Oxygen ಕೊರತೆಯಿಂದಾಗಿ ಭಯಪಡಬೇಡಿ, ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಸಿಲಿಂಡರ್‌ ತಲುಪಿಸಲಿದೆ

Oxygen Cylinders: ಸರಬರಾಜಿಗೆ ಸಹಾಯ ಮಾಡಲು ಖಾಲಿ ಆಮ್ಲಜನಕ ಸಿಲಿಂಡರ್‌ಗಳನ್ನು ದಾನ ಮಾಡುವಂತೆ ದೆಹಲಿ ಸರ್ಕಾರ ಮನವಿ ಮಾಡಿದೆ. ರಾಜ್‌ಘಾಟ್ ಡಿಟಿಸಿ ಬಸ್ ಡಿಪೋವನ್ನು ಕೇಂದ್ರವನ್ನಾಗಿ ಮಾಡಲಾಗಿದ್ದು, ಅಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ದಾನ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಜನರು 011-23270718 ಸಂಖ್ಯೆಗೆ ಕರೆ ಮಾಡಬಹುದು.

Written by - Yashaswini V | Last Updated : May 6, 2021, 12:44 PM IST
  • ಹೋಂ ಕ್ವಾರೆಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳಿಗೆ ಆಮ್ಲಜನಕವನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ
  • ಆಮ್ಲಜನಕ ಸಿಲಿಂಡರ್ ಪಡೆಯುವುದು ಹೇಗೆ?
  • ಅದಕ್ಕಾಗಿ ನೋಂದಾಯಿಸುವುದು ಹೇಗೆ ಎಂದು ತಿಳಿಯಿರಿ
Oxygen ಕೊರತೆಯಿಂದಾಗಿ ಭಯಪಡಬೇಡಿ, ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಸಿಲಿಂಡರ್‌ ತಲುಪಿಸಲಿದೆ title=
How to get Oxygen Cylinder

ನವದೆಹಲಿ: ದೇಶದ ರಾಷ್ಟ್ರ ರಾಜಧಾನಿಯಲ್ಲಿ ಹೋಂ ಕ್ವಾರೆಂಟೈನ್‌ನಲ್ಲಿರುವ  ಕೊರೊನಾವೈರಸ್ ಸೋಂಕಿತ ಜನರಿಗೆ ಸರ್ಕಾರವು ಮನೆಯಲ್ಲಿ ತುರ್ತು ಆಮ್ಲಜನಕವನ್ನು (Emergency Oxygen) ತಲುಪಿಸಲು ಆಮ್ಲಜನಕ ಪೂಲ್ ಅನ್ನು ರಚಿಸಲಿದೆ. ಡಿಎಂ ಸ್ವತಃ ಆಮ್ಲಜನಕ ಪೂಲ್ (Oxygen Pool) ಅನ್ನು ನೋಡಿಕೊಳ್ಳಲಿದೆ.

ಆಮ್ಲಜನಕ ಸಿಲಿಂಡರ್ ಪಡೆಯುವುದು ಹೇಗೆ?
ಆರೋಗ್ಯ ಇಲಾಖೆಯು ದೆಹಲಿಯ ಪ್ರತಿ ಜಿಲ್ಲೆಗೆ 20 ಆಮ್ಲಜನಕ ಸಿಲಿಂಡರ್‌ಗಳ ಕೋಟಾ ನೀಡಿದೆ. ಡಿಎಂ ಹೋಂ ಕ್ವಾರೆಂಟೈನ್‌ನಲ್ಲಿ (Home Quarantine) ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಯ ಆರೋಗ್ಯ ಪರಿಸ್ಥಿತಿಯನ್ನು ಗಮನಿಸಿ ಅವರಿಗೆ ಮನೆಯಲ್ಲಿ ಆಮ್ಲಜನಕವನ್ನು ನೀಡಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುತ್ತಾರೆ. 

