Omicron Symptoms: ಚಿಕ್ಕ ಮಕ್ಕಳು ಮತ್ತು ಕಿಶೋರರಲ್ಲಿ ಭಿನ್ನವಾಗಿವೆ ಓಮಿಕ್ರಾನ್ ಲಕ್ಷಣಗಳು, ಈ ರೀತಿ ಗುರುತಿಸಿ

Omicron Symptoms In Children: ಚಿಕ್ಕ ಮಕ್ಕಳು ಹಾಗೂ ಕಿಶೋರಾವಸ್ಥೆ ತಲುಪಿರುವವರಲ್ಲಿ ಕೊರೊನಾ ವಿಭಿನ್ನ ಲಕ್ಷಣಗಳನ್ನು ತೋರಿಸುತ್ತಿದೆ. ಸಮಯ ಇರುವಂತೆ ಅವುಗಳನ್ನು ಗುರುತಿಸಿ ಮಕ್ಕಳಿಗೆ ಉಪಚಾರ ನೀಡಿ ಕಾಳಜಿ ವಹಿಸಿ.

Written by - Nitin Tabib | Last Updated : Jan 11, 2022, 09:54 PM IST
  • ವಿಶ್ವಾದ್ಯಂತ ಓಮಿಕ್ರಾನ್ ಭಾರಿ ಆತಂಕ ಸೃಷ್ಟಿಸಿದೆ.
  • ಮೊದಲಿನಿಂದಲೂ, ಈ ವೈರಸ್ ಅನ್ನು ಸೌಮ್ಯ (Mild Virus) ಮತ್ತು ಕಡಿಮೆ ಮಾರಣಾಂತಿಕ ಎಂದು ವಿವರಿಸಲಾಗಿದೆ.
  • ಆದರೆ ಇದರ ಲಕ್ಷಣಗಳು ಕಂಡ ಕೂಡಲೇ ಮನದಲ್ಲಿ ಭಯ ಆವರಿಸುತ್ತದೆ.
Omicron Symptoms: ಚಿಕ್ಕ ಮಕ್ಕಳು ಮತ್ತು ಕಿಶೋರರಲ್ಲಿ ಭಿನ್ನವಾಗಿವೆ ಓಮಿಕ್ರಾನ್ ಲಕ್ಷಣಗಳು, ಈ ರೀತಿ ಗುರುತಿಸಿ title=
Omicron Symptoms In Children (File Photo)

Omicron And Child Safety: ವಿಶ್ವಾದ್ಯಂತ ಓಮಿಕ್ರಾನ್ ಭಾರಿ ಆತಂಕ ಸೃಷ್ಟಿಸಿದೆ. ಮೊದಲಿನಿಂದಲೂ, ಈ ವೈರಸ್ (Covid-19) ಅನ್ನು ಸೌಮ್ಯ (Mild Virus)  ಮತ್ತು ಕಡಿಮೆ ಮಾರಣಾಂತಿಕ (Deadly) ಎಂದು ವಿವರಿಸಲಾಗಿದೆ. ಆದರೆ ಇದರ ಲಕ್ಷಣಗಳು ಕಂಡ ಕೂಡಲೇ ಮನದಲ್ಲಿ ಭಯ ಆವರಿಸುತ್ತದೆ. ಈ ವೈರಸ್‌ನ  (Omicron) ಒಂದು ಒಳ್ಳೆಯ ವಿಷಯವೆಂದರೆ ಇದರಲ್ಲಿ ರೋಗಲಕ್ಷಣಗಳು (Symptoms) ಎಲ್ಲೆಡೆ ಮತ್ತು ಹೆಚ್ಚಿನ ಜನರಲ್ಲಿ ಒಂದೇ ಆಗಿವೆ. ಅವು ಗಂಟಲು ಉರಿತ  (Throat Burning) ಅಥವಾ ನೋವಿನಿಂದ ಆರಂಭಗೊಂಡು ನಂತರ ಮೂಗಿನ ಕಟ್ಟುವಿಕೆ, ಶೀತ, ತಲೆನೋವು ಮತ್ತು  ಜ್ವರ ಕಾಣಿಸಿಕೊಳ್ಳುತ್ತದೆ. 

