Farm Laws: 'ಸಂಸತ್ತಿನ ಮೇಲೆ ಖಾಲಿಸ್ತಾನಿ ಧ್ವಜ ಹಾರಿಸಿ, $125,000 ಬಹುಮಾನ ನೀಡುತ್ತೇವೆ'

SFJ Offer To SKM - ಖಲಿಸ್ತಾನಿ ಸಂಘಟನೆ ಸಿಖ್ ಫಾರ್ ಜಸ್ಟಿಸ್ (SFJ) ತನ್ನ ಭಾರತ ವಿರೋಧಿ ಚಟುವಟಿಕೆಗಳಿಂದ ವಿಮುಖವಾಗುತ್ತಿಲ್ಲ. ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ಕುಳಿತಿರುವ ಅಲ್ಲಿನ ಜನರು ಪಂಜಾಬ್ ಅನ್ನು ದೇಶದಿಂದ ಬೇರ್ಪಡಿಸುವ ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ಅವರು ಭಯೋತ್ಪಾದಕರಂತಹ  ಚಟುವಟಿಕೆಗಳನ್ನು ಮಾಡುವುದರಿಂದಲೂ ಹಿಂಜರಿಯುತ್ತಿಲ್ಲ.

Written by - Nitin Tabib | Last Updated : Nov 22, 2021, 03:45 PM IST
  • ಖಲಿಸ್ತಾನಿ ಸಂಘಟನೆಯ ಹೊಸ ಪ್ರಾಪಗೆಂಡಾ.
  • ಭಾರತದ ವಿರುದ್ಧ ಪ್ರತಿಭಟಿಸಲು ರೈತ ಮುಖಂಡರಿಗೆ ಆಫರ್.
  • ಸಂಸತ್ತಿನ ಮೇಲೆ ಖಾಲಿಸ್ತಾನಿ ಬಾವುಟ ಹಾರಿಸಿ: SFJ
Farm Laws: 'ಸಂಸತ್ತಿನ ಮೇಲೆ ಖಾಲಿಸ್ತಾನಿ ಧ್ವಜ ಹಾರಿಸಿ, $125,000 ಬಹುಮಾನ ನೀಡುತ್ತೇವೆ' title=
Farm Laws (File Photo)

ಜಿನೀವಾ: SFJ Offer To SKM - ಖಲಿಸ್ತಾನಿ ಸಂಘಟನೆ ಸಿಖ್ ಫಾರ್ ಜಸ್ಟಿಸ್ (SJF) ತನ್ನ ಭಾರತ ವಿರೋಧಿ ಚಟುವಟಿಕೆಗಳಿಂದ ಹಿಂದಕ್ಕೆ ಸರಿಯುವ ಮಾತೆ ಎತ್ತುತ್ತಿಲ್ಲ.  ಇತ್ತೀಚಿನ ಪ್ರಕರಣದಲ್ಲಿ, ದೇಶದಲ್ಲಿ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Mdi) ಘೋಷಿಸಿದ ಬಳಿಕ, ಖಾಲಿಸ್ತಾನಿ ರೈತ ಮುಖಂಡರುಗಳಿಗೆ ಚಳಿಗಾಲದ ಅಧಿವೇಶನದ ಆರಂಭದಲ್ಲಿ ಸಂಸತ್ತನ್ನು ಘೇರಾವ್ ಹಾಕುವ ಮೂಲಕ ಮತ್ತು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಆಮೀಷವೋಡ್ಡಿದ್ದಾರೆ. ರಾಷ್ಟ್ರರಾಜಧಾನಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ (Farmers Protest) ನಡೆಸುತ್ತಿರುವ ರೈತ ಮುಖಂಡರನ್ನು 'ದೆಗ್ ತೇಗ್ ಫತೇಹ್' ರ್ಯಾಲಿಯನ್ನು (Deg Teg Fateh Rally) ಕೈಗೊಳ್ಳಲು ಸಂಘಟನೆ ಕರೆ ನೀಡಿದೆ.

ಕೋಟಿ ರೂ.ಗಳ ಆಮೀಷ 
ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ಕುಳಿತಿರುವ ಈ ಸಂಘಟನೆಯ ಜನರು ನಮ್ಮ ಪಂಜಾಬ್ ಅನ್ನು ದೇಶದಿಂದ ಬೇರ್ಪಡಿಸುವ ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ಈ ಜನರು ಹಗಲಿರುಳು ಭಯೋತ್ಪಾದಕರಂತಹ ಚಟುವಟಿಕೆ ನಡೆಸಲು ಸಂಚು ರೂಪಿಸುತ್ತಿದ್ದಾರೆ. ಈ ಸಂಬಂಧವಾಗಿ, ಈಗ SFJ 29 ನವೆಂಬರ್ 2021 ರಂದು ಸಂಸತ್ತಿನ ಮೇಲೆ  ಖಲಿಸ್ತಾನ್ (Siege Parliament) ಧ್ವಜವನ್ನು ಹಾರಿಸಲು 125,000 US ಡಾಲರ್‌ಗಳನ್ನು ಅಂದರೆ ಸುಮಾರು ಒಂದು ಕೋಟಿ ರೂಪಾಯಿಗಳನ್ನು ಆಮೀಷವೊಡ್ಡಿದೆ.

