ಅಕ್ರಮ ವಲಸಿಗರು ಪಾಕ್‌ಗೆ ವಾಪಸ್! ವಿಶೇಷ ಒಪ್ಪಂದಕ್ಕೆ UK ಸರ್ಕಾರ ಸಹಿ

UK and Pakistan signed an agreement : ಬ್ರಿಟನ್‌ನಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನದ ನಾಗರಿಕರಿಗೆ ಸಂಬಂಧಿಸಿದಂತೆ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ಇದೀಗ ಬ್ರಿಟನ್ ಪಾಕಿಸ್ತಾನದೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿದೆ.

Written by - Chetana Devarmani | Last Updated : Aug 19, 2022, 11:02 AM IST
  • ಅಕ್ರಮ ವಲಸಿಗರು ಪಾಕ್‌ಗೆ ವಾಪಸ್
  • ಬ್ರಿಟನ್‌ನಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕ್‌ ನಾಗರಿಕರು
  • ವಿಶೇಷ ಒಪ್ಪಂದಕ್ಕೆ UK ಸರ್ಕಾರ ಸಹಿ
ಅಕ್ರಮ ವಲಸಿಗರು ಪಾಕ್‌ಗೆ ವಾಪಸ್! ವಿಶೇಷ ಒಪ್ಪಂದಕ್ಕೆ UK ಸರ್ಕಾರ ಸಹಿ  title=
UK ಸರ್ಕಾರ

UK and Pakistan signed an agreement : ಬ್ರಿಟನ್‌ನಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನದ ನಾಗರಿಕರಿಗೆ ಸಂಬಂಧಿಸಿದಂತೆ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ಇದೀಗ ಬ್ರಿಟನ್ ಪಾಕಿಸ್ತಾನದೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿದ್ದು, ಅದರ ಅಡಿಯಲ್ಲಿ ಬ್ರಿಟನ್ ನಲ್ಲಿ ವಾಸಿಸಲು ಕಾನೂನುಬದ್ಧ ಹಕ್ಕು ಇಲ್ಲದ ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹೊರಹಾಕಬೇಕು ಎಂಬ ನಿರ್ಧಾರಕ್ಕೆ ಬಂದಿದೆ. ಬ್ರಿಟನ್‌ನ ಗೃಹ ಸಚಿವೆ ಪ್ರೀತಿ ಪಟೇಲ್, ಅವರ ಪಾಕಿಸ್ತಾನಿ ಸಹವರ್ತಿ ಯೂಸುಫ್ ನಸೀಮ್ ಖೋಖರ್ ಮತ್ತು ಬ್ರಿಟನ್‌ನಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಮೊಜಾಮ್ ಅಹ್ಮದ್ ಖಾನ್ ಅವರು 'ರಿಟರ್ನ್ಸ್ ಒಪ್ಪಂದ' ಕುರಿತು ಲಂಡನ್‌ನಲ್ಲಿ ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬ್ರಿಟನ್ ಈ ನಿರ್ಧಾರವನ್ನು ಐತಿಹಾಸಿಕ ಎಂದು ಬಣ್ಣಿಸಿದೆ ಏಕೆಂದರೆ ವಲಸಿಗ ಪಾಕಿಸ್ತಾನಿಗಳು ತಮ್ಮ ದೇಶದಲ್ಲಿ ಕಾನೂನು ಹಕ್ಕುಗಳನ್ನು ಹೊಂದಿಲ್ಲ.

ಇದನ್ನೂ ಓದಿ: Monkeypox ಅತ್ಯಂತ ಅಪಾಯಕಾರಿ ಪ್ರಕರಣ ಪತ್ತೆ, ಕೊಳೆತು ಹೋಗುತ್ತೆ ದೇಹದ ಒಂದೊಂದೇ ಭಾಗ!