ಆದರೆ, ಕರೋನಾದ (Coronavirus) ಇವೆ ಲಕ್ಷಣಗಳು ಮಕ್ಕಳಲ್ಲೂ ಕಂಡುಬರುತ್ತಿವೆ. ಆದರೆ ಚಿಕ್ಕ ಮಕ್ಕಳು ಮತ್ತು ಹದಿಹರೆಯದವರ ನಡುವೆ ಬಹಳ ಸಣ್ಣ ವ್ಯತ್ಯಾಸಗಳೊಂದಿಗೆ ಕೊರೊನಾ ವರ್ತಿಸುತ್ತಿದೆ. ಅಂತೆಯೇ, ಚಿಕ್ಕ ಮಕ್ಕಳು ಗಂಟಲು ನೋವಿನ ಕುರಿತು ದೂರು ನೀಡುತ್ತಿಲ್ಲ. ಅವರು ಕೇವಲ ಅಳುತ್ತಾರೆ ಅಥವಾ ಮಾತನಾಡಲು ಸಾಧ್ಯವಾಗುವ ಮಕ್ಕಳು ನೋಯುತ್ತಿರುವ ಗಂಟಲು ವರದಿ ಮಾಡುತ್ತಾರೆ. ಇದಾದ ನಂತರ ಅವರಿಗೆ ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಇದ್ದು ನಂತರ ಜ್ವರ ಬರುತ್ತದೆ. ಮತ್ತೊಂದೆಡೆ, ಹದಿಹರೆಯದವರಲ್ಲಿ ಗಂಟಲಿನ ಕಿರಿಕಿರಿಯ ನಂತರ, ಶೀತ ಮತ್ತು ಕೆಮ್ಮಿನ ಜೊತೆಗೆ ಜ್ವರದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

CDC ಹಾಗೂ  WHO  ಈ ವೈರಸ್‌ನ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ಬಿಡುಗಡೆ ಮಾಡುತ್ತಿವೆ. ಇದರಿಂದ ನೀವು  ಕೂಡ ನಿಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಬಹುದು. ಯಾವುದೇ ಕುಟುಂಬದ ಮಕ್ಕಳು ಮತ್ತು ವೃದ್ಧರು ಈ ವೈರಸ್‌ ಸೋಂಕಿಗೆ ಒಳಗಾಗಬಹುದು. ಆದ್ದರಿಂದ ಅವರ ಬಗ್ಗೆ  ಸಂಪೂರ್ಣ ಕಾಳಜಿ ವಹಿಸಿ. ಇದರಲ್ಲಿ ನೀವು ಹೆಚ್ಚು ಗಮನಹರಿಸಬೇಕಾದ ವಿಷಯಗಳು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ಓದಿ-ಎರಡು ಡೋಸ್ ಲಸಿಕೆ ಪಡೆದವರಿಗೆ ಸಿಹಿಸುದ್ದಿ: ಈ ಏರ್‌ಲೈನ್ ಕಂಪನಿ ನೀಡುತ್ತಿದೆ ಭರ್ಜರಿ ಕೊಡುಗೆ..!