ಆಕ್ಸಿಜನ್ ಸಿಲಿಂಡರ್ ಅನ್ನು ಮನೆ ಬಾಗಿಲಿಗೇ ತಲುಪಿಸಲಾಗುತ್ತದೆ:
ಈ ಸಮಯದಲ್ಲಿ ದೆಹಲಿಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ರೋಗಿಗಳು ಹೋಂ ಕ್ವಾರೆಂಟೈನ್‌ನಲ್ಲಿದ್ದಾರೆ. ದೇಹದಲ್ಲಿ ಆಮ್ಲಜನಕದ (Oxygen) ಮಟ್ಟ ಕೊರತೆಯಿದ್ದರೆ, ಎಲ್ಲರೂ ಆಸ್ಪತ್ರೆಗೆ ಹೋಗುತ್ತಾರೆ, ಆಗ ದಟ್ಟಣೆ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೋನಾ ರೋಗಿಗಳಿಗೆ ಆಗತ್ಯವಿದ್ದರೆ ಆಮ್ಲಜನಕ ಸಿಲಿಂಡರ್ ಅವರ ಮನೆ ಬಾಗಿಲಿಗೇ ತಲುಪಿಸಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ - Covid precautions: ಕರೋನಾ ತಪ್ಪಿಸಲು ಆಯುಷ್ ಸಚಿವಾಲಯದ ಈ ಮುನ್ನೆಚ್ಚರಿಕಾ ಕ್ರಮ ಅನುಸರಿಸಿ

ಸರಬರಾಜಿಗೆ ಸಹಾಯ ಮಾಡಲು ಖಾಲಿ ಆಮ್ಲಜನಕ ಸಿಲಿಂಡರ್‌ಗಳನ್ನು ದಾನ ಮಾಡುವಂತೆ ದೆಹಲಿ ಸರ್ಕಾರ ಮನವಿ ಮಾಡಿದೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಆಶಿಶ್ ಕುಂದ್ರಾ ಮಾತನಾಡಿ, ರಾಜ್‌ಘಾಟ್ ಡಿಟಿಸಿ ಬಸ್ ಡಿಪೋವನ್ನು ಕೇಂದ್ರವನ್ನಾಗಿ ಮಾಡಲಾಗಿದ್ದು, ಅಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ದಾನ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಜನರು 011-23270718 ಸಂಖ್ಯೆಗೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.

ನೋಂದಾಯಿಸುವುದು ಹೇಗೆ?
ಹೋಂ ಕ್ವಾರೆಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೋನಾ ರೋಗಿಗಳು ದೆಹಲಿ ಸರ್ಕಾರದ  (Delhi Govt) ಪೋರ್ಟಲ್ www.delhi.gov.in ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಆಕ್ಸಿಜನ್ ಸಿಲಿಂಡರ್ ಪಡೆಯಬಹುದು. ನೋಂದಣಿಗಾಗಿ ಫೋಟೋ, ಆಧಾರ್ ಕಾರ್ಡ್, ಗುರುತಿನ ಚೀಟಿ ಮತ್ತು ಕರೋನಾ ಪರೀಕ್ಷಾ ವರದಿ ಅಗತ್ಯವಿದೆ. ಸಿಟಿ ಸ್ಕ್ಯಾನ್ ಮಾಡಿದರೆ, ಅದರ ವರದಿಯನ್ನು ಪೋರ್ಟಲ್‌ನಲ್ಲಿ ಸಹ ಅಪ್‌ಲೋಡ್ ಮಾಡಬಹುದು.

ಇದನ್ನೂ ಓದಿ-  Corona vaccine: ಶಾಲೆ ತೆರೆಯುವ ಮೊದಲು ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಲು ತಯಾರಿ

ಸಿಲಿಂಡರ್ ಅನ್ನು ರೀಫಿಲ್ ಮಾಡಬೇಕು:
ಪೋರ್ಟಲ್ನಲ್ಲಿ ನೋಂದಣಿ ಮಾಡಿದ ನಂತರ, ಡಿಎಂ ಕೋವಿಡ್ ರೋಗಿಗೆ ಆಮ್ಲಜನಕ ಸಿಲಿಂಡರ್ಗಳನ್ನು ಒದಗಿಸುತ್ತದೆ. ಅಗತ್ಯವಿದ್ದರೆ, ರೀಫಿಲ್ ಘಟಕದಿಂದ ಸಿಲಿಂಡರ್ ಅನ್ನು ಪುನಃ ತುಂಬಿಸಲು ಪಾಸ್ ಸಹ ನೀಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News