ಕಹಿಬೇವನ್ನು ಈ ರೀತಿ ಬಳಸಿದರೆ ತಲೆಹೊಟ್ಟಿನ ಸಮಸ್ಯೆ ಕ್ಷಣ ಮಾತ್ರದಲ್ಲಿ ನಿವಾರಣೆ ..!

ಬೇವನ್ನು ಸರಿಯಾಗಿ ಬಳಸಿದರೆ, ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ಚಳಿಗಾಲ,  ಬೇಸಿಗೆ, ಮಳೆಗಾಲ ಹೀಗೆ ಯಾವ ಕಾಲದಲ್ಲಿ ಬೇಕಾದರೂ ಬೇವನ್ನು ಬಳಸಬಹುದು.

Written by - Ranjitha R K | Last Updated : Feb 16, 2022, 01:15 PM IST
  • ಕೂದಲು ಹಾನಿಗೊಳ್ಳುವುದನ್ನು ತಡೆಯಲು ಬೇವು ಸಹಕಾರಿ.
  • ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ
  • ಎಲ್ಲಾ ಕಾಲದಲ್ಲಿಯೂ ಇದು ಕೂದಲಿಗೆ ಪ್ರಯೋಜನ ನೀಡುತ್ತದೆ.
 ಕಹಿಬೇವನ್ನು ಈ ರೀತಿ ಬಳಸಿದರೆ ತಲೆಹೊಟ್ಟಿನ  ಸಮಸ್ಯೆ ಕ್ಷಣ ಮಾತ್ರದಲ್ಲಿ  ನಿವಾರಣೆ ..! title=
ಕೂದಲು ಹಾನಿಗೊಳ್ಳುವುದನ್ನು ತಡೆಯಲು ಬೇವು ಸಹಕಾರಿ. (file photo)

ನವದೆಹಲಿ : ಬೇವಿನ (Neem) ಔಷಧೀಯ ಗುಣಗಳ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಇದು ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ (Air Pollution), ಜಲಮಾಲಿನ್ಯ (Water Pollution),  ಅನಾರೋಗ್ಯಕರ ಆಹಾರ ಸೇವನೆಯಿಂದ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ (Unhealthy Diet). ಕೂದಲು ಹಾನಿಗೊಳ್ಳುವುದನ್ನು ತಡೆಯಲು ಬೇವು ಸಹಕಾರಿ.  

ಬೇವು ಬಳಸುವುದು ಹೇಗೆ?
ಬೇವನ್ನು (Neem) ಸರಿಯಾಗಿ ಬಳಸಿದರೆ, ತಲೆಹೊಟ್ಟಿನ (Dandruff) ಸಮಸ್ಯೆ ನಿವಾರಣೆಯಾಗುತ್ತದೆ. ಚಳಿಗಾಲ,  ಬೇಸಿಗೆ, ಮಳೆಗಾಲ ಹೀಗೆ ಯಾವ ಕಾಲದಲ್ಲಿ ಬೇಕಾದರೂ ಬೇವನ್ನು ಬಳಸಬಹುದು. ಎಲ್ಲಾ ಕಾಲದಲ್ಲಿಯೂ ಇದು ಕೂದಲಿಗೆ ಪ್ರಯೋಜನ ನೀಡುತ್ತದೆ. 

ಇದನ್ನೂ ಓದಿ : Zumba Dance Workout: ಜುಂಬಾ ಡಾನ್ಸ್ ಮಾಡುವುದರ 4 ಪ್ರಮುಖ ಪ್ರಯೋಜನಗಳಿವು

1. ಬೇವು ಮತ್ತು ಮೊಸರು :
ಬೇವು ಮತ್ತು ಮೊಸರಿನ (Curd) ಮಿಶ್ರಣವು ಕೂದಲಿನ ಮೇಲೆ ವೇಗವಾಗಿ ಪರಿಣಾಮ ಬೀರುತ್ತದೆ. ಮೊಸರಿನ ಪಾತ್ರೆಯಲ್ಲಿ ಬೇವಿನ ಎಲೆಗಳನ್ನು ಪುಡಿ ಪುಡಿ ಮಾಡಿ ಹಾಕಿಕೊಳ್ಳಿ. ನಂತರ ಇದರ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕೂದಲಿನ ಬುಡಕ್ಕೆ ಹಚ್ಚಿ. ಸುಮಾರು ಅರ್ಧ ಘಂಟೆಯವರೆಗೆ ಹಾಗೇ ಇರಿಸಿ ನಂತರ ಕೂದಲನ್ನು ತೊಳೆಯಿರಿ (Neem  benefits for dandruff).

2. ಬೇವು ಮತ್ತು ಜೇನುತುಪ್ಪ :
ಬೇವಿನ ಎಲೆಗಳನ್ನು ಪುಡಿಮಾಡಿ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು (Honey) ಬೆರೆಸಿ ಹೇರ್ ಮಾಸ್ಕ್ ತಯಾರಿಸಿ. ಇದನ್ನು ಕೂದಲಿಗೆ ಹಚ್ಚಿ 10 ರಿಂದ 20 ನಿಮಿಷಗಳವರೆಗೆ ಬಿಡಿ.  ನಂತರ ಕೂದಲನ್ನು ತೊಳೆಯಿರಿ (Hair care tips). ಹೀಗೆ ಮಾಡಿದರೆ ತಲೆಹೊಟ್ಟು ಸಮಸ್ಯೆ ಶೀಘ್ರ ನಿವಾರಣೆಯಾಗುತ್ತದೆ.   

3. ಬೇವು ಮತ್ತು ತೆಂಗಿನ ಎಣ್ಣೆ :
ತೆಂಗಿನ ಎಣ್ಣೆಯಲ್ಲಿ (Coconut oil) ಬೇವಿನ ಎಲೆಗಳನ್ನು ಹಾಕಿ ಕುದಿಸಿ, ತಣ್ಣಗಾಗಲು ಬಿಡಿ. ತಣ್ಣಗಾದ ನಟರ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಳ್ಳಿ. ಈ ಎಣ್ಣೆಯನ್ನು ನಿಯಮಿತವಾಗಿ ಹಚ್ಚುತ್ತಾ ಬಂದರೆ, ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ತುರಿಕೆ ಮತ್ತು ಮೊಡವೆಗಳು ಮತ್ತು ಇತರ ಸೋಂಕುಗಳಿಂದಲೂ ಮುಕ್ತಿ ಸಿಗುತ್ತದೆ. 

ಇದನ್ನೂ ಓದಿ : Stomach Bloating Home Remedies: ಹೊಟ್ಟೆ ಭಾರ ಎನಿಸುತ್ತಿದ್ದರೆ ತಕ್ಷಣ ಪರಿಹಾರಕ್ಕಾಗಿ ಇದನ್ನು ಸೇವಿಸಿ

4. ಬೇವಿನ ನೀರು :
40 ಬೇವಿನ ಎಲೆಗಳನ್ನು ಸುಮಾರು ಒಂದೂವರೆ ಲೀಟರ್ ನೀರಿನಲ್ಲಿ ಕುದಿಸಿ ನಂತರ ಈ ನೀರನ್ನು ಉಗುರುಬೆಚ್ಚಗಾಗಿಸಿ. ಈಗ ಈ ನೀರಿನಲ್ಲಿ ಕೂದಲನ್ನು ತೊಳೆಯಿರಿ. ಇದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ಮಾತ್ರವಲ್ಲ, ಇತರ ಸಮಸ್ಯೆಗಳೂ ದೂರವಾಗುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News