Zee Digital News Channels: ಜೀ ಮೀಡಿಯಾದಿಂದ ಮತ್ತೊಂದು ಮಹತ್ವದ ಹೆಜ್ಜೆ, ಏಕಕಾಲಕ್ಕೆ 4 ಜೀ ಡಿಜಿಟಲ್ ನ್ಯೂಸ್ ಗಳು ಆರಂಭ

ಜೀ ಮೀಡಿಯಾ (Zee Media) ನಿಖರವಾದ ಸುದ್ದಿ ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವ‌ ನೆಟ್ ವರ್ಕ್. ನಿಖರವಾದ ಸುದ್ದಿ ನೀಡುವುದು ಮಾತ್ರವಲ್ಲ, ನಿಷ್ಪಕ್ಷಪಾತವಾದ ಸುದ್ದಿ ನೀಡುವುದರಲ್ಲೂ ಸದಾ ಮುಂದಿರುವ ಮಾಧ್ಯಮ ಸಂಸ್ಥೆ. ಜೊತೆಗೆ ದೇಶದ ಮಾಧ್ಯಮ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನೆಟ್ ವರ್ಕ್ ಕೂಡ ಹೌದು. ಜೀ ಮೀಡಿಯಾ ದೇಶದ ವಿವಿಧ ಭಾಷೆಗಳಲ್ಲಿ ಒಟ್ಟು 18 ಸುದ್ದಿ ವಾಹಿನಿಗಳನ್ನು ಹೊಂದಿದೆ. ಇದರ ಮುಂದುವರಿದ ಭಾಗವಾಗಿ ಜೀ ಡಿಜಿಟಲ್ ನ್ಯೂಸ್ ವಾಹಿನಿಗಳು‌ ಈಗ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಕೂಡ ಆರಂಭವಾಗುತ್ತಿವೆ.

Written by - Yashaswini V | Last Updated : Jan 24, 2022, 10:37 AM IST
  • 'ಬದಲಾವಣೆ ಜಗದ ನಿಯಮ' ಎಂಬುದನ್ನು ಜೀ ಮೀಡಿಯಾ ನೆಟ್ ವರ್ಕ್ ಒಪ್ಪಿಕೊಂಡಿದೆ
  • ಜೀ ಮೀಡಿಯಾ ಸದಾ ಪ್ರಯೋಗಶೀಲವಾಗಿದೆ
  • ಎಷ್ಟೇ ಬದಲಾವಣೆಗಳನ್ನು ಕಂಡರೂ, ವೇಗದಲ್ಲಿ ಸಾಗುತ್ತಿದ್ದರೂ 'ಸತ್ಯವೇ ಸುದ್ದಿಯ ಜೀವಾಳ' ಎಂಬ ಮಾಧ್ಯಮದ ಮೌಲ್ಯವನ್ನು ಎಂದೂ ಬಿಟ್ಟುಕೊಟ್ಟಿಲ್ಲ
Zee Digital News Channels: ಜೀ ಮೀಡಿಯಾದಿಂದ ಮತ್ತೊಂದು ಮಹತ್ವದ ಹೆಜ್ಜೆ, ಏಕಕಾಲಕ್ಕೆ 4 ಜೀ ಡಿಜಿಟಲ್ ನ್ಯೂಸ್ ಗಳು ಆರಂಭ title=
Zee digital news channels will be launch on jan 25th in Kannada, Tamil, Telugu, Malayalam languages

