು ಒಬ್ಬರನ್ನೊಬ್ಬರು ದೂಷಿಸುತ್ತಾರೆ. ಪ್ರೇಮ ಸಂಬಂಧಗಳು ಕಡಿಮೆಯಾಗುತ್ತವೆ ಮತ್ತು ದೂರವಾಗುವ ಪರಿಸ್ಥಿತಿ ಉಂಟಾಗುತ್ತದೆ. ಈ ಸಮಯದಲ್ಲಿ ಜೀವನದಲ್ಲಿ ಹೊಸ ಪ್ರಯೋಗ ಮಾಡುವುದನ್ನು ತಪ್ಪಿಸಿ, ನೀವು ವೈಫಲ್ಯವನ್ನು ಎದುರಿಸಬಹುದು. ಮನೆಯಲ್ಲಿ ಹಣಕಾಸಿನ ಅಡಚಣೆಗಳು ಹೆಚ್ಚಾಗುತ್ತವೆ ಮತ್ತು ಜೀವನ ನಡೆಸಲು ಹೊರಗಿನಿಂದ ಸಾಲವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಸೆಪ್ಟೆಂಬರ್ 10 ರಿಂದ ಈ ರಾಶಿಯವರಿಗೆ ಶುಭ ದಿನ ಆರಂಭ, ವಕ್ರಿ ಬುಧ ನೀಡಲಿದ್ದಾನೆ ಅಪಾರ ಯಶಸ್ಸು-ಸಂಪತ್ತು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News