ಒಪ್ಪಂದದ ಬಗ್ಗೆ ಪ್ರೀತಿ ಪಟೇಲ್ ಮಾತನಾಡಿ, ವಿದೇಶಿ ಅಪರಾಧಿಗಳು ಮತ್ತು ವಲಸೆ ಕಾನೂನು ಉಲ್ಲಂಘಿಸುವವರನ್ನು ಬ್ರಿಟನ್‌ನಿಂದ ಅವರ ದೇಶ ಪಾಕಿಸ್ತಾನಕ್ಕೆ ಕಳುಹಿಸಲು ನಮ್ಮ ಪಾಕಿಸ್ತಾನಿ ಸ್ನೇಹಿತರೊಂದಿಗೆ ಹೊಸ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು. UK ಹೋಮ್ ಆಫೀಸ್ ಮಾಹಿತಿಯ ಪ್ರಕಾರ, ಪಾಕಿಸ್ತಾನಿ ಪ್ರಜೆಗಳು ಇಂಗ್ಲೆಂಡ್ ಮತ್ತು ವೇಲ್ಸ್‌ನ ಜೈಲುಗಳಲ್ಲಿರುವ ಏಳನೇ ಅತಿ ಹೆಚ್ಚು ವಿದೇಶಿ ಅಪರಾಧಿಗಳಾಗಿದ್ದಾರೆ. ಹಿಂದಿನ ಇಮ್ರಾನ್ ಖಾನ್ ಸರ್ಕಾರದಲ್ಲಿಯೇ ಈ ಒಪ್ಪಂದವನ್ನು ಅಂತಿಮಗೊಳಿಸಲಾಯಿತು. ಆದರೆ ಅದರ ನಂತರ ಪಾಕಿಸ್ತಾನದಲ್ಲಿ ಅಧಿಕಾರ ಬದಲಾಗಿದೆ ಮತ್ತು ಈಗ ಶಹಬಾಜ್ ಷರೀಫ್ ದೇಶದ ಪ್ರಧಾನಿಯಾಗಿದ್ದಾರೆ. ಇದು ಹಸ್ತಾಂತರ ಒಪ್ಪಂದವಲ್ಲ ಮತ್ತು ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ಲಂಡನ್‌ನಲ್ಲಿ ನೆಲೆಸಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮೇಲೆ ಒಪ್ಪಂದವು ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಹೊಸ ಒಪ್ಪಂದವು ಬ್ರಿಟನ್‌ನಲ್ಲಿ ವಾಸಿಸಲು ಕಾನೂನುಬದ್ಧ ಹಕ್ಕನ್ನು ಹೊಂದಿರದ ಪಾಕಿಸ್ತಾನಿ ನಾಗರಿಕರನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ ಎಂದು ಬ್ರಿಟಿಷ್ ಗೃಹ ಕಚೇರಿ ಹೇಳಿದೆ.

ಇದನ್ನೂ ಓದಿ: Explainer : ಶ್ರೀಲಂಕಾದಲ್ಲಿ ಚೀನಾದ ʻಸ್ಪೈ ಶಿಪ್‌ʼ ಇರೋದು ಭಾರತಕ್ಕೆ ಅಪಾಯವೇ?

15 ತಿಂಗಳಲ್ಲಿ ಗೃಹ ಸಚಿವರು ಸಹಿ ಹಾಕಿರುವ ಐದನೇ ವಾಪಸಾತಿ ಒಪ್ಪಂದ ಇದಾಗಿದೆ ಎಂದು ಬ್ರಿಟಿಷ್ ಸರ್ಕಾರ ಹೇಳಿದೆ. ಯುಕೆಯಲ್ಲಿ ವಾಸಿಸಲು ಯಾವುದೇ ಹಕ್ಕಿಲ್ಲದ ಅಪಾಯಕಾರಿ ವಿದೇಶಿ ಅಪರಾಧಿಗಳು ಮತ್ತು ವಲಸೆ ಅಪರಾಧಿಗಳನ್ನು ತೆಗೆದುಹಾಕಿದ್ದಕ್ಕಾಗಿ ನಾನು ಕ್ಷಮೆಯಾಚಿಸುವುದಿಲ್ಲ ಎಂದು ಪ್ರೀತಿ ಪಟೇಲ್ ಹೇಳಿದ್ದಾರೆ. ಬ್ರಿಟನ್ ಮತ್ತು ಪಾಕಿಸ್ತಾನವು ಅಕ್ರಮ ವಲಸೆ ಮತ್ತು ಎರಡೂ ದೇಶಗಳಿಗೆ ಇರುವ ಗಮನಾರ್ಹ ಬೆದರಿಕೆಗಳ ಸಮಸ್ಯೆಯನ್ನು ಎದುರಿಸಲು ಈ ಒಪ್ಪಂದಕ್ಕೆ ಸಹಿ ಹಾಕಿದೆ. ಯುಕೆ-ಪಾಕಿಸ್ತಾನ ಕಾನೂನು ಜಾರಿ ಸಹಕಾರವನ್ನು ಸುಧಾರಿಸಲು ಮತ್ತು ವಿಸ್ತರಿಸಲು ನಡೆಯುತ್ತಿರುವ ಕೆಲಸವನ್ನು ಸಹ ಒಪ್ಪಂದವು ಒಳಗೊಂಡಿದೆ. ಜನವರಿ 2019 ರಿಂದ, ಬ್ರಿಟನ್ ವಿಶ್ವದಾದ್ಯಂತ 10,000 ಕ್ಕೂ ಹೆಚ್ಚು ವಿದೇಶಿ ಅಪರಾಧಿಗಳನ್ನು ಹೊರಹಾಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News