ನವದೆಹಲಿ: ದೇಶದ ಮಾಧ್ಯಮ ಕ್ಷೇತ್ರದಲ್ಲೇ ಅತ್ಯಂತ ದೊಡ್ಡ ಜಾಲ ಹೊಂದಿರುವ (Big Network) ಮಾಧ್ಯಮ ಸಂಸ್ಥೆಯಾದ 'ಜೀ ಮೀಡಿಯಾ' (Zee Media) ಈಗ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಮತ್ತೊಂದು ಸಿಹಿ ಸುದ್ದಿ ನೀಡುತ್ತಿದೆ. ದಕ್ಷಿಣ ಭಾರತದ ನಾಲ್ಕು ಮುಖ್ಯ ಭಾಷೆಗಳಾದ ಕನ್ನಡ (Kannada),  ತಮಿಳು (Tamil), ತೆಲುಗು (Telugu) ಹಾಗೂ ಮಲೆಯಾಳಂ (Malayalam)ಗಳಲ್ಲಿ ಜೀ ಡಿಜಿಟಲ್ ನ್ಯೂಸ್ (Zee Digital News) ಆರಂಭವಾಗಲಿದೆ.

ಜೀ ಮೀಡಿಯಾ ಸಂಸ್ಥಾಪಕ ಮತ್ತು ರಾಜ್ಯಸಭಾ ಸಂಸದರೂ ಆದ ಡಾ. ಸುಭಾಷ್ ಚಂದ್ರ (Zee media founder and Rajya sabha MP Dr. Subhash Chandra) ಅವರು ಜನವರಿ 25 ರಂದು ಬೆಳಿಗ್ಗೆ 10ಗಂಟೆಗೆ ದಕ್ಷಿಣ ಭಾರತದ ರಾಜ್ಯಗಳಿಗೆ #ZeeKannadaNews, #ZeeTamilNews,  #ZeeTeluguNews ಮತ್ತು #ZeeMalayalamNews ನಾಲ್ಕು ಡಿಜಿಟಲ್ ಸುದ್ದಿ ವಾಹಿನಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

'ಬದಲಾವಣೆ ಜಗದ ನಿಯಮ' ಎಂಬುದನ್ನು ಜೀ ಮೀಡಿಯಾ ನೆಟ್ ವರ್ಕ್ (Zee Media Network) ಒಪ್ಪಿಕೊಂಡಿದೆ. ಕಾಲಕ್ಕೆ ತಕ್ಕಂತೆ ಹಲವು ಆಯಾಮಗಳಲ್ಲಿ ಬದಲಾಗಿದೆ. ಜೀ ಮೀಡಿಯಾ ಸದಾ ಪ್ರಯೋಗಶೀಲವಾಗಿದೆ. ಹೀಗೆ ಎಷ್ಟೇ ಬದಲಾವಣೆಗಳನ್ನು ಕಂಡರೂ, ವೇಗದಲ್ಲಿ ಸಾಗುತ್ತಿದ್ದರೂ 'ಸತ್ಯವೇ ಸುದ್ದಿಯ ಜೀವಾಳ' (Satyave Suddiya Jeevala) ಎಂಬ ಮಾಧ್ಯಮದ ಮೌಲ್ಯವನ್ನು ಎಂದೂ ಬಿಟ್ಟುಕೊಟ್ಟಿಲ್ಲ. ಈಗ ಅದೇ ಬದ್ದತೆಯೊಂದಿಗೆ ಜೀ ಡಿಜಿಟಲ್ ನ್ಯೂಸ್ (Zee Digital News) ನಿಮ್ಮ ಮುಂದೆ ಬರುತ್ತಿದೆ.

ಜೀ ಮೀಡಿಯಾ (Zee Media) ನಿಖರವಾದ ಸುದ್ದಿ ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವ‌ ನೆಟ್ ವರ್ಕ್. ನಿಖರವಾದ ಸುದ್ದಿ ನೀಡುವುದು ಮಾತ್ರವಲ್ಲ, ನಿಷ್ಪಕ್ಷಪಾತವಾದ ಸುದ್ದಿ ನೀಡುವುದರಲ್ಲೂ ಸದಾ ಮುಂದಿರುವ ಮಾಧ್ಯಮ ಸಂಸ್ಥೆ. ಜೊತೆಗೆ ದೇಶದ ಮಾಧ್ಯಮ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನೆಟ್ ವರ್ಕ್ ಕೂಡ ಹೌದು. ಜೀ ಮೀಡಿಯಾ ದೇಶದ ವಿವಿಧ ಭಾಷೆಗಳಲ್ಲಿ ಒಟ್ಟು 18 ಸುದ್ದಿ ವಾಹಿನಿಗಳನ್ನು ಹೊಂದಿದೆ. ಇದರ ಮುಂದುವರಿದ ಭಾಗವಾಗಿ ಜೀ ಡಿಜಿಟಲ್ ನ್ಯೂಸ್ ವಾಹಿನಿಗಳು‌ ಈಗ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಕೂಡ ಆರಂಭವಾಗುತ್ತಿವೆ.