ಗುರುಪತ್ವಂತ್ ಸಿಂಗ್ ಪನ್ನುವಿನ ದ್ವೇಷಪೂರಿತ 
ಜಿನೀವಾದಿಂದ ಮಾಡಲಾಗಿರುವ ವೀಡಿಯೊ ಸಂದೇಶದಲ್ಲಿ, SFJ ಕೌನ್ಸಿಲರ್ ಗುರುಪತ್‌ವಂತ್ ಸಿಂಗ್ ಪನ್ನು (Gurpatwant Singh Pannun), 'ಭಾರತದ ಸ್ವಾತಂತ್ರ್ಯ ಅಭಿಯಾನದ ಸಮಯದಲ್ಲಿ ಭಗತ್ ಸಿಂಗ್ ಸಂಸತ್ತಿನ ಮೇಲೆ ಬಾಂಬ್ ದಾಳಿ ನಡೆಸಿದ್ದರು. ಆದರೆ ನಾವು ರೈತರಿಂದ ಪಂಜಾಬ್‌ನ ಸ್ವಾತಂತ್ರ್ಯಕ್ಕಾಗಿ ಖಲಿಸ್ತಾನ್ ಧ್ವಜವನ್ನು ಎತ್ತುವಂತೆ ಕೇಳಿಕೊಳ್ಳುತ್ತಿದ್ದೇವೆ' ಎಂದು ಹೇಳಿದ್ದಾನೆ.

ಇದನ್ನೂ ಓದಿ-ನವೆಂಬರ್ 24 ರಂದು ಕೃಷಿ ಕಾನೂನುಗಳನ್ನು ಹಿಂಪಡೆಯಲು ಅನುಮೋದನೆ ನೀಡುವ ಸಾಧ್ಯತೆ

ಯುಎನ್ ಮಾನವ ಹಕ್ಕುಗಳ ದಿನಾಚರನೆಗೂ ಮೊದಲು ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ
ಡಿಸೆಂಬರ್ 10 ರಂದು ಜಿನೀವಾದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ದಿನಾಚರಣೆಯ ಮೊದಲು ತಮ್ಮ ಪರವಾಗಿ ವಾತಾವರಣವನ್ನು ಸೃಷ್ಟಿಸಲು ಸಿಖ್ ಫಾರ್ ಜಸ್ಟಿಸ್ ಕಾರ್ಯಕರ್ತರು ಈ ಕಸರತ್ತನ್ನು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮತದಾನ ನಡೆಸಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಕೇಳಿ ಬರುತ್ತಿತ್ತು. PRC ಯ ಮೇಲ್ವಿಚಾರಣೆಯಲ್ಲಿ ಸಭೆ ನಡೆಯಬೇಕಿದೆ.  ಅಕ್ಟೋಬರ್ 31 ರಂದು ಲಂಡನ್‌ನಲ್ಲಿ SFJ ನಿಂದ ಇದೇ ರೀತಿಯ ಮತದಾನವನ್ನು ನಡೆಸಲಾಗಿತ್ತು. ಆದರೆ ನಂತರ ಅದೊಂದು  ಫ್ಲಾಪ್ ಶೋ ಎಂದು ಸಾಬೀತಾಗಿದೆ. 

ಇದನ್ನೂ ಓದಿ-Farm Laws Withdrawn: MSP Guarantee ಸಿಗುವವರೆಗೆ ಹೋರಾಟ ಮುಂದುವರೆಯಲಿದೆ, ಸಿಂಘು ಬಾರ್ಡರ್ ನಿಂದ ರೈತರ ಘೋಷಣೆ

ಪ್ರಧಾನಿಗೆ ಬೇಡಿಕೆ ಇಟ್ಟ SKM
ಮತ್ತೊಂದೆಡೆ, ಭಾರತದ ರೈತರ ಸಂಘಟನೆಯಾದ ಯುನೈಟೆಡ್ ಕಿಸಾನ್ ಮೋರ್ಚಾ (SKM) ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದ್ದು, ಸುದೀರ್ಘ ಮಾತುಕತೆಗೆ ಮುಂದುವರಿಯುವ ಮೊದಲು ಆರು ಷರತ್ತುಗಳನ್ನು ಹಾಕಿದೆ. ರೈತರು ಈ 6 ವಿಷಯಗಳನ್ನು ಚರ್ಚಿಸಲು ಬಯಸುತ್ತಾರೆ, ಇದರಲ್ಲಿ ಎಲ್ಲಾ ರೈತರಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿಪಡಿಸುವ ಕಾನೂನು ಒಳಗೊಂಡಿದೆ.

ಇದನ್ನೂ ಓದಿ-750 ಮೃತ ರೈತರ ಕುಟುಂಬಗಳಿಗೆ 3 ಲಕ್ಷ ರೂ.ಪರಿಹಾರ ಘೋಷಿಸಿದ ತೆಲಂಗಾಣ ಸಿಎಂ ಕೆಸಿಆರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News