>> ಕರೋನದ (ಓಮಿಕ್ರಾನ್) ಈ ರೂಪಾಂತರವು ಉಸಿರಾಟದ ಮೂಲಕ ವೇಗವಾಗಿ ಹರಡುತ್ತಿದೆ ಎಂದು ನಿಮಗೆ ತಿಳಿದಿದೆ. ಆದ್ದರಿಂದ ಕುಟುಂಬದ ಎಲ್ಲರೂ ಮಾಸ್ಕ್‌ಗಳನ್ನು ಕಟ್ಟುನಿಟ್ಟಾಗಿ ಬಳಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
>> ಈ ವೈರಸ್ ಅನ್ನು ನಿಯಂತ್ರಿಸಲು ನೈರ್ಮಲ್ಯವು ಮತ್ತೊಂದು ಮಾರ್ಗವಾಗಿದೆ. >> ಹೊರಗಿನಿಂದ ತಂಡ ಯಾವುದೇ ವಸ್ತುವನ್ನು ಮುಟ್ಟಿದ ನಂತರ ಹ್ಯಾಂಡ್ ವಾಶ್ ಅಥವಾ ಹ್ಯಾಂಡ್ ಸ್ಯಾನಿಟೈಸರ್ ಬಳಸಿ.
>> ಉಸಿರಾಟವನ್ನು ಆರೋಗ್ಯಕರವಾಗಿಡಲು ಮೂರನೇ ಮತ್ತು ಸುಲಭವಾದ ಮಾರ್ಗವೆಂದರೆ ಅದು ಬಿಸಿ ನೀರು. ತುಂಬಾ ಬಿಸಿ ಅಲ್ಲ ಆದರೆ ನಿಮ್ಮ ದೈನಂದಿನ ಜೀವನದಲ್ಲಿ ಉಗುರುಬೆಚ್ಚಗಿನ ನೀರಿಗಿಂತ ಸ್ವಲ್ಪ ಬಿಸಿ ನೀರನ್ನು ಸೇರಿಸಿ. ಹೊರಗಿನಿಂದ ಬಂದ ನಂತರ ಕೈ ಬಾಯಿ ತೊಳೆದು ಬಿಸಿ ನೀರು ಅಥವಾ ಕಷಾಯ ಕುಡಿಯಬೇಕು.
>> ಚಳಿಗಾಲದಲ್ಲಿ ನೆಗಡಿ, ಕೆಮ್ಮು ಬರುವುದು ಸಾಮಾನ್ಯ. ಆದರೆ ಕರೋನಾ ಸೋಂಕಿನ ಮಧ್ಯೆ, ಈ ಸಣ್ಣ ಸಮಸ್ಯೆಗಳನ್ನು ಸಹ ನಾವು ಭರಿಸಲಾಗುವುದಿಲ್ಲ. ಆದ್ದರಿಂದ ಶೀತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಸರಿಯಾಗಿ ಬಳಸಿ.
>> ಸರಿಯಾದ ಆಹಾರದೊಂದಿಗೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. >> ರೋಗನಿರೋಧಕ ಶಕ್ತಿ ಬಲವಾಗಿದ್ದಾಗ, ಯಾವುದೇ ರೋಗವು ನಿಮ್ಮನ್ನು ತನ್ನ ಹಿಡಿತದಲ್ಲಿ ಸುಲಭವಾಗಿ ತೆಗೆದುಕೊಳ್ಳುವುದಿಲ್ಲ ಮತ್ತು ನೀವು ಅನಾರೋಗ್ಯಕ್ಕೆ ಒಳಗಾದರೂ, ಅದು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ.
>> ದಿನಕ್ಕೆ ಒಮ್ಮೆ ಅರಿಶಿನದ ಹಾಲನ್ನು ಕುಡಿಯಿರಿ ಮತ್ತು ಅದನ್ನು ಕುಟುಂಬದ ಎಲ್ಲರಿಗೂ ಸೇವಿಸಲು ಹೇಳಿ. ಅಲ್ಲದೆ, ತುಳಸಿಯ ಕಷಾಯವನ್ನು ಪ್ರತಿದಿನ ಒಮ್ಮೆ ಕುಡಿಯಿರಿ. >> ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಸೋಂಕುಗಳನ್ನು ತೊಡೆದುಹಾಕಲು ಅವು ಬಹಳ ಸಹಾಯಕವಾಗಿವೆ.
>> ಮನೆಗಳಲ್ಲಿ ಬಂಧಿಯಾದ ನಂತರ, ವ್ಯಾಯಾಮ ಮತ್ತು ಯೋಗವನ್ನು ಹೊರತುಪಡಿಸಿ ನಮಗೆ ಬೇರೆ ಆಯ್ಕೆಗಳಿಲ್ಲ, ಇವು ನಮ್ಮ ದೇಹವನ್ನು ಸದೃಢವಾಗಿ, ಆರೋಗ್ಯಕರವಾಗಿ ಮತ್ತು ರಕ್ತ ಪರಿಚಲನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಆದ್ದರಿಂದ ನಿಮಗೆ ನಡೆಯಲು ಸಾಧ್ಯವಾಗದೇ ಇದ್ದರೆ ಖಂಡಿತವಾಗಿಯೂ ಯೋಗ ಮತ್ತು ವ್ಯಾಯಾಮ ಮಾಡಿ ಮತ್ತು ಮಕ್ಕಳಿಂದಲೂ ಮಾಡಿಸಿ.

ಇದನ್ನೂ ಓದಿ-Coronavirus, Omicron ವಿರುದ್ಧ ಸಿಕ್ಕ ದೊಡ್ಡ 'ಸುರಕ್ಷಾ ಕವಚ', ಹೊಸ ಅಧ್ಯಯನದಲ್ಲಿ ವಿಷಯ ಬಹಿರಂಗ!

(Disclaimer: ಈ ಲೇಖನದಲ್ಲಿ ನೀಡಲಾಗಿರುವ ವಿಧಾನ, ಪದ್ಧತಿ, ವೈದ್ಯಕೀಯ ಸಲಹೆಗಳನ್ನು ಝೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಇವುಗಳನ್ನು ಕೇವಲ ಸಲಹೆಯ ರೂಪದಲ್ಲಿ ಸ್ವೀಕರಿಸಿ. ಯಾವುದೇ ಸಲಹೆ/ಔಷಧಿ/ಉಪಚಾರ/ಡಯಟ್ ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆಯಲು ಮರೆಯಬೇಡಿ)

ಇದನ್ನೂ ಓದಿ-Pig heart to Human:ಮಾನವನಿಗೆ 'ಹಂದಿ ಹೃದಯ' ಅಳವಡಿಸಿದ ವೈದ್ಯರ ತಂಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News