ದೇಶದೊಳಗೆ ಅತ್ಯಂತ ದೊಡ್ಡ ಸುದ್ದಿ ವಾಹಿನಿಗಳ ಜಾಲ ಹೊಂದುವುದು ಮಾತ್ರವಲ್ಲ, ದೇಶದ ಮೊದಲ ಅಂತಾರಾಷ್ಟ್ರೀಯ ವಾಹಿನಿ 'ವಿಯಾನ್' (WION) ಅನ್ನು ಆರಂಭಿಸಿದ ಹಿರಿಮೆ ಕೂಡ ಜೀ ಮೀಡಿಯಾಗೆ ಸಲ್ಲುತ್ತದೆ. ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಮಾತ್ರವಲ್ಲ, ಮನರಂಜನಾ ಮಾಧ್ಯಮದಲ್ಲೂ ಜೀ ಮೀಡಿಯಾ ಮುಂದಿದೆ ಎನ್ನುವಂಥದ್ದನ್ನು ಯಾರೂ ತಳ್ಳಿಹಾಕುವಂತಿಲ್ಲ. ಈಗ ಜನವರಿ 25ರಿಂದ ನಿಮ್ಮ ಮುಂದೆ ಬರುತ್ತಿರುವ ಜೀ ಡಿಜಿಟಲ್ ನ್ಯೂಸ್ ವಾಹಿನಿಗಳು ಹೊಸ ರೂಪದಲ್ಲಿ, ಹೊಸ ವೇಗದಲ್ಲಿ ಸುದ್ದಿಗಳನ್ನು ನಿಮ್ಮ ಮುಂದಿಡಲಿವೆ. 

Zee Digital News Channels: ಜೀ ಮೀಡಿಯಾದಿಂದ ಮತ್ತೊಂದು ಮಹತ್ವದ ಹೆಜ್ಜೆ, ಏಕಕಾಲಕ್ಕೆ 4 ಜೀ ಡಿಜಿಟಲ್ ನ್ಯೂಸ್ ಗಳು ಆರಂಭ

ನಿಮ್ಮ ನಿಮ್ಮ ಊರಿನ ಸುದ್ದಿಗಳಿಂದ ಹಿಡಿದು ಅಂತಾರಾಷ್ಟ್ರೀಯ ಬೆಳವಣಿಗೆಗಳವರೆಗೆ, ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಿಂದ ಹಿಡಿದು ನಮ್ಮ ಸುತ್ತಲಿನ ನೂರಾರು ಸಂಗತಿಗಳವರೆಗೆ, ಕ್ರೀಡೆ, ಕ್ರಿಕೆಟ್, ಸಿನಿಮಾ, ಸೀರಿಯಲ್ ಕ್ಷೇತ್ರಗಳಿಂದ ಹಿಡಿದು ಸಾಮಾಜಿಕ ಜಾಲತಾಣದ ಹತ್ತು-ಹಲವು ವಿಷಯಗಳವರೆಗೆ, ಸಂಸ್ಕೃತಿ, ಪರಂಪರೆಯಿಂದ ಹಿಡಿದು ಇಂದಿನ ಲೈಫ್ ಸ್ಟೈಲ್ ವರೆಗೆ ಜೀ ಡಿಜಿಟಲ್ ನ್ಯೂಸ್ ವಾಹಿನಿಗಳು ಎಲ್ಲವನ್ನೂ ಸಹ್ಯವಾಗಿ ಸಾದರಪಡಿಸಲಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News